Advertisement
ಚುನಾವಣೆಯನ್ನು ಎದುರಿಸಲು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಂಪೂರ್ಣ ಸನ್ನದ್ಧವಾಗಿದೆ. ಚುನಾವಣೆಯನ್ನುದೃಷ್ಟಿಯಲ್ಲಿಟ್ಟುಕೊಂಡು ಕರ್ನಾಟಕ ಪ್ರದೇಶ ಕಾಂಗ್ರೆಸ್ ಎಂಟು ತಿಂಗಳ ಹಿಂದೆಯೇ ಕಾರ್ಯಯೋಜನೆಗಳನ್ನು
ರೂಪಿಸಿತ್ತು. ಎಐಸಿಸಿಯಿಂದ ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಕಗೊಂಡಿರುವ ಕೆ.ಸಿ. ವೇಣುಗೋಪಾಲ್, ಮೈಸೂರು ವಿಭಾಗ ಉಸ್ತುವಾರಿ ವಿಷ್ಣುನಾಥನ್ ಚುನಾವಣೆಗೆ ಪೂರಕವಾಗಿ ಪಕ್ಷ ಸಂಘಟನೆ, ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ಕಾಲ ಕಾಲಕ್ಕೆ ಅವಶ್ಯ ನಿರ್ದೇಶನಗಳನ್ನು ನೀಡುತ್ತಿದ್ದಾರೆ. ಅದರಂತೆ ತಳಮಟ್ಟದಿಂದ ನಮ್ಮ ಕೆಲಸಗಳು ನಡೆದಿವೆ; ನಡೆಯುತ್ತಿವೆ ಎಂದವರು ವಿವರಿಸುತ್ತಾರೆ.
Related Articles
Advertisement
ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದ ಬಗ್ಗೆ ವಿವರಿಸುವ ಅವರು, ಈ ಬಾರಿಯ ಚುನಾವಣೆ ಅಭಿವೃದ್ಧಿ ಮತ್ತು ಅಪಪ್ರಚಾರದ ನಡುವಣ ಸಂಘರ್ಷ ಕೂಡ ಆಗಿದೆ. ನಮ್ಮದು ಅಭಿವೃದ್ಧಿ ಅಜೆಂಡಾ. ಬಿಜೆಪಿಯದ್ದು ಅಪಪ್ರಚಾರ ಅಜೆಂಡಾ. ಕೇಂದ್ರದ ಬಿಜೆಪಿ ಸರಕಾರದ ಜನವಿರೋಧಿ ನೀತಿಯಿಂದ ಜನ ರೋಸಿಹೋಗಿದ್ದಾರೆ. ನೋಟು ಅಪನಗದೀಕರಣ, ಜಿಎಸ್‌ಟಿ ಮುಂತಾದ ಕ್ರಮಗಳು ಜನರ ಬದುಕನ್ನು ದುಸ್ತರಗೊಳಿಸಿವೆ. ಯುಪಿಎ ಸರಕಾರದ ಅವಧಿಯಲ್ಲಿ ಪೆಟ್ರೋಲ್ ಬ್ಯಾರೆಲ್‌ಗೆ 140 ಡಾಲರ್ ಇದ್ದರೂ ಲೀಟರ್‌ಗೆ 70 ರೂ.ನಲ್ಲಿ ಪೆಟ್ರೋಲ್ ನೀಡಲಾಗಿತ್ತು. ಪ್ರಸ್ತುತ ಬ್ಯಾರೆಲ್‌ಗೆ 40 ಡಾಲರ್ ಇದ್ದರೂ ಲೀಟರ್‌ಗೆ 72 -73 ರೂ. ಇದೆ. ಯುಪಿಎ ಸರಕಾರದ ಅವಧಿಯಲ್ಲಿ ಗ್ಯಾಸ್ ಸಿಲಿಂಡರ್ 365 ರೂ.ನಲ್ಲಿ ವಿತರಿಸಲಾಗುತ್ತಿದ್ದರೆ ಈಗ 800 ರೂ. ಗೇರಿದೆ. ಅಡಿಕೆ, ರಬ್ಬರು, ಕಾಳುಮೆಣಸು ಬೆಳೆಗಾರರನ್ನು ಕೇಂದ್ರ ಸರಕಾರ ಸಂಕಷ್ಟಕ್ಕೆ ಸಿಲುಕಿಸಿದೆ. ದೇಶದಲ್ಲಿ ಅಚ್ಛೇ ದಿನ್ ಯಾರಿಗೂ ಬಂದಿಲ್ಲ. ಕೇಂದ್ರ ಸರಕಾರದ ಜನ ವಿರೋಧಿ ನೀತಿ ಮತ್ತು ವೈಫಲ್ಯವನ್ನು ಜನರ ಮುಂದೆ ತೆರೆದಿಡುತ್ತೇವೆ ಎನ್ನುತ್ತಾರೆ ಹರೀಶ್ ಕುಮಾರ್.
