Advertisement

ಇತ್ತ ಬಿಜೆಪಿ ಇಲ್ಲ, ಅತ್ತ ಜೆಡಿಎಸ್‌ ಇಲ್ಲವೇ ಇಲ್ಲ

03:45 PM May 09, 2018 | Team Udayavani |

ನಂಜನಗೂಡು: ಹಳೆ ಮೈಸೂರು ಪ್ರಾಂತ್ಯದ 10 ಜಿಲ್ಲೆಗಳಲ್ಲಿ ಬಿಜೆಪಿ ಹೆಸರೇ ಇಲ್ಲ, ಉಳಿದ 18 ಕಡೆ ಜೆಡಿಎಸ್‌ ಇಲ್ಲವೇ ಇಲ್ಲಾ, ಪರಿಸ್ಥಿತಿ ಹೀಗಿರುವಾಗ ಅವರೆಲ್ಲಿಂದ ಅಧಿಕಾರಕ್ಕೆ ಬರಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. 

Advertisement

ಇಲ್ಲಿನ ಕಾಂಗ್ರೆಸ್‌ ಪ್ರಚಾರ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಕಳಲೆ ಪರ ಮತಯಾಚಿಸಿ ಮಾತನಾಡಿದ ಅವರು, ಎರಡು ಪಕ್ಷಗಳದ್ದು ಹಗಲು ಕನಸು. ಇವರಿದ್ದಲ್ಲಿ ಅವರದ್ದು ಶೂನ್ಯ ಸಂಪಾದನೆ. ಅವರಿದ್ದಲ್ಲಿ ಇವರದೂ ಅದೇ ಸಾಧನೆ.

ಹಾಗಿದ್ದಾಗ ಎರಡು ಶೂನ್ಯಗಳ ನಡುವೆ ಒಳ-ಹೊರ ಒಪ್ಪಂದವಾದರೂ ನಮಗೇನು ಭಯವೇ ಇಲ್ಲಾ ಎನ್ನುತ್ತ  ರಾಜ್ಯದಲ್ಲಿ ನಾವೇ ಅಧಿಕಾರಕ್ಕೆ ಬರ್ತೇವೆ, ನಾನೇ ಮುಖ್ಯಮಂತ್ರಿ. ನೀವು ಮಾತ್ರ ಕಳಲೆಯನ್ನು ಮತ್ತೆ ಚುನಾಯಿಸಿ ವಿಧಾನಸಭೆಗೆ ಕಳುಹಿಸಬೇಕು ಎಂದರು.

ಅಪ್ಪ-ಮಗ ಕಣ್ಣಲ್ಲಿ  ನೀರು ಸುರಿಸಿದರೆ ಜನತೆ ಮತ ನೀಡಲು ಸಾಧ್ಯವೇ ಎಂದ ಸಿದ್ದರಾಮಯ್ಯ, ಉಪ ಚುನಾವಣೆಯಲ್ಲಿ ನಮ್ಮಿಂದಲೇ ಇಲ್ಲಿ ಗೆಲುವು ಎಂದಿದ್ದ ಜೆಡಿಎಸ್‌, ಈಗ ಎಷ್ಟು ಮತ ಪಡೆಯುತ್ತೆ? ಅದರ ನಿಜ ಬಲವೇನು ಎನ್ನುವುದು 12ರಂದು ತೀರ್ಮಾನವಾಗುತ್ತೆ ಎಂದು ಆ ಪಕ್ಷದ ನಾಯಕರನ್ನು ಮಾರ್ಮಿಕವಾಗಿ ಚುಚ್ಚಿದರು. 

ಸೋತರೂ ಜಂಬ ಮಾತ್ರ ಹೋಗಿಲ್ಲ: ಉಪ ಚುನಾವಣೆಯಲ್ಲಿ ಹೀನಾಮಾನವಾಗಿ ಸೋತು ಮನೆ ಸೇರಿದರೂ ಇನ್ನೂ ಜಂಬ ಹೋಗಿಲ್ಲ. ಉಪ ಚುನಾವಣೆಯಲ್ಲ ಕಳಲೆ ತಮ್ಮ ಪ್ರತಿಸ್ಪರ್ಧಿ ಎಂದು ಒಪ್ಪಿಕೊಂಡಿದ್ದರೆ ಏನಾಗುತ್ತಿತ್ತು.

Advertisement

ಆದರೆ ಆ ಮಹಾನುಭಾವರು ಇದು ನನ್ನ ಸಿದ್ದರಾಮಯ್ಯ ನಡುವಿನ ಚುನಾವಣೆ ಎಂದರು. ಇದನ್ನು ಕೇಳಿದ ನೀವು ಸರಿಯಾಗಿ ಪಾಠ ಕಲಿಸಿದಿರಿ. ಅದಕ್ಕಾಗಿ ಕೃತಜ್ಞತೆ ಅರ್ಪಿಸುತ್ತೇನೆ. ಪಾಪ ಅವರೇ ಇಲ್ಲಿನ ಅಭಿವೃದ್ಧಿ ಮಾಡಬಹುದಿತ್ತು. ಅದು ಅವರಿಗೆ ಗೊತ್ತೆ ಇಲ್ಲ.

ಹಾಗಾಗಿ ಸಚವ ಮಹದೇವಪ್ಪಬಂದು ನಂಜನಗೂಡಿನ ಅಭಿವೃದ್ಧಿ ಮಾಡಬೇಕಾಯಿತು. ಕಳಲೆ ಕಾರ್ಯದಕ್ಷತೆ ಕಾಣಲು ಅವರನ್ನು ಪೂರ್ಣಾವಧಿ ಶಾಸಕರನ್ನಾಗಿಸಿ ಎಂದು ಮನವಿ ಮಾಡಿದರು. ಸಭೆಯಲ್ಲಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಸಂಸದ ಆರ್‌.ಧ್ರುವನಾರಾಯಣ, ಕಾಂಗ್ರೆಸ್‌ ಅಭ್ಯರ್ಥಿ ಕಳಲೆ  ಮಾತನಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next