ತಿರುವನಂತಪುರಂ: ಕೇರಳದ ತಿರುವನಂತಪುರಂ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಶಶಿ ತರೂರ್ ಹಾಗೂ ಬಿಜೆಪಿ ರಾಜೀವ್ ಚಂದ್ರಶೇಖರ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ.
ಇದನ್ನೂ ಓದಿ:Belagavi; ಶೆಟ್ಟರ್ ಭಾರೀ ಮುನ್ನಡೆ: ಕಣ್ಣು ಒರೆಸಿಕೊಳ್ಳುತ್ತ ಹೊರ ಬಂದ ಮೃಣಾಲ್
2009ರಿಂದ ಸತತವಾಗಿ ತಿರುವನಂತಪುರಂ ಲೋಕಸಭಾ ಕ್ಷೇತ್ರದಲ್ಲಿ ಜಯಗಳಿಸುತ್ತಾ ಬಂದಿದ್ದ ಕಾಂಗ್ರೆಸ್ ನ ಶಶಿ ತರೂರ್ ಈ ಬಾರಿ ಹಿನ್ನಡೆ ಅನುಭವಿಸಿದ್ದಾರೆ. ಸದ್ಯದ ಫಲಿತಾಂಶದ ಪ್ರಕಾರ ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ 6,618 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಮತಎಣಿಕೆಯ ಆರಂಭದಲ್ಲಿ ಹಾಲಿ ಸಂಸದ ಶಶಿ ತರೂರ್, ತಮ್ಮ ಪ್ರತಿಸ್ಪರ್ಧಿ ರಾಜೀವ್ ಚಂದ್ರಶೇಖರ್ ಅವರಿಗಿಂತ ಕೇವಲ 1,920 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದರು. ನಂತರದ ಸುತ್ತಿನ ಮತ ಎಣಿಕೆಯಲ್ಲಿ ರಾಜೀವ್ ಚಂದ್ರಶೇಖರ್ 4,900 ಮತಗಳ ಮುನ್ನಡೆ ಸಾಧಿಸಿದ್ದರು.
2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಶಶಿ ತರೂರ್ ಹ್ಯಾಟ್ರಿಕ್ ವಿಜಯ ಸಾಧಿಸುವ ಮೂಲಕ 4,16,131 ಮತ ಪಡೆದಿದ್ದರು. ಭಾರತೀಯ ಜನತಾ ಪಕ್ಷದ ಕುಮ್ಮನಮ್ ರಾಜಶೇಖರನ್ 3,16,142 ಮತ ಪಡೆದು ಪರಾಜಯಗೊಂಡಿದ್ದರು.