Advertisement
ನಗರ ಪ್ರದೇಶದಲ್ಲಿ ಸ್ವಚ್ಛತ ಸಿಬಂದಿ ಮೂಲಕ ಶೌಚಾಲಯಗಳನ್ನು ಸ್ವಚ್ಛ ಮಾಡಿಸಲಾಗುತ್ತದೆ. ಆದರೆ ಗ್ರಾಮೀಣ ಭಾಗದಲ್ಲಿ ಸ್ವಚ್ಛತ ಸಿಬಂದಿ ಸಿಗುವುದಿಲ್ಲ. ಹೀಗಾಗಿಯೇ ಬಹುತೇಕ ಶಾಲೆಗಳ ಮುಖ್ಯಶಿಕ್ಷಕರಿಗೆ ಶೌಚಾಲಯ ಶುಚಿತ್ವವೇ ಕಗ್ಗಂಟಾಗಿದೆ. ಸರಕಾರದಿಂದ ನಿರ್ವಹಣ ವೆಚ್ಚವು ವಿದ್ಯಾರ್ಥಿ ಸಂಖ್ಯೆಯ ಆಧಾರದಲ್ಲಿ ವಾರ್ಷಿಕವಾಗಿ ಎರಡು ಅಥವಾ ಮೂರು ಕಂತಿನಲ್ಲಿ ಬರುತ್ತದೆ. ಬಂದ ಅನುದಾನವನ್ನು ಸ್ವಚ್ಛತೆಗಾಗಿಯೇ ಬಳಸಲು ಸಾಧ್ಯವಿಲ್ಲ. ವಿದ್ಯುತ್ ಬಿಲ್, ನೀರಿನ ಬಿಲ್ ಹೀಗೆ ಹಲವು ವಿಧವಾಗಿ ವಿನಿಯೋಗಿಸಬೇಕಾಗುತ್ತದೆ.
ಖಾಸಗಿ ಶಾಲೆಗಳ ಮಾದರಿಯಲ್ಲಿ ಪ್ರತೀ ಸರಕಾರಿ ಶಾಲೆಗಳಲ್ಲೂ ಸ್ವಚ್ಛತೆಗೆ ಪ್ರತ್ಯೇಕ ಸಿಬಂದಿ ನೇಮಕ ಮಾಡಬೇಕು. ಸರಕಾರವೇ ಈ ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಸ್ವತ್ಛತೆ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ಇನ್ನಷ್ಟು ಜಟಿಲವಾಗಲಿದೆ. ವಿದ್ಯಾರ್ಥಿಗಳಿಗೆ ಸ್ವಚ್ಛತೆಗೆ ಬಗ್ಗೆ ಅರಿವು ಮೂಡಿಸುವ ಕಾರ್ಯ ಆಗುತ್ತಿದೆ. ಆದರೆ ನಿತ್ಯವೂ ನೂರಾರು ವಿದ್ಯಾರ್ಥಿಗಳು ಶೌಚಾಲಯ ಬಳಸಿದ ಅನಂತರದಲ್ಲಿ ಸ್ವಚ್ಛ ಮಾಡಬೇಕಾಗುತ್ತದೆ. ಸ್ವಚ್ಛತೆ ಸಹಿತ ವಿವಿಧ ನಿರ್ವಹಣೆಗೆ ಸರಕಾರದಿಂದ ಪ್ರತೀ ಶಾಲೆಗೆ ಅನುದಾನ ಬರುತ್ತಿದ್ದರೂ ಏಕಕಾಲದಲ್ಲಿ ಬರುವುದಿಲ್ಲ. ವರ್ಷದಲ್ಲಿ 2 ಅಥವಾ 3 ಕಂತಿನಲ್ಲಿ ಬರುತ್ತದೆ. ವಾರ್ಷಿಕ 5ರಿಂದ 10 ಸಾವಿರ ರೂ. ನಿರ್ವಹಣೆ ವೆಚ್ಚ ಬಂದರೆ ಶೌಚಾಲಯ ಸ್ವಚ್ಛತ ಸಿಬಂದಿಗೆ ವೇತನ ನೀಡಲು ಇದು ಸಾಧ್ಯವೇ ಆಗುವುದಿಲ್ಲ. ಹೀಗಾಗಿ ಸರಕಾರ ಅನುದಾನದ ಮೊತ್ತವನ್ನು ಹೆಚ್ಚಿಸಬೇಕು ಎಂದು ಶಾಲೆಗಳಿಂದ ಆಗ್ರಹ ಕೇಳಿ ಬರುತ್ತಿದೆ.
Related Articles
-ದಯಾನಂದ ನಾಯಕ್, ಕೆ. ಗಣಪತಿ,
ಡಿಡಿಪಿಐ, ಉಡುಪಿ, ದ.ಕ.
Advertisement