Advertisement

Deepavali 2024: ಇಂದಿನಿಂದ ದೀಪಾವಳಿ ಸಂಭ್ರಮ

12:49 AM Oct 30, 2024 | Team Udayavani |

ಉಡುಪಿ/ಮಂಗಳೂರು: ಬೆಳಕಿನ ಹಬ್ಬ ದೀಪಾವಳಿಯನ್ನು ಕರಾವಳಿಯಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಇಲ್ಲಿನ ಮನೆ ಮನೆಗಳಲ್ಲೂ ಆಚರಣ ಕ್ರಮದಂತೆ ಮೂರು ದಿನಗಳಲ್ಲಿ ವಿಶೇಷ ವಿಧಿಗಳನ್ನು ಅನುಸರಿಸಲಾಗುತ್ತದೆ.

Advertisement

ದೇವಸ್ಥಾನಗಳಲ್ಲಿಯೂ ಆಚರಣೆ, ದೀಪೋತ್ಸವ, ವಿಶೇಷ ಪೂಜೆ ಇತ್ಯಾದಿ ಇರಲಿದೆ. ಅ. 30ರ ಸಂಜೆ ಹಂಡೆಗೆ ನೀರು ತುಂಬಿಸುವ ಶಾಸ್ತ್ರ ನಡೆಯಲಿದೆ.

ಅ. 31ರ ಬೆಳಗ್ಗೆ 5.17ಕ್ಕೆ ತೈಲಭ್ಯಂಗ, ಅದೇ ದಿನ ಸಂಜೆ ಮೂಲ್ಕಿ ಶಾಂಭವಿ ನದಿ ಉತ್ತರದಲ್ಲಿ ದೀಪಾವಳಿ (ಗದ್ದೆ, ಮನೆಗಳಲ್ಲಿ ದೀಪ ಇಡುವುದು), ನ. 1ರ ಸಂಜೆ ಮೂಲ್ಕಿ ಶಾಂಭವಿ ನದಿ ದಕ್ಷಿಣದ ಪ್ರದೇಶಗಳಲ್ಲಿ ದೀಪಾವಳಿ, ನ. 2ರ ಬೆಳಗ್ಗೆ ಸೂರ್ಯೋದಯ 6.25ರಿಂದ 9.40ರ ಒಳಗೆ/11.15ರ ಅನಂತರ ಗೋಪೂಜೆ ನೆರವೇರಲಿದೆ. ಅ.31 ಹಾಗೂ ನ.2ರ ಶುಭಮುಹೂರ್ತದಲ್ಲಿ ಅಂಗಡಿಪೂಜೆ, ಲಕ್ಷ್ಮೀಪೂಜೆ ಇತ್ಯಾದಿ ನಡೆಸಲಿದ್ದಾರೆ.

ಹಬ್ಬದ ಆಚರಣೆಗಾಗಿ ಖರೀದಿ ಪ್ರಕ್ರಿಯೆ ಜೋರಾಗಿ ನಡೆಯುತ್ತಿದೆ. ಮಣ್ಣಿನ ಹಣತೆ ಹಾಗೂ ಪರಿಸರ ಸ್ನೇಹಿ ಗೂಡುದೀಪ ಇತ್ಯಾದಿಗಳನ್ನು ಗ್ರಾಹಕರು ಖರೀದಿಸುವುದು ಎಲ್ಲೆಡೆ ಕಂಡು ಬರುತ್ತಿದೆ. ಬುಧವಾರ ಸಂಜೆ ವೇಳೆಗೆ ಬಹುತೇಕ ಮನೆಗಳಲ್ಲಿ ಗೂಡು ದೀಪ ಅಳವಡಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next