Advertisement
ಇಂಟರ್ ಮಿಡಿಯೇಟ್ ವರೆಗೆ ಅಭ್ಯಾಸ ಮಾಡಿರುವ ಶಿವಶಂಕರಪ್ಪನವರ ಲೆಕ್ಕಾಚಾರ, ವ್ಯವಹಾರ ಚತುರತೆಗೆ ಚೌಕಿಪೇಟೆಯ ಬಕ್ಕೇಶ್ವರ ದೇವಸ್ಥಾನ ಪಕ್ಕದಲ್ಲಿ ಸಣ್ಣ ಅಂಗಡಿ ಪ್ರಾರಂಭಿಸಿ, ಈಗ ವಿದೇಶಗಳಿಗೆ ವಹಿವಾಟು ವಿಸ್ತರಿಸಿರುವುದು ಸಾಕ್ಷಿ. ಈಗ ಆಗರ್ಭ ಶ್ರೀಮಂತರಾಗಿರುವ ಶಾಮನೂರು ಶಿವಶಂಕರಪ್ಪ ,ಚಿಕ್ಕ ವಯಸ್ಸಿನಲ್ಲಿ ಬಡತನವನ್ನೇ ಹಾಸು, ಹೊದ್ದು ಮಲಗಿದವರು.
Related Articles
Advertisement
ಈಗ ಅದೇ ಟಿವಿ ಸ್ಟೇಷನ್ ಕೆರೆ ದಾವಣಗೆರೆ ನಗರದ ಪ್ರಮುಖ ನೀರಿನ ಮೂಲ. ಈಗ 500 ಕೋಟಿ ವೆಚ್ಚದ ಜಲಸಿರಿ… ಯೋಜನೆ ಜಾರಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಖಾಯಂ ಖಜಾಂಚಿಯಾಗಿರುವ ಶಾಮನೂರು ಶಿವಶಂಕರಪ್ಪ ಸಂಸದರಾಗಿಯೂ ಸೇವೆ ಸಲ್ಲಿಸಿದ್ದಾರೆ. ರಾಜಕೀತ ಕ್ಷೇತ್ರದಲ್ಲಿ ಅಕ್ಷರಶಃ ಅಜಾತಶತೃವಾಗಿರುವ ಅವರು ಎಲ್ಲಾ ಪಕ್ಷದ ಮುಖಂಡರೊಂದಿಗೆ ಅವಿನಾಭ ಸಂಬಂಧ ಹೊಂದಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಾವು ಶಾಮನೂರು ಶಿವಶಂಕರಪ್ಪನವರ ಅಭಿಮಾನಿ ಎಂದು ಹೇಳಿಕೊಂಡಿರುವುದು ಅವರ ಗೆಳೆತನದ ಪರಿಗೆ ಸಾಕ್ಷಿ. ಎಲ್ಲರಿಂದಲೂ ಪೀÅತಿಯ ಶಂಕರಣ್ಣ.. ಎಂದೇ ಕರೆಯಲ್ಪಡುವ ಶಾಮನೂರು ಶಿವಶಂಕರಪ್ಪ ಅವರಿಗೆ ಸಚಿವ ಸ್ಥಾನಮಾನ ತಡವಾಗಿ ದೊರೆತಿತ್ತು. ಆದರೂ ಅವರಿಗೆ ತೋಟಗಾರಿಕೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಎರಡು ಖಾತೆ ಸಿಕ್ಕಿದ್ದವು.
ಎರಡೂ ಖಾತೆಯನ್ನು ಉತ್ತಮವಾಗಿ ನಿರ್ವಹಿಸಿದರು. ದಾವಣಗೆರೆಯಲ್ಲಿ 10 ಕೋಟಿ ವೆಚ್ಚದಲ್ಲಿ ಗಾಜಿನಮನೆ, ತಾರಸಿ ಕೈತೋಟದಂತಹ ವಿನೂತನ ಯೋಜನೆ, 10 ಕೋಟಿ ವೆಚ್ಚದ ಅತ್ಯಾಧುನಿಕ ಸೌಲಭ್ಯದ ಜಾನುವಾರು ಮಾರುಕಟ್ಟೆ, ಕೃಷಿ ಉತ್ಪನ್ನ ಮಾರುಕಟ್ಟೆ ಅಭಿವೃದ್ಧಿಗೆ ಮುಂತಾದ ಜನಪರ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ.
ಕಳೆದ ವರ್ಷ ಜನ್ಮದಿನದ ಆಸುಪಾಸಿನಲ್ಲೇ ಸಚಿವ ಸ್ಥಾನ ಕೈತಪ್ಪಿದರೂ ಬೇಸರಗೊಳ್ಳದ ಅವರು, ತಾವು ನಿರ್ವಹಿಸಿದ ಸಚಿವ ಖಾತೆಗಳೇ ತಮ್ಮ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್‌ಗೆ ದಕ್ಕಿದ್ದು ವಿಶೇಷ. 87ರಲ್ಲೂ ಅವರ ನೆನಪಿನ ಶಕ್ತಿ ಎಲ್ಲರನ್ನೂ ದಂಗು ಬಡಿಸುವಂತಿದೆ. ಈಗಲೂ ಚುರುಕು, ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಶಂಕರಣ್ಣ ನೂರ್ಕಾಲ ಕಾಲ ಆರೋಗ್ಯಯುತ ಜೀವನ ನಡೆಸುವ ಮೂಲಕ ದಾವಣಗೆರೆ ಅಭಿವೃದ್ಧಿಗೆ ಶ್ರಮಿಸುವಂತಾಗಲಿ…