ಗ್ರಾಹಕರನ್ನು ಸೆಳೆಯಲು ಕ್ಷೌರಿಕರು ವಿವಿಧ ಸ್ಟೈಲ್ ನ ಹೇರ್ ಕಟ್ಟಿಂಗ್ ಮಾಡೋದನ್ನು ನೋಡಿರುತ್ತೀರಿ…ಆದರೆ ಈ ಇಲ್ಲೊಬ್ಬ ಕ್ಷೌರಿಕ ಮಹಾಶಯನಿದ್ದಾನೆ…ಆತನ ಪ್ರಯೋಗವನ್ನು ನೀವು ಎಲ್ಲಿಯೂ ನೋಡಿರಲಿಕ್ಕಿಲ್ಲ!
ಹೌದು ಪಾಕಿಸ್ತಾನದ ಈ ಕ್ಷೌರಿಕನ ಹೇರ್ ಕಟ್ಟಿಂಗ್ ಸ್ಟೈಲ್ ವಿಭಿನ್ನವಾದದ್ದು. ಕ್ರಿಕೆಟ್ ಗೆ ಸಂಬಂಧಪಟ್ಟಂತೆ ಸದಾ ಭಾರತದ ವಿರುದ್ಧ ದೂರಿ ಟ್ವೀಟ್ ಮಾಡುವ ಮೂಲಕ ಫೇಮಸ್ ಆಗಿರುವ ಪಾಕಿಸ್ತಾನಿ ಪತ್ರಕರ್ತ ಒಮರ್ ಆರ್.ಖುರೇಷಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈತ ಸೆಲೂನ್ ನಲ್ಲಿ ವ್ಯಕ್ತಿಯೊಬ್ಬರ ತಲೆ ಕೂದಲಿಗೆ ಯಾವುದೋ ಲೋಷನ್ ಹಚ್ಚಿದ ಬಳಿಕ ಪೌಡರ್ ಹಾಕುತ್ತಾನೆ. ನಂತರ ಲೈಟರ್ ಮೂಲಕ ತಲೆಕೂದಲಿಗೆ ಬೆಂಕಿಹಚ್ಚುತ್ತಾನೆ! ಮುಂದೇನು ಎಂಬುದನ್ನು ವಿಡಿಯೋ ನೋಡಿ…
ಖುರೇಷಿ ಹಾಕಿರುವ ಈ ಪೋಸ್ಟ್ ಭರ್ಜರಿ ವೈರಲ್ ಆಗಿರುವ ಜೊತೆಗೆ ಕೆಲವರು ಆಘಾತ, ಅಚ್ಚರಿ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಇದು ತುಂಬಾ ಅಪಾಯಕಾರಿ ಎಂದು ಟ್ವೀಟ್ ಮಾಡಿದ್ದಾರೆ.