Advertisement

ಆರೋಗ್ಯ ಕಾಳಜಿಗೆ ಸಮಯವೇ ಇಲ್ಲ

12:14 PM Oct 21, 2018 | Team Udayavani |

ಕೆಂಗೇರಿ: ಉಪನಗರದ ಹಳೇ ಬಸ್‌ ನಿಲ್ದಾಣದ ತಿಮ್ಮಪ್ಪ ಗರಡಿ ಮನೆ ಕಟ್ಟಡದ ಮೇಲೆ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಶಾಸಕ ಎಸ್‌.ಟಿ.ಸೋಮಶೇಖರ್‌ ಭೂಮಿ ಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಯುವಕರು ಸೇರಿದಂತೆ ಪುರುಷರು ಗರಡಿ ಮನೆಗೆ ತೆರಳಿ ಕಸರತ್ತು ಮಾಡಿ ತಮ್ಮ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು.

Advertisement

ಆದರೆ ಇಂದಿನ ಒತ್ತಡದ ಜೀವನದಲ್ಲಿ ಅದು ಸಾಧ್ಯವಾಗದೇ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದರು. ಇಂದು ಗರಡಿಮನೆಗಳು ಕಣ್ಮರೆಯಾಗಿ ಆ ಜಾಗದಲ್ಲಿ ಅಧುನೀಕ ಜಿಮ್‌ಗಳು ಹುಟ್ಟಿಕೊಂಡಿವೆ. ಆದರೆ ಬಡವರು ಆ ಜಿಮ್‌ಗಳಿಗೆ ಹೋಗಿ, ದುಬಾರಿ ಶುಲ್ಕ ನೀಡಿ ವ್ಯಾಯಾಮ ಮಾಡಲು ಸಾದ್ಯವಿಲ್ಲ. ಆದ್ದರಿಂದ ಸರಕಾರವೇ ಉದ್ಯಾನವನಗಳಲ್ಲಿ ಸಾರ್ವಜನಿಕರ ಅನುಕೂಲಕ್ಕೆ ವ್ಯಾಯಾಮ ಕೇಂದ್ರಗಳನ್ನು ಸ್ಥಾಪಿಸುತ್ತಿದೆ.

ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದಲೇ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಕೆಂಗೇರಿಯ ಗರಡಿ ಮನೆ ಅಬಿವೃದ್ಧಿಗೆ ಭೂಮಿ ಪೂಜೆ ನೇರವೇರಿಸಲಾಗಿದೆ ಎಂದು ಹೇಳಿದರು. ಪಾಲಿಕೆ ನಾಮ ನಿರ್ದೇಶಿತ ಸದಸ್ಯ ಸುರೇಶ್‌, ಮುಖಂಡರಾದ ಪ್ರಭಾಕರ್‌, ಶಾಂತಕುಮಾರ್‌, ಸಂಜೀವ್‌ ಕುಮಾರ್‌, ಲೋಹಿತ್‌, ವಿಜಿಕುಮಾರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next