Advertisement

ಜನರಿಗೆ ಹೊರೆಯಾಗದಂತೆ ಆಸ್ತಿ ತೆರಿಗೆ ಹೆಚ್ಚಿಸಲು ಚಿಂತನೆ

01:21 PM Sep 20, 2020 | Suhan S |

ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಹೊರೆಯಾಗದಂತೆ ಹಾಗೂ ಪಾಲಿಕೆಗೆ ಆದಾಯವೂ ಹೆಚ್ಚಾಗು ವಂತೆ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಬಗ್ಗೆ ಪಾಲಿಕೆ ಹಾಗೂ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ.

Advertisement

ಕೆಎಂಸಿ ಕಾಯ್ದೆಯ ಅನ್ವಯ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ಮೂರು ವರ್ಷಕ್ಕೆ ಒಮ್ಮೆ ಶೇ. 15ರಿಂದ ಕನಿಷ್ಠ ಹಾಗೂ ಶೇ.30ಆಸ್ತಿ ತೆರಿಗೆಹೆಚ್ಚಳ ಮಾಡಬೇಕು ಎಂದಿದ್ದರೂ ಮಾಡಲು ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಶೇ.2ರಷ್ಟು ಭೂಸಾರಿಗೆ ಉಪಕರ ಸಂಗ್ರಹ ಪ್ರಸ್ತಾವನೆಯೂ ಕಳೆದ ಎರಡು ಮೂರು ವರ್ಷಗಳಿಂದ ಕೌನ್ಸಿಲ್‌ನಲ್ಲಿ ಇಡಲಾಗುತ್ತಿತ್ತು. ಅಲ್ಲಿ ನಿರ್ಧಾರವಾಗದ ಕಾರಣ ಇದೀಗ ಈ ಪ್ರಸ್ತಾವನೆಗಳನ್ನು ಆಡಳಿತಾಧಿಕಾರಿಗೌರವ್‌ಗುಪ್ತಾ ಅವರ ಮುಂದೆ ಇಡಲಾಗಿದೆ.

ಆಡಳಿತಾಧಿಕಾರಿಗಳು ಒಪ್ಪಿದರೆ ಸರ್ಕಾರಕ್ಕೆ ಪ್ರಸ್ತಾವನೆ ಸಲಿಸಿ ಅನುಮೋದನೆ ಪಡೆಯಲು ಪಾಲಿಕೆ ಸಜ್ಜಾಗಿದೆ. ಕಸ ಸಂಗ್ರಹ ಹಾಗೂ ವಿಲೇವಾರಿಗೆಂದೇ ಸಾವಿರ ಕೋಟಿ ರೂ. ವೆಚ್ಚವಾಗುತ್ತಿದ್ದು, ಸಾರ್ವಜನಿಕರಿಂದ ವಾರ್ಷಿಕ 45 ಕೋಟಿ ರೂ. ಮಾತ್ರ ಕಸದ ಸೆಸ್‌ ಸಂಗ್ರಹವಾಗುತ್ತಿದೆ. ಖರ್ಚು ಮಾಡುತ್ತಿರುವ ಶೇ.50ರಷ್ಟಾದರೂ ಆದಾಯ ಬರದಿದ್ದರೆ ಜನರಿಗೆ ಸೌಲಭ್ಯ ಕಷ್ಟ ಎಂದು ಆಯುಕ್ತ ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

ವ್ಯಾಲ್ಯೂ ಬೇಸ್ಡ್ ಆಸ್ತಿ ತೆರಿಗೆ ಚಿಂತನೆ: ನಗರದಲ್ಲಿ ವ್ಯಾಲ್ಯೂ ಬೇಸ್ಡ್ (ಆಯಾ ನಗರದ ಆಸ್ತಿ ಮೌಲ್ಯ) ಆಧಾರದ ಮೇಲೆ ಆಸ್ತಿ ತೆರಿಗೆ ಸಂಗ್ರಹ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ. ಅಂದರೆ ನಗರದ ಯಾವ ಭಾಗದಲ್ಲಿ ಭೂಮಿ ಬೆಲೆ ಯಾವ ದರದಲ್ಲಿದೆಯೋ ಆ ಆಧಾರದ ಮೇಲೆ ಆಸ್ತಿ ತೆರಿಗೆ ವಿಧಿಸುವುದಾಗಿದೆ. ಆದರೆ, ಇದು ಜಾರಿಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಒಂದೊಮ್ಮೆ ಈ ಮಾದರಿ ಆಸ್ತಿ ತೆರಿಗೆ ಹೆಚ್ಚಳವಾದರೆ ಈಗ ಇರುವ ಆಸ್ತಿ ತೆರಿಗೆಗಿಂತ ದುಪ್ಪಟ್ಟು ಕರಪಾವತಿ ಮಾಡಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next