Advertisement
ಕನ್ನಡ ಭಾಷೆ ಎಂದರೆ ಮೂಗು ಮುರಿಯುವ ಈ ಕಾಲದಲ್ಲಿ ಕನ್ನಡ ಭಾಷಿಕರು ವಿರಳವಾಗಿರುವ ಮೈಸೂರಿನ ರಾಜೀವನಗರದ 2ನೇ ಹಂತದಲ್ಲಿ ಕನ್ನಡ ಭಾಷಾ ಜ್ಞಾನ ಬೆಳೆಸಲು, ಅಕ್ಷರ ಪ್ರೀತಿ ಮೂಡಿಸಲು ಕಳೆದ ಹತ್ತಾರು ವರ್ಷಗಳಿಂದ ಖಾಲಿ ಜಾಗದಲ್ಲಿ ಗುಡಿ ಸಲು ಹಾಕಿ ಸ್ವಂತ ಖರ್ಚಿನಲ್ಲೇ ಸಣ್ಣದೊಂದು ಗ್ರಂಥಾ ಲಯ ನಡೆಸುತ್ತಿದ್ದ ಸಯ್ಯದ್ ಇಸಾಕ್‌ರ ಗ್ರಂಥಾಲಯಕ್ಕೆ ಕಿಡಿಗೇಡಿಗಳು ಏಪ್ರಿಲ್ 09ರಂದು ಮಧ್ಯರಾತ್ರಿ ಬೆಂಕಿಯಿಟ್ಟು 11 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಭಸ್ಮಮಾಡಿ ಗ್ರಂಥಾಲಯವನ್ನು ನಾಶ ಮಾಡಿದ್ದರು.
Related Articles
Advertisement
ಇದನ್ನೂ ಓದಿ:- ಯುಪಿ ರೈತರ ಚಿತಾಭಸ್ಮ ಕೃಷ್ಣಾ ನದಿಯಲ್ಲಿ ವಿಸರ್ಜನೆ
ಇಷ್ಟೆಲ್ಲ ಘಟನೆ ನಡೆದು ಹೋಗಿದ್ದು ಏಪ್ರಿಲ್ ತಿಂಗಳಲ್ಲೇ. ಆದರೆ, ಸರ್ಕಾರ ನೀಡಿದ ಭರವಸೆ ಇನ್ನೂ ಈಡೇರಿಲ್ಲ. ನೂರಾರು ಮಂದಿ ಸಾಹಿತ್ಯಾಸಕ್ತರು, ಪುಸ್ತಕ ಪ್ರೇಮಿಗಳ ಓದಿನ ದಾಹ ನೀಗಿಸುವ ಇಸಾಕ್ ಕೆಲಸವೂ ನಿಂತಿಲ್ಲ.
ಮುಡಾದಿಂದ ನಿವೇಶನ: ಜನತೆಗೆ ಓದಿನ ದಾಹ ನೀಗಿಸುತ್ತಾ, ಅಕ್ಷರ ಪೀತಿ ಹಂಚುವ ಸಲುವಾಗಿ ನಡೆಸುತ್ತಿದ್ದ ಗ್ರಂಥಾಲಯಕ್ಕೆ ಬೆಂಕಿ ಬಿದ್ದ ಸುದ್ದಿಗೆ ಮರುಗಿದ ಸರ್ಕಾರ ಗ್ರಂಥಾಲಯಕ್ಕೆ ಬೇಕಾಗುವ ನಿವೇಶನ ಹಾಗೂ ಕಟ್ಟಡ ಕಟ್ಟಿಕೊಡುವ ಭರವಸೆ ನೀಡಿತ್ತು. ಅದರಂತೆ ಮುಡಾ ಅಧ್ಯಕ್ಷರ ಮುತು ವರ್ಜಿಯಿಂದ ಗ್ರಂಥಾಲಯ ಸುಟ್ಟು ಕರಕಲಾದ ಸ್ಥಳವಾದ ಮೂಲೆ ನಿವೇಶನವನ್ನು ಸಯ್ಯದ್ ಇಸಾಕ್ ಅವರಿಗೆ ಗ್ರಂಥಾಲಯ ನಡೆಸುವುದಕ್ಕಾಗಿ ನೀಡಿದೆ. ಆದರೆ, ಕಟ್ಟಡ ನಿರ್ಮಿಸಿಕೊಡುವ ಜವಾಬ್ದಾರಿ ಹೊತ್ತ ಪಾಲಿಕೆ ಮತ್ತು ಗ್ರಂಥಾಲಯ ಇಲಾಖೆ ಮೌನಕ್ಕೆ ಶರಣಾಗಿವೆ ಎಂದು ಇಸಾಕ್ ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಹಿಂದಿನ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು ಮತ್ತು ಗ್ರಂಥಾಲಯ ಅಧಿಕಾರಿಗಳು ಭೇಟಿ ನೀಡಿ ಹೊಸ ಕಟ್ಟಡ ಮಾಡಿಕೊಡುತ್ತೇವೆ ಎಂದು ಹೇಳಿ ಹೋದರು. ಆದರೆ, ಆರು ತಿಂಗಳಾದರು ಇತ್ತ ಯಾರೂ ಬಂದಿಲ್ಲ. ಈ ಬಗ್ಗೆ ಗ್ರಂಥಾಲಯ ಅಧಿಕಾರಿಗಳನ್ನು ವಿಚಾರಿಸಿದರೆ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಂದಿಲ್ಲ. ಪಾಲಿಕೆ ಅಧಿಕಾರಿಗಳನ್ನು ವಿಚಾರಿಸಿ ಎನ್ನುತ್ತಾರೆ.
