ಹರಿದ್ವಾರ: ಕ್ರಿಕೆಟಿಗ ರಿಷಭ್ ಪಂತ್ ಅವರ ಕಾರು ಅಪಘಾತಕ್ಕೀಡಾದ ರಸ್ತೆಯಲ್ಲಿ ಯಾವುದೇ ಗುಂಡಿಗಳಿಲ್ಲ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಕಳೆದ ಶುಕ್ರವಾರ ರಿಷಭ್ ಪಂತ್ ಅವರ ಮರ್ಸಿಡಿಸ್ ಕಾರು ಉತ್ತರಾಖಂಡ ರಾಜ್ಯದ ರೂರ್ಕಿ ಬಳಿ ಅಪಘಾತಕ್ಕೀಡಾಗಿತ್ತು. ಮುಂಜಾನೆ 5.30ರ ಸುಮಾರಿಗೆ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು, ತಡೆಗೋಡೆಗೆ ಒರೆಸಿಕೊಂಡು ಹೋಗಿತ್ತು. ಘರ್ಷಣೆಗೆ ಕಾರಿಗೆ ಬೆಂಕಿ ಹತ್ತಿಕೊಂಡಿತ್ತು.
ಇದನ್ನೂ ಓದಿ:ಹೆಡ್‌ಫೋನ್ ವಿಚಾರಕ್ಕೆ ನಶೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿ ಸ್ನೇಹಿತನ ಹತ್ಯೆ
ಸದ್ಯ ರಿಷಭ್ ಪಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಕೆ ಕಾಣುತ್ತಿದ್ದಾರೆ. ರಸ್ತೆ ಗುಂಡಿಯನ್ನು ತಪ್ಪಿಸಲು ಹೋಗಿ ಅಪಘಾತವಾಗಿದೆ ಎಂದು ಪಂತ್ ಹೇಳಿಕೊಂಡಿದ್ದಾರೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದರು.
ಆದರೆ ಇದೀಗ ಇದಕ್ಕೆ ಹೆದ್ದಾರಿ ಪ್ರಾಧಿಕಾಲಯ ಉತ್ತರ ನೀಡಿದೆ. ಎನ್‌ಎಚ್‌ಎಐ ರೂರ್ಕಿ ವಿಭಾಗದ ಯೋಜನಾ ನಿರ್ದೇಶಕ ಪ್ರದೀಪ್ ಸಿಂಗ್ ಗುಸೇನ್ ಮಾತನಾಡಿ, “ಅಪಘಾತ ಸಂಭವಿಸಿದ ರಸ್ತೆಯಲ್ಲಿ ಯಾವುದೇ ಹೊಂಡಗಳಿಲ್ಲ, ಹೆದ್ದಾರಿಗೆ ಹೊಂದಿಕೊಂಡಿರುವ ಕಾಲುವೆ (ರಾಜ್‌ವಾಹಾ) ಇರುವ ಕಾರಣ ಕಾರು ಅಪಘಾತಕ್ಕೊಳಗಾದ ರಸ್ತೆ ಸ್ವಲ್ಪ ಕಿರಿದಾಗಿದೆ ಎಂದರು. ಅಪಘಾತದ ಸ್ಥಳವನ್ನು ಬಳಿಕ ಎನ್‌ಎಚ್‌ಎಐ ದುರಸ್ತಿ ಮಾಡಿದೆ ಮತ್ತು ಗುಂಡಿಗಳನ್ನು ಸರಿಪಡಿಸಲಾಗಿದೆ ಎಂಬ ಮಾತನ್ನು ಗುಸೇನ್ ನಿರಾಕರಿಸಿದ್ದಾರೆ.