Advertisement

ಆರೋಗ್ಯ ವಿಮೆ ಮೊತ್ತ 5ಲಕ್ಷ ರೂ.ಗೆ ಏರಿಸಿದ ತಮಿಳು ನಾಡು ಸರಕಾರ

04:59 PM Nov 30, 2018 | udayavani editorial |

ಚೆನ್ನೈ : 1.58 ಕೋಟಿ ಕುಟುಂಬಕ್ಕೆ ಪ್ರಯೋಜನವಾಗುವ ರೀತಿಯಲ್ಲಿ ತಮಿಳು ನಾಡು ಸರಕಾರ ತಲಾ ಕುಟುಂಬದ ಆರೋಗ್ಯ ವಿಮೆಯನ್ನು ಎರಡು ಲಕ್ಷ ರೂ.ಗಳಿಂದ ಐದು ಲಕ್ಷ ರೂ.ಗಳಿಗೆ ಏರಿಸಿದೆ ಎಂದು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಇಂದು ಶುಕ್ರವಾರ ತಿಳಿಸಿದ್ದಾರೆ.

Advertisement

ಹಿಂದಿನ ಡಿಎಂಕೆ ಸರಕಾರ ಅನುಷ್ಠಾನಿಸಿದ್ದ ಯೋಜನೆ ಇದಾಗಿದ್ದು 2011ರಲ್ಲಿ ಎಐಎಡಿಎಂಕೆ ಅಧಿಕಾರಕ್ಕೆ ಮರಳಿ ಬಂದ ಬಳಿಕದಲ್ಲಿ ಇದನ್ನು ಸಮಗ್ರಗೊಳಿಸಲಾಯಿತು. ಇದನ್ನು ಅಂದಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರು 2012ರ ಜನವರಿ 11ರಂದು ಆರಂಭಿಸಿದ್ದರು. 2 ಲಕ್ಷ ವಿಮೆಯ 1.58 ಕೋಟಿ ಕಾರ್ಡುಗಳನ್ನು ಅಂದು ಅವರು ವಿತರಿಸಿದ್ದರು. 

ಈ ಕುಟುಂಬ ವಿಮಾ ಯೋಜನೆಯಿಂದ ಈ ತನಕ 26.96 ಲಕ್ಷ ಮಂದಿಗೆ ಲಾಭವಾಗಿದೆ; 5,133.33 ಕೋಟಿ ರೂ. ಪರಿಹಾರವಾಗಿ ನೀಡಲಾಗಿದೆ ಎಂದು ಪಳನಿಸ್ವಾಮಿ ಅವರು ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next