Advertisement

ರಾಜ್ಯದಲ್ಲಿ ಹೊಸ ಪ್ರಕರಣ ಪತ್ತೆಯಿಲ್ಲ

11:21 AM Mar 22, 2020 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಯಾವುದೇ ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ. ಈ ಮಧ್ಯೆ, ಕೊರೊನಾಗೆ ಚಿಕಿತ್ಸೆ ಪಡೆಯುತ್ತಿರುವವರ ಪೈಕಿ ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ಸಂಪೂರ್ಣ ಗುಣಮುಖವಾಗಿ ಮನೆಗೆ ತೆರಳಿದ್ದಾರೆ. ರಾಜ್ಯದಲ್ಲಿ ಗುರುವಾರದವರೆಗೆ 15 ಕೊರೊನಾ ವೈರಸ್‌ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು.

Advertisement

ಮಧುಚಂದ್ರಕ್ಕೆಂದು ಗ್ರೀಸ್‌ ದೇಶಕ್ಕೆ ತೆರಳಿ ಹಿಂದಿರುಗಿದ್ದ 26 ವರ್ಷದ ಬೆಂಗಳೂರಿನ ಟೆಕ್ಕಿಯಲ್ಲಿ ಮಾರ್ಚ್‌ 12ರಂದು ಕೊರೊನಾ ಸೋಂಕು ದೃಢ ಪಟ್ಟಿತ್ತು. ಇವರು 5ನೇ ಕೊರೊನಾ ಸೋಂಕಿ ತರಾಗಿ ಜಯನಗರ ಜನರಲ್‌ ಆಸ್ಪತ್ರೆಗೆ ದಾಖ ಲಾ ಗಿದ್ದರು. ನಿರಂತರ ಎಂಟು ದಿನಗಳ ಚಿಕಿತ್ಸೆ ಬಳಿಕ ಸಂಪೂರ್ಣ ಗುಣಮುಖರಾಗಿ ಶುಕ್ರ ವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಇ

ವರಿಗೆ ಯಾವುದೇ ತೀವ್ರ ರೋಗ ಲಕ್ಷಣಗಳು ಇರಲಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಜ್ವರ, ಕೆಮ್ಮು ಇತ್ತು. ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಮೂಲಕ ಶೀಘ್ರ ವಾಗಿ ಚೇತರಿಸಿಕೊಂಡಿದ್ದಾರೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮನೆಗೆ ತೆರಳಿರುವ ವ್ಯಕ್ತಿಗೆ ಮುಂದಿನ 14 ದಿನಗಳ ಕಾಲ ಮನೆಯಲ್ಲಿ ಪ್ರತ್ಯೇಕ ನಿಗಾದಲ್ಲಿ ಇರುವಂತೆ ಸೂಚಿಸಲಾಗಿದ್ದು, ಇವರ ಸಂಪರ್ಕ ಹೊಂದಿದ್ದವರು ನಿಗಾದಲ್ಲಿ ಮುಂದುವರಿದಿದ್ದಾರೆ.

ಇನ್ನು, ರಾಜ್ಯದಲ್ಲಿ 15 ಕೊರೊನಾ ಸೋಂಕಿ ತರ ಪೈಕಿ ಐದು ಮಂದಿ ಗುಣಮುಖರಾಗಿದ್ದಾರೆ. ಸೋಂಕು ತಗುಲಿದರೆ ಜೀವ ಹೋಗುತ್ತೆ ಎಂಬ ಭಯವಿತ್ತು. ಸಂಪೂರ್ಣ ಗುಣಮುಖ ರಾಗುತ್ತಿರುವುದು ಸಮಾಧಾನ ತಂದಿದೆ. ಉಳಿದ ನಾಲ್ಕು ಮಂದಿ ಪೈಕಿ ನಿಗಾ ಅವಧಿ ಪೂರೈಸಿಕೊಂಡು ಭಾನುವಾರ ಇಬ್ಬರು, ಬುಧವಾರ ಇಬ್ಬರು ಆಸ್ಪತ್ರೆಯಿಂದ ಮನೆಗೆ ತೆರಳಲಿದ್ದಾರೆ.

ಹೊಸದಾಗಿ ಸೋಂಕು ದೃಢಪಟ್ಟಿಲ್ಲ: ಈ ಮಧ್ಯೆ, ವಿಧಾನಸೌಧದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಮಾತನಾಡಿ, ರಾಜ್ಯದಲ್ಲಿ ಶುಕ್ರವಾರ ಯಾವುದೇ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ವರದಿಯಾಗಿಲ್ಲ. ಆದರೆ, ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬಂದಿದ್ದರಿಂದ ಒಂದೇ ದಿನ 981 ಮಂದಿಯನ್ನು ನಿಗಾಗೆ ಒಳಪಡಿಸಲು ಗುರುತಿಸಲಾಗಿದೆ.

