Advertisement

ಭಾರತೀಯತೆ ಒಪ್ಪದವರು ಇಲ್ಲಿರಬೇಕಿಲ್ಲ: ಅದಮಾರು ಶ್ರೀ

01:02 AM Apr 17, 2022 | Team Udayavani |

ರಾಯಚೂರು: ಭಾರತೀಯತೆಗೆ ಯಾರೆಲ್ಲ ವಿರೋಧ ಮಾಡುತ್ತಾರೋ ಅವರು ಇಲ್ಲಿರುವ ಅಗತ್ಯವಿಲ್ಲ. ಇಲ್ಲಿನ ನೆಲ-ಜಲ-ಗಾಳಿ ಬಳಸು ವವರೆಲ್ಲ ಭಾರತೀಯರೇ ಎಂದು ಅದಮಾರು ಪೀಠದ ಶ್ರೀ ವಿಶ್ವಪ್ರಿಯ ತೀರ್ಥರು ಅಭಿಪ್ರಾಯಪಟ್ಟರು.

Advertisement

ನಗರದಲ್ಲಿ ಶನಿವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಎಲ್ಲರೂ ಒಂದಾಗಿ, ಚೆನ್ನಾಗಿ ಬದುಕಬೇಕೆಂಬ ಭಾವನೆ ಕೇವಲ ಹಿಂದೂಗಳು ಮಾಡಿದರೆ ಸಾಲದು; ಎಲ್ಲ ಧರ್ಮೀಯರು ಮಾಡಬೇಕು. ಈಚೆಗೆ ಸಮಾಜದಲ್ಲಿ ನಡೆಯುತ್ತಿರುವ ಧಾರ್ಮಿಕ ಬೆಳವಣಿಗೆಗಳು ಸಮಾಜಕ್ಕೆ ಮಾರಕವಾದದ್ದು. ಇಲ್ಲಿ ನಾವು ಯಾರನ್ನೂ ದೂರಿ ಪ್ರಯೋಜನವಿಲ್ಲ. ಇದು ನನ್ನ ದೇಶ ಎಂಬ ಭಾವನೆ ಪ್ರತಿಯೊಬ್ಬ ಹಿಂದೂವಿನ ಮನಸ್ಸಿಗೆ ಬರಬೇಕು ಎಂದರು.

ಈ ಮಣ್ಣಲ್ಲಿ ಇರುವವರು, ಇಲ್ಲಿ ಉಸಿರಾಡುವವರು, ನೀರು ಕುಡಿಯುವವರು, ಆಹಾರ ಸೇವಿಸುವವರೆಲ್ಲರೂ ಭಾರತೀಯರೇ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅಂಥವರಿಗೆ ಹಿಂದೂ ಗಳು ಮನದಟ್ಟು ಮಾಡಬೇಕು. ನೀವೂ ಬದುಕಬೇಕು, ನಾವೂ ಬದುಕಬೇಕು ಎಂಬ ವಾತಾವರಣ ಸೃಷ್ಟಿಸಬೇಕು. ಅಂದಾಗ ಮಾತ್ರ ನಮ್ಮ ದೇಶ ಇಡೀ ವಿಶ್ವಕ್ಕೆ ಮಾದರಿಯಾಗಲು ಸಾಧ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next