ಬೆಂಗಳೂರು: ನಟ ಶಿವರಾಜ್ ಕುಮಾರ್ (ShivaRajkumar) ಅವರ ಮನೆಯ ಮುದ್ದಿನ ಸಾಕು ನಾಯಿ ”ನೀಮೋ” ಸಾ*ವನ್ನಪ್ಪಿದೆ. ಈ ಬಗ್ಗೆ ಗೀತಾ ಶಿವರಾಜ್ ಕುಮಾರ್ ಅವರು ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.
ಶಿವರಾಜ್ ಕುಮಾರ್ ದಂಪತಿ ಸದ್ಯ ಅಮೆರಿಕದಲ್ಲಿದ್ದಾರೆ. ಶಿವರಾಜ್ ಕುಮಾರ್ ಅವರು ಚಿಕಿತ್ಸೆಗಾಗಿ ತೆರಳಿದ್ದು, ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆದಿರುವ ಬಗ್ಗೆ ಹೇಳಿಕೊಂಡಿದ್ದಾರೆ.
ಶಿವರಾಜ್‌ಕುಮಾರ್ ಅವರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಅಮೆರಿಕದಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಈ ಹೊತ್ತಿನಲ್ಲೇ ಅವರ ಮನೆ ನಾಯಿ ನೀಮೋ ನಿಧನ ಹೊಂದಿದೆ.
ಶಿವರಾಜ್ ಕುಮಾರ್ ಅವರ ಹಿರಿಯ ಪುತ್ರಿ ನಿರುಪಮಾ ಅವರಿಗೆ ಅವರ ಪತಿ ಮದುವೆಗೆ ಮೊದಲೆ ಶ್ವಾನವನ್ನು ಉಡುಗೊರೆಯ ರೂಪದಲ್ಲಿ ನೀಡಿದ್ದರು. ನಿರುಪಮಾ ವೈದ್ಯೆಯಾಗಿರುವ ಕಾರಣ ಅದನ್ನು ಸಮಯಕ್ಕೆ ಸರಿಯಾಗಿ ಆರೈಕೆ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಶಿವರಾಜ್ ಕುಮಾರ್ ಅವರ ಮನೆಯಲ್ಲೇ ಸಾಕಲಾಗುತ್ತಿತ್ತು. ಮುದ್ದಿನ ಪಗ್ ತಳಿಯ ಶ್ವಾನ ಕೊನೆಯುಸಿರೆಳೆದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ವಾಗಿ ಬರೆದ ಪತ್ರವನ್ನು ಗೀತಾ ಶಿವರಾಜ್ ಕುಮಾರ್ ಪೋಸ್ಟ್ ಮಾಡಿದ್ದು, ಪ್ರಾಣಿ ಪ್ರಿಯರ ಕಣ್ಣಲ್ಲಿ ನೀರು ಜಿನುಗುವಂತೆ ಮಾಡಿದೆ.