Advertisement

Supreme Court; ಧರ್ಮಕ್ಕೊಂದು ರಾಜ್ಯ ಕೂಡದು: ತಿರುಪತಿ ಕುರಿತ ಅರ್ಜಿ ತಿರಸ್ಕೃತ

01:28 AM Nov 09, 2024 | Team Udayavani |

ಹೊಸದಿಲ್ಲಿ: ತಿರುಪತಿಯನ್ನು ಪ್ರತ್ಯೇಕ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಎಂಬ ಬೇಡಿಕೆಯನ್ನು ಸುಪ್ರೀಂಕೋರ್ಟ್‌ ಶುಕ್ರವಾರ ತಿರಸ್ಕರಿಸಿದೆ. ಲಡ್ಡು ಸಿದ್ಧಪಡಿಸಲು ಪ್ರಾಣಿಗಳ ಕೊಬ್ಬು ಮಿಶ್ರಿತ ತುಪ್ಪ ಬಳಕೆ ಮಾಡಲಾಗಿದೆ ಎಂಬ ಪ್ರಕರಣವನ್ನು ತನಿ ಖೆಗಾಗಿ ಸಿಬಿಐಗೆ ವಹಿಸಬೇಕು ಎಂದು ಡಾ| ಕೆ.ಎ. ಪೌಲ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠ ಈ ಆದೇಶ ನೀಡಿದೆ.

Advertisement

ಕ್ಯಾಥೊಲಿಕ್‌ ಸಮುದಾಯದಕ್ಕೆ ವ್ಯಾಟಿಕನ್‌ ಸಿಟಿಯನ್ನು ಪ್ರತ್ಯೇಕ ದೇಶ ಮಾಡುವುದಿ ದ್ದರೆ 34 ಲಕ್ಷ ಮಂದಿ ಇರುವ ತಿರುಪತಿಯನ್ನು ಏಕೆ ಪ್ರತ್ಯೇಕ ರಾಜ್ಯವನ್ನಾಗಿಸಬಾರದು ಎಂದು ಅರ್ಜಿದಾ ರರು ಪ್ರಶ್ನಿಸಿದರು. ನಿಮ್ಮ ವಾದ ಕೇಳಿದರೆ ಪುರಿ, ಬದರೀನಾಥ, ಕೇದಾರನಾಥ, ಗುರುದ್ವಾರ ಇರುವ ಸ್ಥಳಕ್ಕೆ ಪ್ರತ್ಯೇಕ ರಾಜ್ಯ ಸ್ಥಾನಮಾನ ನೀಡಬೇಕಾಗುತ್ತದೆ. ನಿಮ್ಮ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದಿತು.

Advertisement

Udayavani is now on Telegram. Click here to join our channel and stay updated with the latest news.

Next