Advertisement
ತೋಕೂರು ವಿಶ್ವಬ್ಯಾಂಕ್ ಯೋಜನೆ: 1996-97ರಲ್ಲಿ ರಾಷ್ಟ್ರೀಯ ಕೈಗಾರಿಕಾ ವಿಶ್ಲೇಷಣೆಯ ಅನ್ವಯ ಸರ್ವೆ ನಡೆಸಿ ಮುಂದಿನ 20 ವರ್ಷಗಳಿಗೆ ಕುಡಿಯುವ ನೀರು ಪೂರೈಕೆಯ ದೃಷ್ಟಿಯಿಂದ ವಿಶೇಷ ಯೋಜನೆ ರೂಪಿಸಲಾಗಿತ್ತು. ಗ್ರಾಮೀಣ ಭಾಗದಲ್ಲಿ ವಿಶ್ವ ಬ್ಯಾಂಕ್ ನೆರವಿನ ಸಮಗ್ರ ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ಪರಿಸರ ನೈರ್ಮಲ್ಯ ಯೋಜನೆ ಜಾರಿಯಾಗಿತ್ತು. ಇದ ಕ್ಕಾಗಿ ಗ್ರಾಮಸ್ಥರ ಪಾಲು ಬಂಡವಾಳದಿಂದ ಮನೆ ಮನೆಗೆ ನೀರು ಸರಬರಾಜು ಎಂಬ ಹೊಸ ಪರಿಕಲ್ಪನೆ ಹುಟ್ಟಿಕೊಂಡಿತ್ತು.
ಸಲಹೆ ಅನುಸಾರ ಜಾರಿಗೊಳಿಸಲಾ ಯಿತು. ಯೋಜನೆ ನಿರ್ವಹಣೆ, ಲಾಭ, ನಷ್ಟ ಎಲ್ಲವೂ ಸಮಿತಿಯ ಹೊಣೆಗಾರಿಕೆ ಎಂಬ ಶರತ್ತು ವಿಧಿಸಲಾಗಿತ್ತು. ಪಾರದರ್ಶಕ ನಿರ್ವಹಣೆ
ಯೋಜನೆ ಜಾರಿ ಬಳಿಕ ತೋಕೂರು 1ನೇ ಕ್ಲಸ್ಟರ್ ಸಮಿತಿಯು ವ್ಯವಸ್ಥಿತವಾಗಿ ಕಾರ್ಯೋನ್ಮುಖವಾಗಿದೆ. ಪ್ರತೀ ವರ್ಷ ಲೆಕ್ಕ ಪರಿಶೋಧಕರ ಮೂಲಕ ಲೆಕ್ಕ ಪರಿಶೋಧನೆ ನಡೆಸಲಾಗುತ್ತದೆ, ಗ್ರಾಹಕರ ಸಮ್ಮುಖದಲ್ಲಿ ವಾರ್ಷಿಕ ಮಹಾಸಭೆ ನಡೆಸಿ ಸಂಪೂರ್ಣ ವಿಚಾರ ವಿನಿಮಯ ಮಾಡಲಾಗುತ್ತದೆ. ಸಮಿತಿಯನ್ನು ಪುನಾರಚಿಸಿಕೊಂಡು ಎಲ್ಲರಿಗೂ ಸಮಾನವಾಗಿ ಅವಕಾಶ ನೀಡಲಾಗುತ್ತಿದೆ. ಎರಡು ವರ್ಷಗಳಿ ಗೊಮ್ಮೆ ತಪ್ಪದೆ ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ನೀರಿನ ಗುಣಮಟ್ಟದ ಪರೀಕ್ಷೆ ನಡೆಸುತ್ತಿದೆ. ತಿಂಗಳಿಗೆ ಅಂದಾಜು 19 ಲಕ್ಷ ಲೀ. ನೀರು ಸರಬರಾಜು ನಡೆಯುತ್ತಿದ್ದು, ಸಮಸ್ಯೆ ಬಂದ ತತ್‌ಕ್ಷಣ ಪರಿಹಾರ ಕಂಡು ಕೊಳ್ಳುವ ಸಾಮರ್ಥ್ಯ ಸಮಿತಿಗೆ ಇದೆ.