Advertisement

ಇವರಲ್ಲಿ ರೋಗ ಲಕ್ಷಣ ಹೊಂದಿದ್ದ 59 ಮಂದಿಯನ್ನು ಶುಕ್ರವಾರ ಆಸ್ಪತ್ರೆಗೆ ಒಳರೋಗಿಗಳಾಗಿ ದಾಖಲಿಸಿಕೊಂಡು ಪ್ರತ್ಯೇಕ ನಿಗಾದಲ್ಲಿ ಇರಿಸಲಾಗಿದೆ. ಈ ಹಿಂದೆ ದಾಖಲಾಗಿದ್ದ 15 ಮಂದಿಯನ್ನು ಮನೆಗೆ ಕಳಿಸಲಾಗಿದೆ. 64 ಜನರ ಗಂಟಲು ದ್ರಾವಣ ಮತ್ತು ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. 55 ಮಂದಿಯ ಪರೀಕ್ಷಾ ವರದಿ ಬಂದಿದ್ದು, ಯಾರಲ್ಲೂ ಸೋಂಕು ದೃಢಪಟ್ಟಿಲ್ಲ ಎಂದು ಮಾಹಿತಿ ನೀಡಿದರು.

ಈವರೆಗೆ 1,22,778 ಪ್ರಯಾಣಿಕರ ತಪಾಸಣೆ ನಡೆಸಲಾಗಿದ್ದು, 4,030 ಮಂದಿ ಯನ್ನು ನಿಗಾದಲ್ಲಿ ಇರಿಸಲಾಗಿದೆ. 756 ಮಂದಿ 28 ದಿನಗಳ ನಿಗಾದಿಂದ ಹೊರಬಂದಿದ್ದಾರೆ. 1,207 ಮಂದಿಯ ರಕ್ತದ ಮಾದರಿ ಸಂಗ್ರಹಿ ಸಲಾಗಿದ್ದು, 970 ಮಂದಿಯ ವರದಿ ನೆಗೆಟಿವ್‌ ಬಂದಿದೆ ಎಂದು ತಿಳಿಸಿದರು.

ಮತ್ತಷ್ಟು ರೈಲು ಸಂಚಾರ ರದ್ದು
ಮಂಗಳೂರು: ಕೊರೊನಾ ಸೋಂಕು ಹರಡುವುದನ್ನು ತಪ್ಪಿಸುವ ಉದ್ದೇಶದಿಂದ ಮುನ್ನೆಚ್ಚರಿಕಾ ಕ್ರಮವಾಗಿ ಮತ್ತಷ್ಟು ರೈಲುಗಳ ಸಂಚಾರ ರದ್ದು ಮಾಡಲಾಗಿದೆ. ವಾರಕ್ಕೊಮ್ಮೆ ಓಡುವ ಯಶವಂತಪುರ-ಮಂಗಳೂರು ಸೆಂಟ್ರಲ್‌ ರೈಲು (16565) ಮಾ. 22 ಮತ್ತು 29ರಂದು ಓಡಾಟ ನಡೆಸುವುದಿಲ್ಲ. ಮಂಗಳೂರು ಸೆಂಟ್ರಲ್‌-ಯಶವಂತಪುರ ನಡುವಿನ ರೈಲು (16566) ಮಾ. 23 ಮತ್ತು 30ರಂದು ಓಡಾಟ ನಡೆಸುವುದಿಲ್ಲ.

ಆಭರಣ ಮಳಿಗೆ ಬಂದ್‌
ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಶನಿವಾರದಿಂದ ಒಂದು ವಾರ ಕಾಲ ಚಿನ್ನಾಭರಣಗಳ ಮಳಿಗೆಗಳನ್ನು ಬಂದ್‌ ಮಾಡಲು ಜ್ಯುವೆಲ್ಲರಿ ಅಸೋಸಿಯೇಷನ್‌ ಫಾರ್‌ ಬೆಂಗ ಳೂರು ನಿರ್ಧರಿಸಿದೆ. ಮಾ.21ರಿಂದ 28ರವರೆಗೆ ಚಿನ್ನಾಭರಣ ಮಳಿಗೆಗಳನ್ನು ಬಂದ್‌ ಮಾಡಲು ಅಸೋಸಿ ಯೇಷನ್‌ ತನ್ನ ಎಲ್ಲಾ ಸದಸ್ಯರಿಗೆ ಸೂಚಿಸಿದೆ ಎಂದು ಅಸೋಸಿಯೇಷನ್‌ ಅಧ್ಯಕ್ಷ ರವಿಕುಮಾರ್‌ ತಿಳಿಸಿದ್ದಾರೆ. ಇದೇ ವೇಳೆ, ಬೆಂಗಳೂರು ಹೋಲ್‌ ಸೇಲ್‌ ಕ್ಲಾತ್‌ ಮರ್ಚೆಂಟ್ಸ್‌ ಅಸೋಸಿಯೇಷನ್‌ ಕೂಡ ಮಾ.22ರಿಂದ 24ರವರೆಗೆ ಸಗಟು ವ್ಯಾಪಾರ ಬಂದ್‌ ಮಾಡುವುದಾಗಿ ತಿಳಿಸಿದೆ. ಪರಿಸ್ಥಿತಿ ನೋಡಿಕೊಂಡು ನಂತರದ ದಿನಗಳಲ್ಲಿ ವ್ಯಾಪಾರ ವಹಿವಾಟು ಆರಂಭಿಸುವುದಾಗಿ ಸಂಘದ ಅಧ್ಯಕ್ಷ ಯೋಗೇಶ್‌ ಬಿ.ಸೇಟ್‌ ತಿಳಿಸಿ¨ªಾರೆ.

