Advertisement

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

08:37 PM Nov 05, 2024 | Team Udayavani |

ದಾವಣಗೆರೆ: ಸಂಬಂಧಿಯ ಹೆಸರಿನಲ್ಲಿ ಇನ್ಸೂರೆನ್ಸ್ ಬಾಂಡ್ ಮಾಡಿಸಿ ಹಣದಾಸೆಗಾಗಿ ಉಸುರುಗಟ್ಟಿಸಿ ಕೊಲೆ ಮಾಡಿದ್ದ ನಾಲ್ವರನ್ನು ದಾವಣಗೆರೆಯ ಆಜಾದ್ ನಗರ ಪೊಲೀಸರು ಕೊಲೆ ನಡೆದ 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ದಾವಣಗೆರೆಯ ಬಂಬೂಬಜಾರ್ ನಿವಾಸಿ ಗಣೇಶ (24), ಹಳೇಚಿಕ್ಕನಹಳ್ಳಿಯ ಅನಿಲ (18), ಶಿವಕುಮಾರ್ (25), ಭಾರತ್ ಕಾಲೋನಿಯ ಮಾರುತಿ (24) ಬಂಧಿತರು.

ನಾಲ್ವರು ಆರೋಪಿಗಳು ನ. 4 ರಂದು ದಾವಣಗೆರೆಯ ಇಮಾಮ್ ನಗರದ ನಿವಾಸಿ ದುಗ್ಗೇಶಿ (32) ಎಂಬಾತನನ್ನು ಕೊಲೆ ಮಾಡಿದ್ದರು.

ಕೊಲೆ ಆರೋಪಿ ಗಣೇಶ್ ತನ್ನ ಸಂಬಂಧಿ ದುಗ್ಗೇಶಿ ಹೆಸರಿನಲ್ಲಿ ದಾವಣಗೆರೆಯ ಖಾಸಗಿ ಬ್ಯಾಂಕ್ ನಲ್ಲಿ ಇನ್ಸೂರೆನ್ಸ್ ಮಾಡಿಸಿದ್ದನು.‌ ದುಗ್ಗೇಶಿಯನ್ನು ಕೊಲೆ ಮಾಡಿದರೆ 40 ಲಕ್ಷ ರೂಪಾಯಿ ಇನ್ಸೂರೆನ್ಸ್ ಹಣ ದೊರೆಯುತ್ತದೆ‌ ಎಂದು ತನ್ನ ಗೆಳೆಯರೊಡಗೂಡಿ ದುಗ್ಗೇಶಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಶವವನ್ನು ಅವನ ಮನೆಗೆ ತಂದು ಹಾಕಿದ್ದರು.

ಪ್ರಕರಣ ದಾಖಲಿಸಿಕೊಂಡ ಆಜಾದ್ ನಗರ ಪೊಲೀಸರು ಆರೋಪಿತರ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯ ಕುಮಾರ ಎಂ. ಸಂತೋಷ್, ಜಿ. ಮಂಜುನಾಥ್, ನಗರ ಉಪ ವಿಭಾಗ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗ ದರ್ಶನದಲ್ಲಿ ವೃತ್ತ ನಿರೀಕ್ಷಕ ಆರ್.ಜಿ. ಅಶ್ವಿನ್ ಕುಮಾರ್ ಸಿಬ್ಬಂದಿಗಳ ತಂಡ ಕೃತ್ಯ ನಡೆದ 24 ಗಂಟೆಯೊಳಗೆ ನಾಲ್ವರನ್ನು ಬಂಧಿಸಿ, ಕೃತ್ಯಕ್ಕೆ ಉಪಯೋಗಿಸಿದ ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದಾರೆ.

Advertisement

ಆರೋಪಿ ಗಣೇಶ್ ಮೃತ ದುಗ್ಗೇಶ್ ಹೆಸರಲ್ಲಿ ದಾವಣಗೆರೆಯ ಖಾಸಗಿ ಬ್ಯಾಂಕ್ ನಲ್ಲಿ ಇನ್ಸೂರೆನ್ಸ್ ಬಾಂಡ್ ಮಾಡಿಸಿದ್ದು, ಕೊಲೆ ಮಾಡಿದರೆ ಬಾಂಡ್ ಮೊತ್ತ 40 ಲಕ್ಷ ರೂಪಾಯಿ ಬರುತ್ತದೆ ಎಂದು  ತನ್ನ ಸ್ನೇಹಿತರ ಜೊತೆ ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ.

ಕ್ಷಿಪ್ರ ಕಾರ್ಯಚರಣೆ ನಡೆಸಿ ಕೊಲೆ ನಡೆದ 24 ಗಂಟೆಯ ಒಳಗಡೆ ಆರೋಪಿತರುಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next