Related Articles
ಗ್ರಾಮದ ಯೋಜನಾ ನಿರ್ವಹಣೆ ಇಂದು ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಕೊಂಡಿದೆ. ಶಿವಮೊಗ್ಗದ ಹೊಂಬುಜ ಮಠದಲ್ಲಿ ನಡೆದ ರಾಜ್ಯ ಮಟ್ಟದ ನೀರು ನಿರ್ವಹಣೆ ಹಾಗೂ ಭವಿಷ್ಯ ತ್ತಿನ ಯೋಚನೆ ಎಂಬ ವಿಚಾರ ಸಂಕಿರಣದಲ್ಲಿ ಗ್ರಾಮದ ಯೋಜನಾನುಷ್ಠಾನ ಗಮನ ಸೆಳೆದಿತ್ತು. ಅನಂತರ ಬೆಂಗಳೂರಿನಲ್ಲಿ 2011ರಲ್ಲಿ ನಡೆದ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಈ ಬಗ್ಗೆ ವಿಸ್ತಾರವಾಗಿ ತಿಳಿಸಲು ಅವಕಾಶ ನೀಡಲಾಗಿತ್ತು. ಇದರಿಂದ ಆಕರ್ಷಿತರಾದ ವಿಶ್ವಬ್ಯಾಂಕ್ ನೆರವಿನ ಏಷ್ಯಾ ಪ್ರಮುಖರಾದ ಕ್ರಿಸ್ಟ್ ಅವರು ತೋಕೂರಿಗೆ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದರು.
Advertisement
ನೀರಿನ ಒಳ ಹರಿವಿನ ಚಿಂತನೆಯೋಜನೆಯನ್ನು ಭವಿಷ್ಯದಲ್ಲೂ ಭದ್ರವಾಗಿರಿಸಬೇಕು ಎಂಬ ದೂರ ದೃಷ್ಟಿಯಿಂದ ಈಗ ನೀರು ಒದಗಿಸು ತ್ತಿರುವ ಕೊಳವೆ ಬಾವಿಗಳಿಗೆ ಜಲ ಮರುಪೂರಣಗೊಳಿಸಲು ಎರಡು ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಒಂದು ಅಣೆಕಟ್ಟು ಸುಮಾರು 4.5 ಲಕ್ಷ ರೂ. ವೆಚ್ಚದಲ್ಲಿ ನರೇಗಾ ಮೂಲಕ ನಿರ್ಮಾಣವಾದರೆ, ಇನ್ನೊಂದನ್ನು ಸ್ಥಳೀಯವಾಗಿ ಸಮಿತಿಗೆ ಆಸರೆಯಾಗಿರುವ ತೋಕೂರು ಯುವಕ ಸಂಘದ ಸುವರ್ಣ ಮಹೋ ತ್ಸವ ನೆನಪಿಗಾಗಿ ನಿರ್ಮಿಸಲಾಗಿದೆ. ಪ್ರತೀ ತಿಂಗಳ ನಿರ್ವಹಣೆ
ಗ್ರಾಮದಲ್ಲಿ ನೀರಿನ ಸಂಪರ್ಕ ಬೇಕಾದವರು 2 ಸಾವಿರ ರೂ. ಠೇವಣಿ ಇರಿಸಬೇಕು, ಪ್ರತೀ ತಿಂಗಳು 75 ರೂ. ಶುಲ್ಕ ವಿಧಿಸಿ 15 ಸಾವಿರ ಲೀ. ನೀರು ಒದಗಿಸಲಾಗುತ್ತದೆ. ಹೆಚ್ಚುವರಿ ನೀರು ಬೇಕಾದರೆ ಪ್ರತ್ಯೇಕ ದರವಿದೆ. ನೀರು ಟ್ಯಾಂಕಿಗೆ ತುಂಬಿಸಲು 7.5 ಎಚ್.