ಸಿದ್ದಾಪುರ: ರಾಘವೇಂದ್ರ ಮಠದಲ್ಲಿ ರಿಸೋರ್ಸ್ ಪಾರ್ ಕ್ರಿಯೇಟರ್ ಡೆಮಾಕ್ರಸಿಯಿಂದ ತಾಲೂಕ ಮಟ್ಟದ ಶಿರಸಿ ಪ್ರತ್ಯೇಕ ಜಿಲ್ಲೆ ಅವಶ್ಯಕ ಮತ್ತು ಅವಕಾಶಗಳ ಕುರಿತು ಜನಾಭಿಪ್ರಾಯ ಮೂಡಿಸುವ ಕುರಿತು ವಿವಿಧ ಸಂಘಸಂಸ್ಥೆಗಳ ಪ್ರಮುಖರ ಸಮಾಲೋಚನ ಸಭೆ ನಡೆಯಿತು.
Advertisement
ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ರಮಾನಂದ ನಾಯ್ಕ ಹರಗಿ ಈಗಾಗಲೇರಿಸೋರ್ಸ್ ಪಾರ್ ಕ್ರಿಯೇಟರ್ ಡೆಮಾಕ್ರಸಿಯಿಂದ ಶಿರಸಿ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳಾದ್ಯಂತ ಜನಾಭಿಪ್ರಾಯ ಮೂಡಿಸುತ್ತಿದ್ದು ಜನರಿಂದ ಸಂಘ ಸಂಸ್ಥೆಗಳಿಂದ ಸಂಪೂರ್ಣ ಧನಾತ್ಮಕ ಅಭಿಪ್ರಾಯ ಹೊರ ಹೊಮ್ಮುತ್ತಿದ್ದು ಸಿದ್ದಾಪುರ
ತಾಲೂಕಿನಾದ್ಯಂತ ಇರುವ ಸಂಘ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು, ಸಾಹಿತಿಗಳು, ಜನಸಾಮಾನ್ಯರು ಮಾಧ್ಯಮ ಮತ್ತು ಸೋಶಿಯಲ್ ಮಿಡಿಯಾ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿ ಸಲಹೆ ಸೂಚನೆ ನೀಡಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿದರು.
ಮಂಗನಕಾಯಿಲೆಗೆ ಸೇರಿದಂತೆ ತುರ್ತು ವೈದ್ಯಕೀಯ ಸೇವೆಗಳು, ಶಿರಸಿ ಜಿಲ್ಲೆಯಾಗುವುದರಿಂದ ವೈದ್ಯಕೀಯ ವಿದ್ಯಾಲಯ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಿದ್ದಾಪುರ: ಶಿರಸಿ ಪ್ರತ್ಯೇಕ ಜಿಲ್ಲೆ ಅವಶ್ಯಕ ಮತ್ತು ಅವಕಾಶಗಳ ಕುರಿತು ಜನಾಭಿಪ್ರಾಯ ಮೂಡಿಸುವ ಕುರಿತು ಸಮಾಲೋಚನಾ ಸಭೆ ನಡೆಯಿತು. ಸೇವೆ, ಕೃಷಿ ,ತೋಟಗಾರಿಕಾ ಸಂಶೋಧನಾ ಪ್ರಯೋಜನ, ಮೂಭೂತ ಸೌಕರ್ಯಗಳು, ಹಿಂದುಳಿದ, ಎಸ್ಸಿಎಸ್‌ಟಿ ಸಮುದಾಯಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಹೆಚ್ಚುತ್ತದೆ. ಪ್ರವಾಸೋದ್ಯಮ ಮತ್ತು ಸ್ಥಳೀಯ ಉದ್ಯೋಗ ಸೃಷ್ಟಿಗೆ ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ಶಾಸಕರು ಸರ್ಕಾರದ ಮಟ್ಟದಲ್ಲಿ ಪ್ರಬಲವಾಗಿ ಮಂಡಿಸಲು ಅವರಿಗೆ ಜನ ಅಭಿಪ್ರಾಯ ಮೂಡಿಸುವುದರೊಂದಿಗೆ ಶಕ್ತಿ ತುಂಬಬೇಕು ಎಂದರು.
Related Articles
Advertisement