Advertisement
ಇದು ರಾಜ್ಯದ ಪೋಷಕರ ಮನವಿ. ಉದಯವಾಣಿ ನಡೆಸಿದ ಸಮೀಕ್ಷೆಯಲ್ಲಿ ಬಹು ಉತ್ಸಾಹದಿಂದ ಪಾಲ್ಗೊಂಡಿದ್ದವರು ಇವರೇ. ಮಕ್ಕಳಿಗೆ ಪರೀಕ್ಷೆ ಮಾಡುವುದಕ್ಕೆ ಸಹಮತ ವ್ಯಕ್ತಪಡಿಸಿರುವ ಹೆತ್ತವರು, ಎಸೆಸೆಲ್ಸಿ ಮತ್ತು ಪಿಯುಸಿ ಜೀವನದ ಅತ್ಯಂತ ಪ್ರಮುಖ ಘಟ್ಟ ಎಂದೂ ಹೇಳಿದ್ದಾರೆ. ಈ ವರ್ಷ ಪಿಯುಸಿ ಪರೀಕ್ಷೆ ಮಾಡಿ ಅಂತ ಶೇ.57ರಷ್ಟು ಹೆತ್ತವರು ಸರಕಾರಕ್ಕೆ ಸಲಹೆ ನೀಡಿದ್ದಾರೆ. ಉಳಿದವರಲ್ಲಿ ಈ ವರ್ಷ ಬೇಡ ಎಂದವರು ಶೇ.23.5.
ಪರೀಕ್ಷಾ ವಿಷಯದ ವಿಚಾರದಲ್ಲೂ ಹೆತ್ತವರು ಬುದ್ಧಿವಂತಿಕೆ ತೋರಿದ್ದಾರೆ. ಪ್ರಮುಖ ವಿಷಯಗಳ ಮೇಲೆ ಪರೀಕ್ಷೆ ನಡೆಸಿ ಅಂತ ಶೇ.41.3ರಷ್ಟು ಹೆತ್ತವರು ಹೇಳಿದ್ದಾರೆ. ಪಠ್ಯಕ್ರಮದ ಅರ್ಧ ವಿಷಯದ ಮೇಲೆ ಪರೀಕ್ಷೆ ನಡೆಯಲಿ ಎಂದು ಶೇ.34.3ರಷ್ಟು ಮಂದಿ ಅಭಿಪ್ರಾಯ ಪಟ್ಟಿದ್ದಾರೆ. ಶೇ.24.4ರಷ್ಟು ಹೆತ್ತವರು ಪೂರ್ಣ ವಿಷಯದ ಮೇಲೆ ಪರೀಕ್ಷೆ ನಡೆಯಲಿ ಎಂದಿದ್ದಾರೆ. ಇನ್ನು ಪ್ರತಿ ರೂಮಿನಲ್ಲಿ 20 ಮಕ್ಕಳನ್ನು ಕೂರಿಸಿ ಪರೀಕ್ಷೆ ಬರೆಸಿದರೆ ಸಾಕು ಎಂದು ಕೆಲವರು ಹೇಳಿದರೆ, ಕಳೆದ ವರ್ಷದಂತೆಯೇ ಸುರಕ್ಷಿತವಾಗಿ ಪರೀಕ್ಷೆ ಮಾಡಲಿ ಎಂದು ಹೇಳಿ ಸರಕಾರದ ಬೆನ್ನನ್ನೂ ತಟ್ಟಿದ್ದಾರೆ. ಹಾಗೆಯೇ ಪರೀಕ್ಷೆ ಮುಂದೂಡುತ್ತಾ ಹೋದರೆ ಅವರಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಹೀಗಾಗಿ ಬೇಗನೇ ಮುಗಿಯಲಿ ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕಾಗಿಯೇ ಬಹಳಷ್ಟು ಹೆತ್ತವರು ಜುಲೈಯಲ್ಲೇ ಪರೀಕ್ಷೆ ನಡೆಯಲಿ ಎಂದೂ ಹೇಳಿದ್ದಾರೆ.
Related Articles
Advertisement