Advertisement
2015ನೇ ಇಸವಿಯ ಜನವರಿ ತಿಂಗಳಿನಲ್ಲಿ ನೂತನ ಅಂಗವಾಡಿ ಕಟ್ಟಡಕ್ಕೆ ಹಳೆಯ ಅಂಗವಾಡಿ ಕಟ್ಟಡದ ಪಕ್ಕದಲ್ಲಿಯೇ ಗುದ್ದಲಿ ಪೂಜೆ ನೆರವೇರಿಸಿ ಇಲಾಖೆಯ 4.18 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.
ತೊಡಿಕಾನ ಅಂಗವಾಡಿ ಹಳೆಯ ಕಟ್ಟಡ ಶಿಥಿಲಗೊಂಡಿದ್ದು, ಅಂಗನವಾಡಿಗೆ ಬರುವ 23 ಮಕ್ಕಳು ಇದರಲ್ಲಿಯೇ ಕಾಲ ಕಳೆಯುವಂತಾಗಿದೆ. ಅಂಗವಾಡಿಗೆ ಸ್ವಂತ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಪಕ್ಕದ ಪ್ರಾಥಮಿಕ ಶಾಲೆಯ ನೀರನ್ನು ಉಪಯೋಗಿಸುತ್ತಿದ್ದು, ಪ್ರಾಥಮಿಕ ಶಾಲೆಗೆ ಪ್ರತಿ ತಿಂಗಳು ಬರುವ ವಿದ್ಯುತ್ ಬಿಲ್‌ನ ಮೂರನೇ ಒಂದು ಭಾಗವನ್ನು ಮಕ್ಕಳ ಹೆತ್ತವರಿಂದಲೇ ಸಂಗ್ರಹಿಸಿ ಪಾವತಿಸಲಾಗುತ್ತಿದೆ. ಹೊಸ ಕಟ್ಟಡದ ನಿರ್ಮಾಣ ಸ್ಥಗಿತಗೊಂಡಿದೆ, ಹಳೆಯ ಕಟ್ಟಡವನ್ನಾದರೂ ದುರಸ್ತಿ ಮಾಡಲು ಅನುದಾನ ಕೊಡಿ ಎಂದು ಗ್ರಾ.ಪಂ.ಗೆ ಬೇಡಿಕೆ ಸಲ್ಲಿಸಲಾಗಿದೆ. ಆದರೆ, ದುರಸ್ತಿಗೂ ಅನುದಾನ ಬಂದಿಲ್ಲ, ಹೊಸ ಕಟ್ಟಡವೂ ಪೂರ್ಣಗೊಳ್ಳದೆ ಮಕ್ಕಳು ಶಿಥಿಲ ಕಟ್ಟಡದಲ್ಲೇ ಅಭದ್ರತೆಯಲ್ಲಿ ಕಾಲ ನೂಕಬೇಕಾಗಿದೆ.
Related Articles
ತೊಡಿಕಾನ ಅಂಗವಾಡಿ ಕಾಮಗಾರಿ ಸ್ಥಗಿತಗೊಂಡಿರುವುದು ನಿಜ. ಇದಕ್ಕೆ ಅನುದಾನದ ಕೊರತೆ ಎದುರಾಗಿದೆ. ಅನುದಾನ ಒದಗಿಸಿ ಕೊಡಬೇಕೆಂದು ಶಾಸಕರಿಗೆ ನಾವು ಲಿಖಿತವಾಗಿ ಮನವಿ ಮಾಡಿಕೊಂಡಿದ್ದೇವೆ. ಶಾಸಕರು ಅನುದಾನ ಒದಗಿಸುವ ನಿರೀಕ್ಷೆಯಿದೆ.
– ಸರಸ್ವತಿ,
ಸಿಡಿಪಿಒ, ಸುಳ್ಯ
Advertisement
50 ಸಾವಿರ ರೂ. ಅನುದಾನಅರಂತೋಡು ಗ್ರಾ.ಪಂ. ವತಿಯಿಂದ ಅಂಗವಾಡಿ ನೂತನ ಕಟ್ಟಡಕ್ಕೆ 50 ಸಾವಿರ ರೂ. ಅನುದಾನ ಇರಿಸಲಾಗಿದೆ. ಅಂಗನವಾಡಿಯಲ್ಲಿ ಮುಖ್ಯವಾಗಿ ಬಾಕಿ ಉಳಿದಿರುವ ಕೆಲಸ ಕಿಟಕಿ ಬಾಗಿಲುಗಳದ್ದು ಮಾತ್ರ. ಪಂಚಾಯತ್ ವತಿಯಿಂದ ಇದಕ್ಕಿಂತ ಹೆಚ್ಚು ಅನುದಾನ ನೀಡಲು ಅಸಾಧ್ಯ.
– ಜಯಪ್ರಕಾಶ್ ಪಿ.ಡಿ.ಒ.
ಅರಂತೋಡು ಗ್ರಾ.ಪಂ. ತೇಜೇಶ್ವರ್ ಕುಂದಲ್ಪಾಡಿ