ಪಿ. ಪಂಪ್ ಇದೆ. ಸಮಿತಿಗೆ 12 ಸಾವಿರ ರೂ. ಮೆಸ್ಕಾಂ ಬಿಲ್, ನಿರ್ವಹಣೆ, ಪಂಪ್ ಆಪರೇಟರ್ ವೇತನ, ಬಿಲ್ ಕಲೆಕ್ಟರ್ ವೇತನ ಮತ್ತು ಇತರ ವೆಚ್ಚಗಳು ಸೇರಿ ಪ್ರತೀ ತಿಂಗಳು 18 ಸಾವಿರ ರೂ. ಖರ್ಚಾಗುತ್ತದೆ. ಈಗಿರುವ 175 ಮನೆಗಳ ಸಂಪರ್ಕದಿಂದ ಪ್ರತೀ ತಿಂಗಳು ಸುಮಾರು 23 ಸಾವಿರ ರೂ. ಸಂಗ್ರಹವಾಗುತ್ತಿದೆ. ಸಮಗ್ರ ನಿರ್ವಹಣೆಯನ್ನು ಸಂಪೂರ್ಣವಾಗಿ ಕಂಪ್ಯೂಟರೀಕರಣಗೊಳಿಸಲಾಗಿದೆ. ಪ್ರತಿ ತಿಂಗಳ ನಿರ್ವಹಣೆ
ಗ್ರಾಮದಲ್ಲಿ ನೀರಿನ ಸಂಪರ್ಕ ಬೇಕಾದವರು 2 ಸಾವಿರ ರೂ. ಠೇವಣಿ ಇರಿಸಬೇಕು. ಪ್ರತಿ ತಿಂಗಳು 75 ರೂ. ಶುಲ್ಕ ವಿಧಿಸಿ 15 ಸಾವಿರ ಲೀ. ನೀರು ಒದಗಿಸಲಾಗುತ್ತದೆ. ಹೆಚ್ಚುವರಿ ನೀರು ಬೇಕಾದರೆ ಪ್ರತ್ಯೇಕ ದರವಿದೆ. ನೀರು ಟ್ಯಾಂಕಿಗೆ ತುಂಬಿಸಲು 7.5 ಎಚ್.ಪಿ. ಸಾಮರ್ಥ್ಯದ ಪಂಪ್ ಇದೆ. ಸಮಿತಿಗೆ 12 ಸಾವಿರ ರೂ. ಮೆಸ್ಕಾಂ ಬಿಲ್, ಪಂಪ್ ಆಪರೇಟರ್ ವೇತನ, ಇತರ ವೆಚ್ಚಗಳ ಸಹಿತ ತಿಂಗಳಿಗೆ 18 ಸಾವಿರ ಖರ್ಚಾಗುತ್ತದೆ. ಈಗಿರುವ 175 ಮನೆಗಳ ಸಂಪರ್ಕದಿಂದ ಪ್ರತಿ ತಿಂಗಳು ಸುಮಾರು 23 ಸಾವಿರ ರೂ. ಸಂಗ್ರಹ ವಾಗುತ್ತಿದೆ. ಎಲ್ಲವನ್ನೂ ಕಂಪ್ಯೂಟರೀಕರ ಣಗೊಳಿಸಲಾಗಿದೆ. ಪಾರದರ್ಶಕತೆಯೇ ನಮ್ಮ ವಿಶ್ವಾಸ
ನೀರು ಪಡೆಯುವ ಗ್ರಾಹಕರ ಬೇಡಿಕೆಗೆ ಸ್ಪಂದಿಸುವುದರಿಂದ ನಮ್ಮ ಸಮಿತಿ ಪಾರದರ್ಶಕತೆಯ ವಿಶ್ವಾಸ ಹೊಂದಿದೆ. ಯೋಜನೆ ಗಳು ಭವಿಷ್ಯದಲ್ಲಿಯೂ ಭದ್ರವಾಗಿ ರಬೇಕಾದರೆ ಪ್ರತಿಯೊಬ್ಬನ ಇಚ್ಛಾ ಶಕ್ತಿ ಮುಖ್ಯ. ಬೇರೆ ಬೇರೆ ಕಡೆಗಳಲ್ಲಿ ಕಾಣುತ್ತಿರುವ ನೀರಿನ ಅಭಾವಕ್ಕೆ ನಾವೇ ಹೊಣೆಗಾರರಾಗಿದ್ದೇವೆ. ಈ ಬಗ್ಗೆ ಸಮಗ್ರ ಚಿಂತನೆ ನಡೆಸುವ ಅಗತ್ಯವಿದೆ.
ಟಿ.ಜಿ. ಭಂಡಾರಿ ಸಮಿತಿಯ ಕೋಶಾಧಿಕಾರಿ ನರೇಂದ್ರ ಕೆರೆಕಾಡು