ಸಮಾನವಾಗಿ ಕಂಡಿದ್ದೇವೆ…ಈ ಬಾರಿ ಚುನಾವಣೆ ಎದುರಿಸಲು ಯಾವುದೇ ವಿರೋಧ ಪಕ್ಷಗಳಲ್ಲಿ ಯಾವುದೇ ವಿಷಯಗಳಿಲ್ಲ. ಬಿಜೆಪಿ ಹಿಂದುತ್ವ ಹೆಸರಿನಲ್ಲಿ ಮತೀಯ ಭಾವನೆಗಳನ್ನು ಕೆರಳಿಸಿ ಜನರಲ್ಲಿ ಗೊಂದಲ ನಿರ್ಮಿಸಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ. ನಾವು ಎಲ್ಲ ಜಾತಿ, ಧರ್ಮದ ಜನರನ್ನು ಸಮಾನವಾಗಿ ಕಂಡು ಸಮಾಜದಲ್ಲಿ ಶಾಂತಿ, ಸೌಹಾರ್ದದ ವಾತಾವರಣ ನೆಲೆಗೊಳಿಸುವ, ಸಾಮಾಜಿಕ ನ್ಯಾಯದ ಸಾಕಾರ ಕಾರ್ಯ ಮಾಡುತ್ತಿದ್ದರೆ ಬಿಜೆಪಿಯವರು ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಜನತೆ ಇದನ್ನು ಅರಿತಿದ್ದಾರೆ. ಎಂಟರಲ್ಲಿ ಎಂಟು: ಟಾರ್ಗೆಟ್
ಈ ಚುನಾವಣೆಯಲ್ಲಿ ಕಾಂಗ್ರೆಸ್ ಭಾರೀ ಅಂತರದಿಂದ ಗೆಲುವು ಸಾಧಿಸಲಿದೆ 2013ರ ಚುನಾವಣೆಯಲ್ಲಿ ದ.ಕ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 7 ಸ್ಥಾನ ಗೆದ್ದಿದ್ದೇವೆ. ಸುಳ್ಯ ಕ್ಷೇತ್ರವನ್ನು ಅಲ್ಪಮತಗಳಿಂದ ಸೋತಿದ್ದೇವೆ. ಈ ಬಾರಿ ಕಳೆದ ಬಾರಿ ಗೆದ್ದಿದ್ದ 7 ಸ್ಥಾನಗಳನ್ನು ಉಳಿಸಿಕೊಳ್ಳುವುದರ ಜತೆಗೆ ಉಳಿದ ಸುಳ್ಯದಲ್ಲೂ ಜಯ ಸಾಧಿಸಿ ಎಂಟರಲ್ಲಿ ಎಂಟು ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ಧೃಡ ವಿಶ್ವಾಸ ನಮ್ಮದಾಗಿದೆ. ಜಿಲ್ಲೆಯಲ್ಲಿ ಪಕ್ಷದ ಸಂಘಟನೆ, ಸಿದ್ದರಾಮಯ್ಯ ನೀಡಿರುವ ಅಭಿವೃದ್ಧಿ, ಜನಪರ ಯೋಜನೆಗಳು ನಮಗೆ ಶ್ರೀರಕ್ಷೆಯಾಗಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದಿರುವ ರಾಹುಲ್ ಗಾಂಧಿಯವರ ಜನಾಶೀರ್ವಾದ ಯಾತ್ರೆ ಸಂದರ್ಭ ವ್ಯಕ್ತವಾಗಿರುವ ಭಾರೀ ಜನಬೆಂಬಲ ಪಕ್ಷ ಜಿಲ್ಲೆಯಲ್ಲಿ ನಮ್ಮ ಪರವಾಗಿರುವ ವಾತಾವರಣಕ್ಕೆ ನಿದರ್ಶನವಾಗಿದೆ. ಇದು ಮುಂದಿನ ಚುನಾವಣೆಯಲ್ಲಿ ಪ್ರತಿಫಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಕೇಶವ ಕುಂದರ್