Advertisement
ತಾಲೂಕಿನ ಸೋಂಪುರ ಹೋಬಳಿಯ ಶಿವಗಂಗೆಯ ಹೊನ್ನಮ್ಮಗವಿ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮಾಜ ಎರಡು ಒಂದೇ. ಸಮಾಜದ ಸ್ವಾಸ್ಥ್ಯ ಕಾಪಾಡಬೇಕು ಎಂಬ ಭಾವನೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಇದ್ದರೆ ನೇರವಾಗಿ ವೀರಶೈವ ಲಿಂಗಾಯತ ಸ್ವತಂತ್ರ ಧರ್ಮ ಎಂದು ಶಿಫಾರಸ್ಸು ಮಾಡಲಿ, ಇದರಲ್ಲಿ ಏನಾದರೂ ಗೊಂದಲವಿದ್ದರೆ ಸುಮ್ಮನಿರಲಿ, ಸುಖಾ ಸುಮ್ಮನೆ ಸಮಾಜ ಒಡೆಯುವ ಕೆಲಸ ಮಾಡಬಾರದು ಎಂದು ಹೇಳಿದರು.
Related Articles
Advertisement
ಉತ್ತರ ಕರ್ನಾಟಕದ ಕೆಲವು ಸ್ವಾಮೀಜಿಗಳು ಇದಕ್ಕೆ ಬೆಂಬಲ ನೀಡುತ್ತಿದ್ದು, ಸಮಾಜದ ಅಖಂಡತೆಯನ್ನು ತೆಗೆಯುವ ಮೂಲಕ ಸಮಾಜದ ಒಡಕಿದೆ ಕಾರಣವಾಗುತ್ತಿದ್ದಾರೆ. ಉತ್ತರ ಕರ್ನಾಟಕದ ಕೆಲವು ಮಠಗಳು ಹಾಗೂ ಬೇರೆ ಜಾತಿಯಿಂದ ಸ್ವಾಮೀಜಿಯವರು ಬಸವ ತತ್ವವನ್ನು ಒಪ್ಪಿಕೊಂಡು ಲಿಂಗಧಾರಣೆ ಮಾಡಿಕೊಂಡು ಬಂದಿರುವ ಸ್ವಾಮೀಜಿಯವರ ಒತ್ತಾಯ ಹೆಚ್ಚಾಗಿದೆ. ಮಠಗಳ ಪರಂಪರೆಯ ಅರಿವು ತಿಳಿದಿಲ್ಲ ಅಂತಕಾಣುತ್ತಿದೆ ಅದಕ್ಕೆ ಈ ರೀತಿಯ ಒತ್ತಡಗಳು ಆಗುತ್ತಿವೆ ಎಂದರು.
ವೀರಶೈವ ಲಿಂಗಾಯತ ಎರಡೂ ಒಂದೇ ಆಗಿದೆ. ಅಖೀಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾ 1904ರಲ್ಲಿ ಸಮಾಜದ ಅಭಿವೃದ್ಧಿಗೆ ಹುಟ್ಟಿಕೊಂಡ ಸಂಸ್ಥೆ, ನೂರು ವರ್ಷಕ್ಕಿಂತ ಹೆಚ್ಚು ಕೆಲಸ ಮಾಡಿದ ಸಂದರ್ಭದಲ್ಲಿ ಅನೇಕ ಮಹನೀಯರು ಅದರ ಅಧ್ಯಕ್ಷರಾಗಿದ್ದಾರೆ. ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಕಳೆದ ನಾಲ್ಕೈದು ವರ್ಷಗಳ ಹಿಂದೆ ಸುತ್ತೂರು ಮಠದಲ್ಲಿ ಅಖೀಲ ಭಾರತೀಯ ವೀರಶೈವ ಮಹಾಸಭಾದ ಅಧಿವೇಶನವನ್ನು ಎರಡು ದಿನಗಳ ಮಾಡುವುದರ ಮೂಲಕ ಸುತ್ತೂರು ಸಿರಿಗೆರೆ ಸಿದ್ಧಗಂಗೆ ಚಿತ್ರದುರ್ಗದ ಎಲ್ಲಾ ಪಂಚಪೀಠಗಳ ಸ್ವಾಮೀಜಿಯವರು ಪಾಲ್ಗೊಂಡು ತಾವೆಲ್ಲಾ ಒಂದು ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದೆ, ತಾವೆಲ್ಲಾ ಮಹಾಸಭಾವನ್ನು ಒಪ್ಪಿಕೊಂಡು ಅದಕ್ಕೆ ಪೋ›ತ್ಸಾಹ ನೀಡುತ್ತಿರುವ ಸಂದರ್ಭದಲ್ಲಿ ಮಹಾಸಭಾ ತೆಗೆದುಕೊಂಡ ತೀರ್ಮಾನಕ್ಕೆ ತಾವೆಲ್ಲ ಬದ್ಧರಾಗಬೇಕಿದೆ ಎಂದು ಹೇಳಿದರು.