Advertisement
ಹೀಗೆ ಕಾಣುತ್ತಿರುವುದು ಕಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪದ್ಮುಂಜದಲ್ಲಿರುವ ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಕಟ್ಟಡ. ಇದು ಮೂರು ವರ್ಷಗಳಿಂದ ವಸ್ತುಶಃ ಅನಾಥವಾಗಿದೆ, ಪಾಳು ಬಿದ್ದಿದೆ.
Related Articles
Advertisement
ನಿರುಪಯುಕ್ತ ಆಗಿದ್ದು ಯಾಕೆ?ಈ ಹಾಸ್ಟೆಲ್ನಲ್ಲಿ 60ಕ್ಕೂ ಅಧಿಕ ವಿದ್ಯಾರ್ಥಿನಿಯರು ಇದ್ದರು. 2020-21ರಲ್ಲಿ ಕೊರೊನಾ ವಕ್ಕರಿಸಿದಾಗ ಮಕ್ಕಳನ್ನು ಮನೆಗೆ ಕಳುಹಿಸಲಾಗಿತ್ತು. ಆಗ ಈ ಕಟ್ಟಡವನ್ನು ಸಂಶಯಿತ ಪ್ರಕರಣಗಳಲ್ಲಿ ಕ್ವಾರಂಟೈನ್ ಮತ್ತು ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಕೆ ಮಾಡಲಾಗುತ್ತಿತ್ತು. 2021-22ನೇ ಸಾಲಿನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆಯಾಯಿತು. ಕಡಿಮೆ ಸಂಖ್ಯೆಯಲ್ಲಿದ್ದ ಮಕ್ಕಳನ್ನು ತಾಲೂಕಿನ ಬೇರೆ ಬಾಲಕಿಯರ ನಿಲಯಕ್ಕೆ ಕಳುಹಿಸಿ ಕೊಡಲಾಯಿತು. ಅಲ್ಲಿಂದ ಬಳಿಕ ಇಲಾಖೆ ಈ ಕಟ್ಟಡವನ್ನು ಸಂಪೂರ್ಣವಾಗಿ ಮರೆತಿದೆ. ಹೀಗಾಗಿ ಅದು ಪಾಳುಬಿದ್ದಿದೆ. ಪಂಚಾಯತ್ ಬಳಕೆಗೆ ಮನವಿ
ಈ ಹಾಸ್ಟೆಲ್ ಕಣಿಯೂರು ಗ್ರಾಮ ಪಂಚಾಯತ್ ಕಚೇರಿಯ ಪಕ್ಕದಲ್ಲೇ ಇದೆ. ನಿಜವೆಂದರೆ ಪಂಚಾಯತ್ನಲ್ಲಿ ಸರಿಯಾದ ಸ್ಥಳಾವಕಾಶವಿಲ್ಲ. ಖಾಲಿಯಾಗಿರುವ ಸುಸಜ್ಜಿತ ಹಾಸ್ಟೆಲ್ ಕಟ್ಟಡವನ್ನು ಕನಿಷ್ಠ ಬಳಕೆಗಾದರೂ ಕೊಡಿ ಎಂದು ಕಳೆದ ಎರಡು ವರ್ಷಗಳಿಂದ ಮನವಿ ಮಾಡಲಾಗುತ್ತಿದ್ದರೂ ಸ್ಪಂದನೆ ಸಿಕ್ಕಿಲ್ಲ. ಒಂದು ವೇಳೆ ಪಂಚಾಯತ್ ಬಳಕೆಗೆ ನೀಡಿದ್ದರೆ ಅದು ಈ ರೀತಿ ಅನಾಥವಾಗಿ, ಜೀರ್ಣಾವಸ್ಥೆ ತಲುಪುವ ಸ್ಥಿತಿ ಬರುತ್ತಿರಲಿಲ್ಲ ಎಂಬುದು ಜನರ ಅಭಿಪ್ರಾಯ. ನಮ್ಮ ಬಳಕೆಗೆ ಕೊಡಿ ಎಂಬ ಪಂಚಾಯತ್ ಮನವಿಯನ್ನು ಬೆಳ್ತಂಗಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೇಲಾಧಿಕಾರಿಗಳಿಗೆ ಕಳುಹಿಸಿದೆ. ಆದರೆ ಅಲ್ಲಿಂದ ಯಾವುದೇ ಉತ್ತರ ಸಿಕ್ಕಿಲ್ಲ ಎನ್ನಲಾಗಿದೆ.
2-3 ವರ್ಷಗಳಿಂದ ಬಾಲಕಿಯರ ದಾಖಲಾತಿ ಕಡಿಮೆಯಾಗಿ ಸರಕಾರಿ ಕಟ್ಟಡ ಖಾಲಿಯಾಗಿಯೇ ಇದೆ. ಪಂಚಾಯತ್ನ ಅಗತ್ಯ ಕೆಲಸಗಳಿಗೆ ಸ್ಥಳಾವ ಕಾಶದ ಕೊರತೆಯಿದೆ. ಅದುದರಿಂದ ಸಂಬಂಧಿಸಿದ ಇಲಾಖೆಯವರು ಪಂಚಾಯತ್ ನೀಡಬೇಕೆಂದು ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇವೆ. ಕಟ್ಟಡ ಶಿಥಿಲವಾಗದಂತೆ ರಕ್ಷಿಸಲು ಪಂಚಾಯತ್ ಬದ್ಧವಾಗಿದೆ.
-ಸೀತಾರಾಮ ಮಡಿವಾಳ, ಅಧ್ಯಕ್ಷರು, ಕಣಿಯೂರು ಗ್ರಾಪಂ ರಕ್ಷಣೆ ಮಾಡುತ್ತಿದ್ದೇವೆ!
ಕಚೇರಿಗೆ ಸಂಬಂಧಿಸಿದ ಎಲ್ಲ ದಾಖಲೆ ಪತ್ರ ಹಾಗೂ ಪರಿಕರಗಳನ್ನು ಅಗತ್ಯವಿರುವ ಬೇರೆ ಕಡೆ ಕೊಂಡೊಯ್ಯಲಾಗಿದೆ. ಸದ್ಯ ಕಟ್ಟಡವನ್ನು ಯಾವುದೇ ರೀತಿಯಲ್ಲಿ ಉಪಯೋಗ ಮಾಡದೆ ಬೀಗ ಹಾಕಲಾಗಿದೆ. ಪರ್ಯಾಯ ವ್ಯವಸ್ಥೆಗೆ ಮೇಲಾಧಿಕಾರಿಗಳಿಗೆ ಮನವರಿಕೆ ಮಾಡಿ ಮನವಿ ಸಲ್ಲಿಸಲಾಗಿದೆ. ಕಟ್ಟಡದ ಸುಸ್ಥಿತಿಯಲ್ಲಿ ಕಾಪಾಡಿಕೊಂಡು ಬರಲಾಗುತ್ತಿದೆ.
-ಜೋಸೆಫ್ ಪಿ.ಎಸ್., ಮುಖ್ಯಸ್ಥರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಳ್ತಂಗಡಿ -ಕೆ.ಎನ್.ಗೌಡ. ಗೇರುಕಟ್ಟೆ