ಪರೀಕ್ಷಾ ಕೇಂದ್ರ ಕಾರ್ಯಾರಂಭ
ಕಲಬುರಗಿ: ಇಲ್ಲಿನ ಜಿಮ್ಸ್‌ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಕೊರೊನಾ ರೋಗ ಪತ್ತೆ ಪ್ರಯೋಗಾಲಯ (ಪರೀಕ್ಷಾ ಕೇಂದ್ರ)ದ ವರದಿಗಳನ್ನು ತಾಳೆ ಹಾಕಲು ಮೂರು ಮಾದರಿಗಳನ್ನು ಪುಣೆಗೆ ಕಳುಹಿಸಲಾಗಿದೆ. ಪುಣೆ ವರದಿ ಶನಿವಾರ ಮಧ್ಯಾಹ್ನದ ಹೊತ್ತಿಗೆ ಬರಲಿದೆ. ಜಿಮ್ಸ್‌ದಲ್ಲಿನ ಪ್ರಯೋಗಾಲಯ ಹಾಗೂ ಪುಣೆಯಲ್ಲಿನ ಪ್ರಯೋಗಾಲಯದ ವರದಿ ಒಂದೇ ತೆರನಾದರೆ ಕಲಬುರಗಿ ಪ್ರಯೋಗಾಲಯಕ್ಕೆ ಹಸಿರು ನಿಶಾನೆ ದೊರಕಿದಂತೆ ಆಗುತ್ತದೆ. ಈ ನಡುವೆ, ಸಿಎಂ ಯಡಿಯೂರಪ್ಪ ಅವರು, ಶನಿವಾರ ಕಲಬುರಗಿಯಲ್ಲಿ ಕೊರೊನಾ ಪತ್ತೆ ಪರೀಕ್ಷಾ ಕೇಂದ್ರ ಶುರುವಾಗಲಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಆರೋಗ್ಯ ಇಲಾಖೆ ಶುಕ್ರವಾರ ಕೈಗೊಂಡ ಕ್ರಮಗಳು
-ಮಾದರಿಗಾಗಿ ಪ್ರಕರಣಗಳನ್ನು ಆಯ್ಕೆ ಮಾಡಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಲ್ಯಾಬ್‌ ಪರೀಕ್ಷಾ ಸಲಹೆ ನೀಡಲಾಗಿದೆ.

-ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರ ಸಂಪರ್ಕ ಪತ್ತೆಗೆ ಒಬ್ಬ ವೈದ್ಯರ, ಒಬ್ಬ ಶುಶ್ರೂಷಕಿ, ಒಬ್ಬ ಎಂಎಸ್‌ಡಬ್ಲೂ ಒಳಗೊಂಡ ನೂರು ಜನರ ತಂಡ ನಿಯೋಜನೆ ಮಾಡಲಾಗಿದೆ.

-ಕೊಡಗಿನ ಕೊರೊನಾ ಸೋಂಕಿತರ ಸಂಪರ್ಕ ಪತ್ತೆ ಕಾರ್ಯ ನಡೆಯುತ್ತಿದ್ದು, ಮಾರ್ಚ್‌ 15ರಂದು ಸಂಜೆ ವಿಮಾನ ನಿಲ್ದಾಣದಿಂದ ಕೆಂಗೇರಿಗೆ ಪ್ರಯಾಣಿಸಿದ್ದ ವಾಯುವಜ್ರ ಬಸ್‌ (ಕೆಎ 57 ಎಫ್ 908) ಹಾಗೂ ಕೆಂಗೇರಿಯಿಂದ ಮಡಿಕೇರಿಗೆ ತೆರಳಿದ್ದ ರಾಜಹಂಸ ಬಸ್‌ (ಕೆ.ಎ.ಎಫ್ 3170) ಪ್ರಯಾಣಿಕರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈಗಾಗಲೇ ಬಸ್‌ ಚಾಲಕ, ನಿರ್ವಾಹಕರಿಗೆ ಮನೆಯಲ್ಲಿ ನಿಗಾವಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next