Advertisement

6 ವರ್ಷವಾದ್ರೂ ಅಪೂರ್ಣ ಈ ಸಮುದಾಯ ಭವನ

05:32 PM Apr 09, 2022 | Team Udayavani |

 

Advertisement

ಯರಗಟ್ಟಿ: ಮಂಗಳವಾರ ಪಟ್ಟಣದ ಅಂಬೇಡ್ಕರ ನಗರದಲ್ಲಿ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಮ್‌ ಜಯಂತಿಯನ ನು ಅವರದೇ ಹೆಸರಿನ ಅಪೂರ್ಣಗೊಂಡ ಭವನದಲ್ಲಿ ಆಚರಿಸಲಾಯಿತು. ಇದರಲ್ಲೇನು ವಿಶೇಷ ಅಂತೀರಾ? 2016ರಲ್ಲಿ ಈ ಕಟ್ಟಡದ ನಿರ್ಮಾಣ ಪ್ರಾರಂಭವಾಗಿದ್ದು ಇನ್ನೂ ಮುಗಿದಿಲ್ಲ.

2016 ರಲ್ಲಿ ಈಗಿನ ಉಪಸಭಾಧ್ಯಕ್ಷರಾದ ಆನಂದ ಮಾಮನಿಯವರು 50 ಲಕ್ಷ ರೂ. ಸಮಾಜ ಕಲ್ಯಾಣ ಇಲಾಖೆಯ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಸವದತ್ತಿಯ ಲ್ಯಾಂಡ್‌ ಆರ್ಮಿಗೆ ಗುತ್ತಿಗೆ ನೀಡಲಾಗಿತ್ತು.

ಬಾಬು ಜಗಜೀವನರಾಮ್‌ ಭವನ ನಿರ್ಮಾನಕ್ಕೆ ಇಲಾಖೆಗೆ 2019 ರಲ್ಲಿ ರೂ. 25 ಲಕ್ಷ ಮೊದಲನೇ ಕಂತಿನಲ್ಲಿ ಬಿಡುಗಡೆಯಾಯಿತು. ಅಷ್ಟು ಹಣದಲ್ಲಿ ಎಷ್ಟು ಕೆಲಸ ಸಾಧ್ಯವೋ ಅಷ್ಟನ್ನು ಮಾಡಲಾಯಿತು. ನಂತರ ಈಗ ಉಳಿದ ಹಣ ಬಿಡುಗಡೆಯಾಗಿದ್ದು, ಅತಿ ಶೀಘ್ರದಲ್ಲಿ ಇನ್ನುಳಿದ ಕಾಮಗಾರಿ ಮಾಡಲಾಗುವುದು ಎಂದು ತಾಲೂಕಾ ಸಮಾಜ ಕಲ್ಯಾಣಾಧಿಕಾರಿ ಕುಲಕರ್ಣಿ ಹೇಳುತ್ತಾರೆ.

ಸಮುದಾಯ ಭವನ ನಿರ್ಮಾಣವಾದರೆ ಕಾರ್ಯಕ್ರಮಗಳಿಗೆ ಅನುಕೂಲವಾಗುತ್ತದೆ. ಕಾಮಗಾರಿ ವಿಳಂಬ ನೋಡಿ ಲ್ಯಾಂಡ್‌ ಆರ್ಮಿ ಅಧಿಕಾರಿಗಳಿಗೆ ಹತ್ತಾರು ಬಾರಿ ಮನವಿ ಮಾಡಿದರೂ, ತಾಲೂಕು ಎಸ್‌ಸಿ, ಎಸ್‌ಟಿ ಕುಂದು ಕೊರತೆ ಸಭೆಯಲ್ಲಿ ಚರ್ಚಿಸಿದರೂ ಪ್ರಯೋಜನವಾಗಿಲ್ಲ. ಅರ್ಧಕ್ಕೆ ಕಟ್ಟಿ ನಿಲ್ಲಿಸಿದ ಕಟ್ಟಡ ಸ್ಮಾರಕದಂತೆ ಕಾಣುತ್ತಿದ್ದು, ಒಂದೊಂದೇ ಇಟ್ಟಂಗಿಗಳು ಬೀಳುತ್ತಿವೆ. ಅಧಿ ಕಾರಿಗಳು ಈಗಲಾದರೂ ಗಮನಹರಿಸಿ ಕಟ್ಟಡ ಪೂರ್ತಿಗೊಳಿಸಬೇಕು ಎನ್ನುತ್ತಾರೆ ಎಸ್‌.ಸಿ. ಸಮುದಾಯದ ಮುಖಂಡ ಲಕ್ಕಪ್ಪ ಹುಣಸಿಕಟ್ಟಿ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next