Advertisement
ಶನಿವಾರ (ನ16)ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೇಣುಕಾಚಾರ್ಯ ‘ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ರಾಜಕೀಯ ಏಳಿಗೆ ಸಹಿಸದ ಕೆಲವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪ್ರತ್ಯೇಕ ಪಾದಯಾತ್ರೆಯ ಹಗಲುವೇಷದ ನಾಟಕ ಮಾಡುತ್ತಿದ್ದು ಇದರಲ್ಲಿ ಅವರ ಸ್ವಹಿತಾಸಕ್ತಿಯೇ ಮುಖ್ಯವಾದಂತೆ ಕಾಣುತ್ತಿದೆ. ರಾಜ್ಯಾಧ್ಯಕ್ಷರನ್ನು ಹೊರಗಿಟ್ಟು ನಾನೇ ಮಹಾನಾಯಕ ಎಂದು ಬಿಂಬಿಸಿಕೊಂಡು ಯಾರ ಅನುಮತಿ ಪಡೆಯದೇ ನಡೆಸುವ ಅಭಿಯಾನಕ್ಕೆ ಕಾರ್ಯಕರ್ತರು ಕೈ ಜೋಡಿಸುವುದಿಲ್ಲ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಯಲಿದ್ದು ಯಾವುದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ರಾಜೀನಾಮೆ ನೀಡಬೇಕಾಗಬಹುದು. ವಕ್ಫ್ ಆಸ್ತಿ ವಿಚಾರದ ಬಗ್ಗೆ ಹೋರಾಡಲು ರಾಜ್ಯದಲ್ಲಿ ರಾಜ್ಯಾಧ್ಯಕ್ಷರು, ವಿಧಾನಸಭೆ ಹಾಗೂ ವಿಧಾನಪರಿಷತ್ ಪ್ರತಿಪಕ್ಷದ ನಾಯಕರ ನೇತೃತ್ವದಲ್ಲಿ ಮೂರು ತಂಡ ಮಾಡಲಾಗಿದ್ದು ಈ ಮೂರು ನಾಯಕರ ತಂಡ ಬಿಟ್ಟು ಬೇರೆ ಪರ್ಯಾಯ ತಂಡಕ್ಕೆ ಅವಕಾಶವಿಲ್ಲ” ಎಂದರು.
Related Articles
Advertisement
‘ಜಮೀರ್ ಅವರನ್ನು ಕಾಂಗ್ರೆಸ್ ಹದ್ದುಬಸ್ತಿನಲ್ಲಿ ಇಡದಿದ್ದರೆ ನಾವೇ ಅವರಿಗೆ ತಕ್ಕಪಾಠ ಕಲಿಸಬೇಕಾಗುತ್ತದೆ. ಕಾಂಗ್ರೆಸ್ನ 50 ಶಾಸಕರಿಗೆ 50 ಕೋಟಿ ರೂ. ಆಫರ್ ನೀಡಿದ್ದಾರೆಂಬ ಮುಖ್ಯಮಂತ್ರಿಯವರ ಹೇಳಿಕೆ ಸುಳ್ಳು. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನ ಮಾಡುತ್ತಿಲ್ಲ. ಬದಲಾಗಿ ಸಿದ್ದರಾಮಯ್ಯ ಅವರನ್ನು ಕೆಳಗಿಸಲು ಅವರ ಪಕ್ಷದೊಳಗಿನವರೇ ಸಂಚು ನಡೆಸಿದ್ದು ಅವರಿಂದಲೇ ಸರ್ಕಾರ ಬೀಳಬಹುದು’ ಎಂದರು.
ನಮ್ಮ ನಾಡಿಗೆ ವಕ್ಫ್ ಬೋರ್ಡ್ ಅವಶ್ಯಕತೆ ಇದೆಯೇ? ದೇವಸ್ಥಾನದ ಹಣವನ್ನು ಬೇರೆ ಬೇರೆ ಧರ್ಮದವರಿಗೆ ಹಂಚುವ ರಾಜ್ಯ ಸರ್ಕಾರ, ವಕ್ಫ್ ಆಸ್ತಿಯನ್ನೂ ಇಲ್ಲದವರಿಗೆ ಹಂಚಲು ಕ್ರಮವಹಿಸಲಿ. ತನ್ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ರೈತರ ಪರವೋ, ಹಿಂದುಗಳ ಪರವೋ ಅಥವಾ ಭಯೋತ್ಪಾದನೆ, ಪ್ರಚೋದನೆಯಲ್ಲಿ ತೊಡಗಿರುವವರ ಪರವೋ ಎಂಬುದನ್ನು ಸಾಬೀತುಪಡಿಸಬೇಕು’ ಎಂದರು.