Advertisement
ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ 149ನೇ ಜನ್ಮ ದಿನಾಚರಣೆ ಪ್ರಯುಕ್ತ ಗುರುವಾರ ಗುಜರಾತ್ನ ಏಕತಾ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮೋದಿ, ದೇಶದ ಒಳಗೆ ಮತ್ತು ಹೊರಗೆ ದೇಶವನ್ನು ವಿಭಜಿಸಲು ಇಂಥ ಶಕ್ತಿಗಳು ಕೆಲಸ ಮಾಡುತ್ತಿವೆ. ಅಂಥ ನಗರ ನಕ್ಸಲರ ವಿರುದ್ಧ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ದೇಶದ ಪ್ರಭಾವ, ವರ್ಚಸ್ಸು ಹೆಚ್ಚಾಗುತ್ತಿದೆ. ಅದನ್ನು ಸಹಿಸಲು ಕೆಲವು ಶಕ್ತಿಗಳಿಗೆ ಸಾಧ್ಯವಾಗುತ್ತಿಲ್ಲ ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ.
Related Articles
Advertisement
ಏಕ ಚುನಾವಣೆ ಶೀಘ್ರ ನನಸು:“ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆ ಶೀಘ್ರ ನನಸಾಗಲಿದೆ ಅದಕ್ಕೆ ಸಂಬಂಧಿಸಿದ ಮಸೂದೆಯನ್ನು ಸಂಸತ್ನಲ್ಲಿ ಮಂಡಿಸಲಾಗುತ್ತದೆ. ನಾಗರಿಕ ಸಂಹಿತೆಯೂ ಅನುಷ್ಠಾನಗೊಳ್ಳಲಿದೆ ಎಂದು ಮೋದಿ ಹೇಳಿದ್ದಾರೆ. ಜತೆಗೆ ಜಮ್ಮು ಕಾಶ್ಮೀರದ ಅಭಿ ವೃದ್ಧಿಗೆ ಮಾರಕವಾಗಿದ್ದ 370ನೇ ವಿಧಿಯನ್ನು ಮುಂದೆ ಎಂದಿಗೂ ಜಾರಿ ಮಾಡಲು ಸಾಧ್ಯವೇ ಆಗದಂತೆ ಶಾಶ್ವತ ಸಮಾಧಿ ಮಾಡಿದ್ದೇವೆ ಎಂದಿದ್ದಾರೆ.