ನನ್ನ ಗ್ರಂಥಾಲಯ ಕನಸು ಈಡೇರುವವರೆಗೂ ಇಲ್ಲೇ ರಸ್ತೆ ಬದಿಯಲ್ಲೇ ತತ್ಕಾಲಿಕವಾಗಿ ಗ್ರಂಥಾಲಯ ಸೇವೆ ಮುಂದುವರಿಸುತ್ತೇನೆ ಎಂದು ಸಯ್ಯದ್ ಇಸಾಕ್ ಪತ್ರಿಕೆಗೆ ತಿಳಿಸಿದರು.
ಇಲಾಖೆ ಹೇಳುವುದೇನು?: ಗ್ರಂಥಾಲಯ ಸುಟ್ಟುಹೋದ ಸ್ಥಳವನ್ನು ಮುಡಾ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಹಸ್ತಾಂತರಿಸಿದೆ. ಇಲಾಖೆಯಿಂದ ಗ್ರಂಥಾಲಯ ನಿರ್ಮಿಸಿ ಕಟ್ಟದ ಒಂದು ಕೊಠಡಿಯಲ್ಲಿ ಇಸಾಕ್ ಅವರು ತಮ್ಮ ಪುಸ್ತಕ ಮತ್ತು ಪತ್ರಿಕೆಗಳನ್ನು ಇಡಬಹುದು.
ಮತ್ತೊಂದು ಭಾಗದಲ್ಲಿ ನಮ್ಮ ಇಲಾಖೆ ಗ್ರಂಥಾಲಯ ಕಾರ್ಯನಿರ್ವಹಿಸಲಿದೆ. ಜೊತೆಗೆ ಇಸಾಕ್ ಅವರ ಮನೆಯ ಒಬ್ಬ ಸದಸ್ಯರಿಗೆ ತಾತ್ಕಾಲಿಕ ಕೆಲಸ ನೀಡಲಾಗುವುದು. ಕಟ್ಟಡ ನಿರ್ಮಾಣಕ್ಕೆ 25ರಿಂದ 30 ಲಕ್ಷ ರೂ. ಯೋಜನೆ ರೂಪಿಸಲಾಗಿದ್ದು, ಆಯುಕ್ತರು ಒಪ್ಪಿಗೆ ಸೂಚಿಸಿ ಅನುದಾನ ಬಿಡುಗಡೆ ಮಾಡಿದರೆ, ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಗ್ರಂಥಾಲಯ ಅಧಿಕಾರಿಗಳು ಹೇಳುತ್ತಾರೆ.
“ಆದಷ್ಟು ಬೇಗ ಸರ್ಕಾರ ಇಲ್ಲೊಂದು ಗ್ರಂಥಾಲಯ ನಿರ್ಮಾಣ ಮಾಡಬೇಕು. ಇಲ್ಲಿಗೆ ಸ್ಥಳೀಯ ಜನರು ಬಂದು ಪತ್ರಿಕೆ, ಪುಸ್ತಕ ಓದುವಂತಾಗಬೇಕು. ಇಲ್ಲವಾದರೆ ಬಹಳಷ್ಟು ಜನ ಈ ಜಾಗವನ್ನು, ಓದುವುದನ್ನು ಮರೆತು ಹೋಗ್ತಾರೆ. ಪತ್ರಿಕೆ ನೋಡುವ ಹವ್ಯಾಸವು ಕಣ್ಮರೆಯಾಗುತ್ತದೆ.” – ಸಯ್ಯದ್ ಇಸಾಕ್, ಸಾರ್ವಜನಿಕ ಗ್ರಂಥಾಲಯ