Advertisement

ನಡಾಲ್‌ -ಫೆಡರರ್‌ ಡಬಲ್ಸ್‌  ಗೆಲುವು!

11:30 AM Sep 25, 2017 | Team Udayavani |

ಪ್ರಾಗ್‌ (ಜೆಕ್‌ ರಿಪಬ್ಲಿಕ್‌): ಟೆನಿಸ್‌ ಅಂಕಣದಲ್ಲಿ ಎದುರಾಳಿಗಳಾಗಿ ಕಾದಾಡುತ್ತಿದ್ದ ವಿಶ್ವ ಟೆನಿಸ್‌ ದಿಗ್ಗಜರಾದ ರೋಜರ್‌ ಫೆಡರರ್‌ ಮತ್ತು ರಫೆಲ್‌ ನಡಾಲ್‌ ಪ್ರೇಕ್ಷಕರಿಗೆ ಅನಿರೀಕ್ಷಿತ ಅಚ್ಚರಿಯೊಂದನ್ನು ನೀಡಿದ್ದಾರೆ. ಸಿಂಗಲ್ಸ್‌ನಲ್ಲಿ ನಿಷ್ಣಾತರಾದ ಇವರಿಬ್ಬರೂ “ಲೇವರ್‌ ಕಪ್‌ ಟೆನಿಸ್‌’ನಲ್ಲಿ ಜತೆಯಾಗಿ ಡಬಲ್ಸ್‌ ಆಡಿದ್ದಾರೆ. ಇವರು ಜತೆಯಾಗಿ ಎದುರಾಳಿಯನ್ನು ಸೋಲಿಸುವ ದೃಶ್ಯ ಭಾರೀ ಸದ್ದು ಮಾಡಿದೆ. ಆದರೆ ಈ ಜತೆಯಾಟ ಮುಂದುವರಿಯುತ್ತದೆ ಎಂಬ ನಿರೀಕ್ಷೆ ಬೇಡ ಎನ್ನುವ ಮೂಲಕ ಹಲವು ಊಹಾಪೋಹಗಳಿಗೆ ಈಗಲೇ ಉತ್ತರ ನೀಡಿದ್ದಾರೆ.

Advertisement

ರವಿವಾರ ನಡೆದ ಡಬಲ್ಸ್‌ನಲ್ಲಿ ಯೂರೋಪ್‌ ತಂಡದ ಪರ ಆಡಿದ ನಡಾಲ್‌-ಫೆಡರರ್‌ 6-4, 1-6, 10-5ರಿಂದ ವಿಶ್ವ ತಂಡದಲ್ಲಿ ಆಡಿದ ಅಮೆರಿಕದ ಸ್ಯಾಮ್‌ ಕೆರ್ರಿ-ಜಾಕ್‌ ಸಾಕ್‌ ವಿರುದ್ಧ ಜಯ ಸಾಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next