Advertisement
ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರದ ಸಹಕಾರ, ಚೌಕಾಸಿ ಮಧ್ಯೆಯೂ ವಿವಿ ತನ್ನ ಸಮಸ್ಯೆ ತಾನೇ ನೀಗಿಸಿಕೊಂಡು ದೇಶದ ವಿವಿಧ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳಿಗೆ ನೀರಿನ ಸಮಸ್ಯೆ ಉಲಣಗೊಳ್ಳದಂತೆ ಕ್ರಮ ಕೈಗೊಂಡಿದೆ ಎಂದರು. ಈ ರ್ಷ ಉತ್ತಮ ಮಳೆಯಾಗಿದೆ. ಆದ್ದರಿಂದ ನೀರಿನ ಪೂರೈಕೆ ಮೂಲವಾದ ಅಮರ್ಜಾ ಆಣೆಕಟ್ಟೆಯಲ್ಲಿ ಈ ಬಾರಿ ನೀರು ಸಂಗ್ರಹವಾಗಿದೆ.
Related Articles
Advertisement
ಮೂವರು ಡಿಬಾರ್: ರಾತ್ರಿ ನಾನು ಎಲ್ಲ ವಿದ್ಯಾರ್ಥಿಗಳ ಚಟುವಟಿಕೆಗಳ ಮೇಲೆ ಖುದ್ದು ನಿಗಾ ಇಡುತ್ತೇನೆ. ಹೀಗಾಗಿ ತೊಂದರೆಗಳು ಕಡಿಮೆ. ಒಬ್ಬನ ಮೇಲೆ ಹಲ್ಲೆ ಮಾಡಿದ್ದರಿಂದ ಮೂವರು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿದ್ದೇನೆ ಎಂದು ಹೇಳಿದರು. ಈಚೆಗೆ ವಿದ್ಯಾರ್ಥಿನಿಯರು ಕಲುಷಿತ ಆಹಾರ ಸೇವನೆಯಿಂದ ಅಸ್ವಸ್ಥರಾದದ್ದಲ್ಲ, ಅವರಿಗೆ ಕೆಲವು ಹವಾಮಾನ ಮತ್ತು ದೈಹಿಕ ಸಮಸ್ಯೆಗಳಿದ್ದವು. ಅದರಿಂದಾಗಿ ಹೀಗೆ ಆಗಿರಬಹುದು ಎಂದು ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಬಸ್‌ಗಾಗಿ 2 ಕೋಟಿ ರೂ. ಗಳ ದುಬಾರಿ ಶುಲ್ಕ ಭರಿಸಲಾಗುತ್ತಿತ್ತು. ಈಗ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಮೂರು ಹೆಚ್ಚುವರಿ ಬಸ್‌ಗಳನ್ನು, ಎರಡು ಟಿಪ್ಪರ್‌ಗಳನ್ನು ಒದಗಿಸಿದ್ದು, ಸಮಸ್ಯೆ ನಿವಾರಣೆಯಾಗಿದೆ ಎಂದು ತಿಳಿಸಿದರು.
ವಿಶ್ವವಿದ್ಯಾಲಯಗಳಲ್ಲಿ ಒಟ್ಟು 8000 ಹುದ್ದೆಗಳು ಖಾಲಿ ಇದ್ದು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸುಮಾರು 110 ಹುದ್ದೆಗಳು ಖಾಲಿ ಇವೆ. ರೋಸ್ಟರ್ ಅಡಿ ಕೆಲವರು ನ್ಯಾಯಾಲಯಕ್ಕೆ ಹೋಗಿದ್ದು, ಆ ಸಮಸ್ಯೆ ನಿವಾರಿಸಲಾಗಿದ್ದು, ಶೀಘ್ರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಹೇಳಿದರು. ಸಮಕುಲಪತಿ ಪ್ರೊ| ಜಿ.ಆರ್. ನಾಯಕ್, ಕುಲಸಚಿವ (ಮೌಲ್ಯಮಾಪನ) ಪ್ರೊ| ಚಂದ್ರಕಾಂತ ಯಾತನೂರು ಹಾಜರಿದ್ದರು.