ಉಡುಪಿ: ಪಂಡಿತ ಪರಂಪರೆಗೆ ಪ್ರಸಿದ್ಧಿ ಪಡೆದ ಊರು ಅವಿಭಜಿತ ದ.ಕ. ಜಿಲ್ಲೆ. ಓದುವ ಹವ್ಯಾಸ ಬೆಳೆಸಿಕೊಂಡಾಗ ಮಾತ್ರ ಕಲೆ, ಜ್ಞಾನ ಸಿದ್ಧಿಸಲು ಸಾಧ್ಯವಿದೆ ಎಂದು ಲೇಖಕಿ, ಸಂಶೋಧಕಿ ಬಿ.ಎಂ. ರೋಹಿಣಿ ಹೇಳಿದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಎಂಜಿಎಂ ಕಾಲೇಜು, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿಯ ಆಶ್ರಯದಲ್ಲಿ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಶನಿವಾರ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಮಾಹೆ ಸಹಕುಲಪತಿ ಡಾ| ನಾರಾಯಣ ಸಭಾಹಿತ್ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸಮಿ ತಿಯ ಅಧ್ಯಕ್ಷ ಡಾ| ಬಿ.ಎ. ವಿವೇಕ ರೈ ಅಧ್ಯಕ್ಷತೆ ವಹಿಸಿ, ವಯಸ್ಸು ಹಾಗೂ ಸಾಧನೆಯ ಹಿರಿತನ ಪ್ರತಿಯೊಬ್ಬ ರಿಗೂ ಇರಬೇಕು. ಹಿರಿಯರನ್ನು ಗೌರವಿಸಬೇಕು. ಇದು ಸಾಧನೆಗಷ್ಟೇ ಅಲ್ಲ, ಎಲ್ಲದಕ್ಕೂ ಅನ್ವಯ ಎಂದರು. ಬರವಣಿಗೆ, ಅಧ್ಯಾಪನ ನಿರಂತರ ಪ್ರಕ್ರಿಯೆ. ಬರವಣಿಗೆ ಬದುಕಿನ ಭಾಗ ವಾಗಬೇಕು. ಅಧ್ಯಯನವನ್ನೂ ಕಾಲಕ್ಕೆ ತಕ್ಕ ಹಾಗೆ ಬದಲಾಯಿಸುತ್ತಿರಬೇಕು. ಇದರಿಂದ ವಿವಿಧ ಕ್ಷೇತ್ರಗಳ ಬಗ್ಗೆ ನಮಗೆ ಜ್ಞಾನ ಸಿಗಲು ಸಾಧ್ಯ ಎಂದರು.
ಮುಳಿಯ ಗೋಪಾಲಕೃಷ್ಣ ಭಟ್ ಅವರ “ದೊಡ್ಡವರ ಸಣ್ಣ ಕಥೆಗಳು’ ಕೃತಿಯನ್ನು ಮುಳಿಯ ರಘುರಾಮ ಭಟ್ ಬಿಡುಗಡೆ ಮಾಡಿದರು. ಮುಳಿಯ ರಾಘವಯ್ಯ ಕೃತಿ ಪರಿಚಯ
ಮಾಡಿದರು. ಪ್ರಶಸ್ತಿ ಸಮಿತಿಯ ಪ್ರದಾನ ಕಾರ್ಯದರ್ಶಿ ಮನೋರಮಾ ಎಂ. ಭಟ್, ಲೇಖಕಿ ಶಶಿ ಲೇಖಾ ಬಿ., ಎಂಜಿಎಂ ಕಾಲೇಜು ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ ಉಪಸ್ಥಿತರಿದ್ದರು.
ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ| ಬಿ. ಜಗದೀಶ್ ಶೆಟ್ಟಿ ಪ್ರಸ್ತಾವನೆಗೈದು, ಸ್ವಾಗತಿಸಿದರು. ಎಂಜಿಎಂ ಕಾಲೇಜಿನ ಉಪನ್ಯಾಸಕ ಸುಚಿತ್ ಕೋಟ್ಯಾನ್ ವಂದಿಸಿ, ನಿರೂಪಿಸಿದರು.