ಮೈಸೂರು -ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿರುವುದರಿಂದ ಈ ಕ್ಷೇತ್ರವನ್ನು ತಮಗೇ ಬಿಟ್ಟು ಕೊಡಬೇಕೆಂಬುದು ಜೆಡಿಎಸ್ ಪಟ್ಟು. ಜೆಡಿಎಸ್‌ಗೆಬಿಟ್ಟುಕೊ ಟ್ಟರೆ ತಮ್ಮ ಹಿಡಿತ ತಪ್ಪಬಹುದು ಎಂಬುದು ಸಿದ್ದರಾಮಯ್ಯನವರ ಆತಂಕ.
ಚಿಕ್ಕಬಳ್ಳಾಪುರ – ತಮ್ಮ ಮತ ಬ್ಯಾಂಕ್ ಭದ್ರವಾಗಿರುವುದರಿಂದ ಜೆಡಿಎಸ್‌ಗೆ ಇಲ್ಲಿ ಗೆಲ್ಲುವ ವಿಶ್ವಾಸ. ಆದರೆ, ಇಲ್ಲಿ ಸದ್ಯ ಹಾಲಿ ಸಂಸದರು ಕಾಂಗ್ರೆಸ್‌ನವರಾಗಿರುವುದರಿಂದ ಬಿಟ್ಟು ಕೊಡಲು ಕಾಂಗ್ರೆಸ್ ಸಿದ್ಧ ವಿಲ್ಲ. ತುಮಕೂರು – ಹಾಲಿ ಸಂಸದರ ಬಗ್ಗೆ ಅತೃಪ್ತಿ ಇದ್ದು, ತಮಗೆ ಬಿಟ್ಟುಕೊಡಿ ಎನ್ನುವುದು ಜೆಡಿಎಸ್ ವಾದ. ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ ಎಂಬುದು ಕಾಂಗ್ರೆಸ್ ಪ್ರತಿಪಾದನೆ.
ಅಲ್ಪಸಂಖ್ಯಾರದೂ ನಾಲ್ಕು ಸ್ಥಾನಕ್ಕೆ ಪಟ್ಟು: ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತರು ನಾಲ್ಕು ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಬೆಂಗಳೂರು ಸೆಂಟ್ರಲ್, ಧಾರವಾಡ, ಬೀದರ್, ಮಂಗಳೂರು ಕ್ಷೇತ್ರಗಳನ್ನು ಬಿಟ್ಟು ಕೊಡಬೇಕು. ಮಂಗಳೂರಿನಿಂದ ಕ್ರಿಶ್ಚಿಯನ್ ಸಮುದಾಯಕ್ಕೆ ಅವಕಾಶ ಕೊಟ್ಟು ಉಳಿದ ಮೂರು ಕಡೆ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು ಎಂದು ಹೈಕಮಾಂಡ್‌ಗೆ ಮನವಿ ಮಾಡಲಾಗಿದೆ. ಸಮನ್ವಯ ಸಮಿತಿಗೆ ಆಗಮಿಸಿದ್ದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಸಚಿವ ಜಮೀರ್ ಅಹಮದ್ ನೇತೃತ್ವದ ಮುಸ್ಲಿಂ ಮುಖಂಡರ ನಿಯೋಗ, ಕುಮಾರಕೃಪ ಅತಿಥಿಗೃಹದಲ್ಲಿ ಭೇಟಿ ಮಾಡಿ, ಈ ಕುರಿತು ಮನವಿ ನೀಡಿದೆ. ಅಂತಿಮವಾಗಿ ಬೆಂಗಳೂರು ಸೆಂಟ್ರಲ್ ಹಾಗೂ ಬೀದರ್ ಕ್ಷೇತ್ರಗಳನ್ನು ಬಿಟ್ಟು ಕೊಡಬೇಕಾಗಿ ಬರಬಹುದು ಎಂಬ ಲೆಕ್ಕಾಚಾರವಿದೆ. ಆದರೆ, ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಕಣಕ್ಕಿಳಿಯಲು ಬಿ.ಕೆ.ಹರಿಪ್ರಸಾದ್ ಯತ್ನಿಸುತ್ತಿರುವುದು. ತಮ್ಮ ಪ್ರಭಾವ ಬಳಸಿ ಒತ್ತಡ ಹಾಕುತ್ತಿರುವುದು ಹೈಕಮಾಂಡ್‌ಗೂ ತಲೆನೋವಾಗಿ ಪರಿಣಮಿಸಿದೆ ಎಂದು ಹೇಳಲಾಗಿದೆ.