Advertisement

INDvAUS; ಅಭಿಮಾನಿಗಳ ಕಣ್ಣು ಕೆಂಪಗಾಗಿಸಿದ ಹೆಡ್‌ ವಿಚಿತ್ರ ಸೆಲೆಬ್ರೇಶನ್:‌ ಇದರ ಅರ್ಥವೇನು?

04:16 PM Dec 30, 2024 | Team Udayavani |

ಮೆಲ್ಬೋರ್ನ್:‌ ಭಾರತ ತಂಡವನ್ನು ಆಸೀಸ್‌ ಪ್ರವಾಸದಲ್ಲಿ ಪ್ರಮುಖವಾಗಿ ಕಾಡುತ್ತಿರುವವರು ಟ್ರಾವಿಸ್‌ ಹೆಡ್ (Travis Head).‌ ಬ್ಯಾಟಿಂಗ್‌ ಮಾತ್ರವಲ್ಲದೆ ಬೌಲಿಂಗ್‌ ಮೂಲಕವೂ ಟ್ರಾವಿಸ್‌ ಹೆಡ್‌ ಅವರು ಟೀಂ ಇಂಡಿಯಾವನ್ನು ಕಾಡಿದ್ದಾರೆ. ಮೆಲ್ಬೋರ್ನ್‌ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್‌ ನಲ್ಲಿ ವಿಫಲರಾದರೂ ಬೌಲಿಂಗ್‌ ನಲ್ಲಿ ಪ್ರಮುಖ ವಿಕೆಟ್‌ ಪಡೆದು ಮಿಂಚಿದರು.

Advertisement

ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (MCG) ಬಾಕ್ಸಿಂಗ್ ಡೇ ಟೆಸ್ಟ್‌ನ ಅಂತಿಮ ದಿನದಂದು ಅಂತಿಮ ಸೆಷನ್‌ ನಲ್ಲಿ ಭಾರತದ ರಿಷಬ್ ಪಂತ್ ಅವರನ್ನು ಹೆಡ್ ಔಟ್ ಮಾಡಿದರು. ವಿಕೆಟ್‌ ಗಿಂತ ಅದರ ನಂತರದ ಅವರ ವಿಚಿತ್ರ ಸಂಭ್ರಮಾಚರಣೆಯು ಕ್ರಿಕೆಟ್ ಪ್ರಪಂಚದಲ್ಲಿ ಚರ್ಚೆಗೆ ಕಾರಣವಾಯಿತು.

ಚಹಾದ ನಂತರ, ಭಾರತವು ಮೂರು ವಿಕೆಟ್‌ಗೆ 112 ರನ್‌ ಗಳಿಸಿತ್ತು. ಪಂತ್ ಮತ್ತು ಯಶಸ್ವಿ ಜೈಸ್ವಾಲ್ ತಂಡವನ್ನು ಡ್ರಾ ಮಾಡುವತ್ತಾ ಸಾಗುತ್ತಿದ್ದರು. ಆದರೆ ನಾಯಕ ಪ್ಯಾಟ್ ಕಮಿನ್ಸ್ ಅವರು ಪಾರ್ಟ್‌ ಟೈಮ್‌ ಬೌಲರ್ ಹೆಡ್ ಅವರಿಗೆ ಬೌಲಿಂಗ್‌ ನೀಡಿದರು. ಹೆಡ್‌ ಎಸೆತವನ್ನು ಪಂತ್ ಲಾಂಗ್-ಆನ್ ಕಡೆಗೆ ಏರಿಯಲ್ ಪುಲ್ ಶಾಟ್‌‌ ಬಾರಿಸಿದರು. ಅಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದ ಮಿಚೆಲ್ ಮಾರ್ಷ್ ಸುರಕ್ಷಿತವಾಗಿ ಕ್ಯಾಚ್ ಪಡೆದರು. ಈ ವಿಕೆಟ್ ಟೀಂ ಇಂಡಿಯಾದ ನಾಟಕೀಯ ಕುಸಿತಕ್ಕೆ ನಾಂದಿ ಹಾಡಿತು.

ನಂತರ ನಡೆದದ್ದು ಹೆಡ್‌ ಅವರ ವಿಶಿಷ್ಟ ಆಚರಣೆ. ಸಡಿಲ ಮುಷ್ಟಿಯೊಳಿಗೆ ಮತ್ತೊಂದು ಬೆರಳನ್ನು ತುರುಕಿಸುವಂತೆ ಸಂಜ್ಙೆ ಮಾಡಿದ ಹೆಡ್‌ ಜನರನ್ನು ಗೊಂದಲಕ್ಕೀಡು ಮಾಡಿದರು. ಅವರ ಸಂಭ್ರಮಾಚರಣೆ ಸಂಕೇತವು ಅಶ್ಲೀಲವಾಗಿತ್ತು ಎಂದು ನೋಡುಗರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಚಾನೆಲ್ 7 ರ ಜೇಮ್ಸ್ ಬ್ರೇಶಾ ಇದರ ಬಗ್ಗೆ ಸ್ಪಷ್ಟತೆ ನೀಡಿದ್ದಾರೆ.

Advertisement

2022 ರಲ್ಲಿ ಶ್ರೀಲಂಕಾದಲ್ಲಿ 17 ಎಸೆತಗಳಲ್ಲಿ 10 ರನ್‌ ನೀಡಿ 4 ವಿಕೆಟ್ ಗಳಿಸಿದ್ದ ಬಳಿಕ ಮಂಜುಗಡ್ಡೆಯಿದ್ದ ಲೋಟದೊಳಗೆ ಬೆರಳನ್ನು ಅದ್ದಿರುವ ಫೋಟೊವೊಂದನ್ನು ಹೆಡ್ ಪೋಸ್ಟ್‌ ಮಾಡಿದ್ದರು.‌ ಅದರ ಮೇಲೆ ‘I had to put the digit on ice’ (ನಾನು ಬೆರಳನ್ನು ಮಂಜುಗಡ್ಡೆಯಲ್ಲಿ ಇರಿಸಬೇಕಾಗಿತ್ತು) ಎಂದು ಬರೆದುಕೊಂಡಿದ್ದರು. ಅಂದರೆ ಪ್ರಮುಖ ವಿಕೆಟ್‌ ಪಡೆದ ಬಳಿಕ ತನ್ನ ಬೆರಳು ಬಿಸಿ ಏರಿದೆ ಎಂದು ಹೆಡ್‌ ಸೂಚಿಸುತ್ತಿದ್ದಾರೆ. ಇದನ್ನೇ ಹೆಡ್‌ ಇದೀಗ ಸಂಜ್ಞೆಯ ಮೂಲಕ ಮಾಡಿದ್ದಾರೆ ಎಂದು ಕಾಮೆಂಟೇಟರ್‌ ಬ್ರೇಶಾ ಹೇಳಿದರು.

ಸಹ ವಿವರಣೆಗಾರ ಗ್ರೆಗ್ ಬ್ಲೆವೆಟ್ ಅವರು ಬ್ರೇಶಾರ ವಿವರಣೆಗಾಗಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು, ಆದರೆ ಬ್ರೇಶಾ ಅವರು ಕುತೂಹಲಕಾರಿ ವಿವರಗಳನ್ನು ಬಹಿರಂಗಪಡಿಸಲು ತೆರೆಮರೆಯ ತಂಡಕ್ಕೆ ಧನ್ಯವಾದ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next