Advertisement

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

02:02 AM Dec 27, 2024 | Team Udayavani |

ಮಂಗಳೂರು: ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಸಂಬಂಧಿಸಿ ಇಲಾಖೆ ಮತ್ತು ಬ್ಯಾಂಕ್‌ಗಳು ಸಮನ್ವಯದಿಂದ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷéವನ್ನು ಸಹಿಸಲಾ ಗದು ಎಂದು ಸಂಸದ ಕ್ಯಾ| ಬ್ರಿಜೇಶ್‌ ಚೌಟ ಹೇಳಿದರು.

Advertisement

ಜಿ.ಪಂ.ನಲ್ಲಿ ಗುರುವಾರ ನಡೆದ ಜಿಲ್ಲಾ ಬ್ಯಾಂಕ್‌ಗಳ ಪರಿಶೀಲನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಯೋಜನೆ ಅನುಷ್ಠಾನ ಇಲಾಖೆಯ ಅಧಿಕಾರಿಯ ಬಳಿ ಯೋಜನೆಯ ಪ್ರಗತಿಯ ಕುರಿತಂತೆ ವಿವರ ಪಡೆದರು.

ಸಂಬಂಧಪಟ್ಟ ಅಧಿಕಾರಿ ಅಂಕಿ – ಅಂಶ ಸಹಿತ ಉತ್ತರಕ್ಕೆ ತಡಕಾಡಿದ್ದರ ಹಿನ್ನೆಲೆಯಲ್ಲಿ ಸಂಪೂರ್ಣ ಮಾಹಿತಿ ಇಲ್ಲದೆ ಸಭೆಗೆ ಹಾಜರಾಗಿದ್ದು ಯಾಕೆ ಎಂದು ಸಂಸದರು ತರಾಟೆಗೆ ತೆಗೆದು ಕೊಂಡರು. ಜಿಲ್ಲೆಯಲ್ಲಿ 8,900 ಅರ್ಜಿಗಳು ಸಲ್ಲಿಕೆಯಾಗಿದ್ದು, 3,950 ಮಂದಿಗೆ ತರಬೇತಿ ಪೂರ್ಣಗೊಂಡಿದೆ ಎಂದಷ್ಟೇ ಮಾಹಿತಿ ದೊರಕಿತು.

ಪ್ರತ್ಯೇಕ ಸಭೆಗೆ ಸೂಚನೆ
ಅಧಿಕಾರಿಯ ಉತ್ತರಕ್ಕೆ ಅಸಮಾ ಧಾನ ವ್ಯಕ್ತಪಡಿಸಿದ ಸಂಸದರು, ಈ ಯೋಜನೆಯ ಪ್ರಗತಿ ಪರಿಶೀಲನೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ನಡೆಸಲುಜಿ.ಪಂ. ಸಿಇಒ ಡಾ| ಆನಂದ್‌ ಅವರಿಗೆ ಸೂಚಿಸಿದರು.

ಜನ್‌-ಧನ್‌ ಖಾತೆ ಮಾಡಿಸಿ
ಪ್ರಧಾನಮಂತ್ರಿ ಜನ್‌-ಧನ್‌ ಯೋಜನೆಯಲ್ಲಿ ನಿಗದಿತ ಗುರಿ ಸಾಧನೆ ಇನ್ನೂ ಆಗದಿರುವ ಬಗ್ಗೆ ಸಿಇಒ ಅಸಮಾಧಾನ ವ್ಯಕ್ತಪಡಿಸಿದರು. ರೇಷನ್‌ ಕಾರ್ಡ್‌ ಮತ್ತು ಆಧಾರ್‌ ಕಾರ್ಡ್‌ ಮಾಹಿತಿಗಳನ್ನು ಪರಿಶೀಲಿಸಿ ಯಾರು ಖಾತೆ ಮಾಡಿಸಿಲ್ಲ ಎಂದು ತಿಳಿದು ಖಾತೆ ಮಾಡಿಸಬೇಕು. ಅದಕ್ಕಾಗಿ ಶಿಬಿರಗಳನ್ನೂ ಆಯೋಜಿಸಬೇಕು ಎಂದು ಸೂಚಿಸಿದರು.ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಕವಿತಾ ಎನ್‌. ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಸೆ. 30ರ ವರೆಗೆ 24,582 ಉಳಿತಾಯ ಖಾತೆಗಳನ್ನು ತೆರೆಯಲಾಗಿದೆ ಎಂದರು.

