ಮುಂಬಯಿ: ಮಹಾರಾಷ್ಟ್ರದ ಮುಂಬಯಿಯ ಲಾಲ್‌ಬಾಗ್‌ಚಾ ರಾಜಾ ಸಾರ್ವಜನಿಕ ಪೆಂಡಾಲ್‌ನಲ್ಲಿ ಪ್ರತಿಷ್ಠಾಪಿಸುವ ಬೃಹತ್ ಗಣೇಶಮೂರ್ತಿ ಭಾರತದಲ್ಲೇ ಪ್ರಸಿದ್ಧಿ ಪಡೆದಿದೆ. ಆದರೆ ಈ ವರ್ಷ ಸರಳವಾಗಿ ಗಣೇಶೋತ್ಸವ ಆಚರಿಸಲು ನಿರ್ಧರಿಸಲಾಗಿದೆ. 4 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪರಿಸರ ಸ್ನೇಹಿಯಾಗಿ ಆಚರಿಸಿ ಸಣ್ಣ ಟ್ಯಾಂಕ್‌ನಲ್ಲಿ ಮುಳುಗಿಸಲಾಗುವುದು ಎಂದು ಲಾಲ್‌ಬಾಗ್‌ಚಾ ರಾಜಾ ಪೆಂಡಲ್‌ನ ಕಾರ್ಯದರ್ಶಿ ತಿಳಿಸಿದ್ದಾರೆ. ಪ್ರತಿವರ್ಷ ಬೃಹತ್ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಬಾಲಿವುಡ್ ತಾರೆಯರು, ಖ್ಯಾತ ಕ್ರೀಡಾಪಟುಗಳು, ರಾಜಕಾರಣಿಗಳು, ಉದ್ಯಮಿಗಳು ಈ ಗಣೇಶ ಮೂರ್ತಿಯ ವೀಕ್ಷಣೆಗೆ ಬರುತ್ತಿದ್ದರು. ಈ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಭಕ್ತರು ಕಿ.ಮೀ. ದೂರದವರೆಗೆ ಕ್ಯೂ ನಿಲ್ಲುತ್ತಿದ್ದರು. ಈ ವರ್ಷ ಸೋಂಕು ಹರಡುತ್ತಿರುವುದರಿಂದ ಸರಳವಾಗಿ ಗಣೇಶೋತ್ಸವ ಆಚರಿಸಲು ಸಿಎಂ ಉದ್ಧವ್ ಠಾಕ್ರೆ ಮನವಿ ಮಾಡಿದ್ದರು.