Advertisement

Congress ನಂತ ಮೋಸಗಾರರು ಬೇರಾರು ಇಲ್ಲ: AAP ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು

06:41 PM Oct 12, 2023 | