Advertisement

MUDA Case: ಸಿದ್ದರಾಮಯ್ಯ ಲೋಕಾಯುಕ್ತ ವಿಚಾರಣೆ ಮ್ಯಾಚ್‌ ಫಿಕ್ಸಾ?: ಆರ್‌.ಅಶೋಕ್‌

12:14 AM Nov 07, 2024 | Team Udayavani |

ಬೆಂಗಳೂರು: ಆರೋಪಿಯೊಬ್ಬನನ್ನು ಎಷ್ಟು ಸಮಯ ವಿಚಾರಣೆ ಮಾಡಬೇಕು ಎಂಬುದು ತನಿಖಾಧಿಕಾರಿಯ ವಿವೇಚನೆ ಮತ್ತು ಸ್ವಾತಂತ್ರ್ಯ. ಆದರೆ, ಮುಡಾ ನಿವೇಶನ ಹಂಚಿಕೆ ಪ್ರಕರಣದ ವಿಚಾರಣೆಗೆ ಹಾಜರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ಪ್ರವಾಸ ಕಾರ್ಯಕ್ರಮಗಳ ಪಟ್ಟಿಯಲ್ಲಿ ಲೋಕಾಯುಕ್ತ ತನಿಖೆಯ ಟೈಮ್‌ ಟೇಬಲ್‌ ಅನ್ನೂ ಹಾಕಿದ್ದು, ಇದೇನು ಮ್ಯಾಚ್‌ ಫಿಕ್ಸಿಂಗಾ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಪ್ರಶ್ನಿಸಿದ್ದಾರೆ.

Advertisement

ಬುಧವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ತನಿಖಾಧಿಕಾರಿ ವಿಚಾರಣೆಯನ್ನು ಎಷ್ಟು ಗಂಟೆಗೆ ಮುಗಿಸುತ್ತಾರೆ ಎಂಬುದು ಮುಖ್ಯಮಂತ್ರಿ ಕಚೇರಿಗೆ ಹೇಗೆ ಗೊತಾಗುತ್ತದೆ? ಮೈಸೂರಿಗೆ ಬೆಳಗ್ಗೆ 10 ಗಂಟೆಗೆ ತಲುಪುವ ಸಿಎಂ, ಮಧ್ಯಾಹ್ನ 12 ಗಂಟೆಗೆ ಚನ್ನಪಟ್ಟಣ ಪ್ರಚಾರಕ್ಕಾಗಿ ಮೈಸೂರಿನಿಂದ ಹೊರಡುವ ಬಗ್ಗೆ ಪ್ರವಾಸ ಕಾರ್ಯಕ್ರಮ ಪಟ್ಟಿಯಲ್ಲಿ ಹಾಕಿದ್ದಾರೆ. ಅಂದರೆ, ತನಿಖೆಯ ಸಮಯವನ್ನೂ ಸಿಎಂ ಕಚೇರಿಯೇ ನಿಗದಿಪಡಿಸಿತ್ತೇ ಎಂದು ಪ್ರಶ್ನೆ ಮಾಡಿದ್ದಾರೆ.

ಯಾವುದೇ ಪ್ರಕರಣದಲ್ಲಿ ಮೊದಲ ಆರೋಪಿಯಿಂದ ತನಿಖೆ ಆರಂಭಿಸುತ್ತಾರೋ ಅಥವಾ ಕೊನೆಯ ಆರೋಪಿಯಿಂದ ತನಿಖೆ ಮಾಡುತ್ತಾರೋ? ಮುಡಾ ನಿವೇಶನ ಹಂಚಿಕೆ ಪ್ರಕರಣದ ಮೊದಲ ಆರೋಪಿ ಸಿದ್ದರಾಮಯ್ಯರನ್ನು ಕೊನೆಗೆ ಕರೆಸಿದ್ದಾರೆ. ದೂರುದಾರ ಸ್ನೇಹಮಯಿ ಕೃಷ್ಣ ಅವರು ಸಿಬಿಐ ತನಿಖೆಗೆ ಕೋರಿದ್ದರಿಂದ ಎ1 ಸಿದ್ದರಾಮಯ್ಯ ತನಿಖೆ ನಡೆದಿದೆ. ಇಲ್ಲದಿದ್ದರೆ, ಅದೂ ಆಗುತ್ತಿರಲಿಲ್ಲ ಎಂದು ದೂರಿದರು.

ಪುಸ್ತಕ ತೆರೆದರೆ ಲೂಟಿ ಬಿಟ್ಟರೆ ಬೇರೇನೂ ಇಲ್ಲ :
ಸಿದ್ದರಾಮಯ್ಯನವರು ತಮ್ಮ 40 ವರ್ಷಗಳ ಜೀವನ ತೆರೆದ ಪುಸ್ತಕ ಎಂದಿದ್ದಾರೆ. ಕಳೆದ 16 ತಿಂಗಳ ಇವರ ಪುಸ್ತಕ ತೆರೆದರೆ ಬರೀ ಲೂಟಿಯ ಕಪ್ಪುಚುಕ್ಕಿಗಳಿದ್ದು, ಒಂದೂ ಬಿಳಿ ಚುಕ್ಕಿ ಇಲ್ಲ. ಸ್ವತಃ ಮುಖ್ಯಮಂತ್ರಿಯೇ ನಿವೇಶನ ಲೂಟಿ ಮಾಡಿ ತಾವೇ ನೇಮಿಸಿದ ಪೊಲೀಸ್‌ ಅಧಿಕಾರಿ ಮುಂದೆ ತನಿಖೆಗೆ ಕುಳಿತುಕೊಳ್ಳಲು ನಾಚಿಕೆ ಆಗಬೇಕಲ್ಲವೇ ಎಂದು ಪ್ರಶ್ನಿಸಿದರು.

Advertisement

ಸಿದ್ದರಾಮಯ್ಯರ ಪುಸ್ತಕದಲ್ಲಿ ನಾವು ತೆರೆದ ಪುಟದಲ್ಲೆಲ್ಲ ಮುಡಾ ಹಗರಣ, ಅಬಕಾರಿ ಹಗರಣ, ವಾಲ್ಮೀಕಿ ನಿಗಮದ ಹಗರಣ ಸೇರಿ ಹಗರಣಗಳೇ ತುಂಬಿವೆ. ಸಿದ್ದರಾಮಯ್ಯನವರು 62 ಕೋಟಿ ಕೊಟ್ಟರೆ ಸೈಟ್‌ ವಾಪಸ್‌ ಕೊಡುವುದಾಗಿ ಹೇಳಿದ್ದರು. ಬಳಿಕ 14 ಸೈಟ್‌ ಹಾಗೆ ಏಕೆ ವಾಪಸ್‌ ಕೊಟ್ಟರು? ವಾಲ್ಮೀಕಿ ನಿಗಮದ ಹಗರಣ ಸಂಬಂಧ ನಾಗೇಂದ್ರ ಪತ್ರಿಕಾಗೋಷ್ಠಿ ಮಾಡಿ ನಾನು ನಿರಪರಾಧಿ ಎಂದಿದ್ದರು. ಯಾಕೆ ಅವರು ಜೈಲಿಗೆ ಹೋದರು? ಎಂದು ಕೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next