Advertisement

ವಿಮಾ ಯೋಜನೆ
ಪಿಎಂ ಜೀವನ ಜ್ಯೋತಿ ವಿಮಾ ಯೋಜನೆ ಮತ್ತು ಸುರಕ್ಷಾ ವಿಮಾ ಯೋಜನೆಗಳು ಅತ್ಯಂತ ಉತ್ತಮ ವಿಮಾ ಯೋಜನೆಗಳಾಗಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳಾಗಲು ಜಾಗೃತಿ ಮೂಡಿಸಿ, ಪ್ರತೀ ವರ್ಷ ನವೀಕರಣಕ್ಕೆ ಮಾಹಿತಿ ನೀಡುವಂತೆ ಸೂಚಿಸಿದರು. ಆರ್‌ಬಿಐನ ಎಜಿಎಂ ಅರುಣ್‌ ಕುಮಾರ್‌ ಪಿ. ಮಾತನಾಡಿ, ಸುರಕ್ಷಾ ವಿಮಾದಲ್ಲಿ ಜಿಲ್ಲೆ ರಾಜ್ಯದಲ್ಲಿ 13ನೇ ಸ್ಥಾನದಲ್ಲಿದ್ದು, ಜೀವನ ಜ್ಯೋತಿ ವಿಮಾ ಯೋಜನೆಯಡಿ 28ನೇ ಸ್ಥಾನದಲ್ಲಿದೆ. ಎಲ್ಲ ಬ್ಯಾಂಕ್‌ಗಳು ಮಾರ್ಚ್‌ ಒಳಗೆ ಶೇ. 75ರಷ್ಟು ಗುರಿ ಸಾಧಿಸಬೇಕು. ಶಿಕ್ಷಣ ಸಾಲ ಪಡೆಯುವ ವಿದ್ಯಾರ್ಥಿಗಳಿಗೆ ಅಟಲ್‌ ಪಿಂಚಣಿ ಯೋಜನೆಯಲ್ಲಿ ನೋಂದಣಿ ಮಾಡಬೇಕು ಎಂದರು.

ಗುರಿ ತಲುಪದ ಪಿಎಂ ಸ್ವನಿಧಿ
ಪಿಎಂ ಸ್ವನಿಧಿ ಯೋಜನೆಯಲ್ಲಿ ಕೆಲವು ಫಲಾನುಭವಿಗಳು ಸಾಲ ಮಂಜೂರಾದರೂ ಸಾಲಪಡೆಯಲು ಬ್ಯಾಂಕ್‌ಗಳಿಗೆ ಬರುತ್ತಿಲ್ಲ. ಹಾಗಾಗಿ ನಿರ್ದಿಷ್ಟ ಗುರಿ ತಲುಪಲಾಗಿಲ್ಲ. 500ಕ್ಕೂ ಹೆಚ್ಚಿನ ಅರ್ಜಿಗಳು ಬಾಕಿ ಇವೆ ಎಂದು ಬ್ಯಾಂಕ್‌ನವರು ತಿಳಿಸಿದರು. ಫಲಾನುಭವಿಗಳಿಗೆ ನೋಟಿಸ್‌ ಕೊಟ್ಟು ಬ್ಯಾಂಕ್‌ಗೆ ತೆರಳುವಂತೆ ಸೂಚಿಸು ವುದಾಗಿ ಯೋಜನೆ ಅನುಷ್ಠಾನ ಅಧಿಕಾರಿಗಳು ತಿಳಿಸಿದರು. ನಬಾರ್ಡ್‌ ಡಿಜಿಎಂ ಸಂಗೀತಾ ಎಸ್‌. ಕರ್ತಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next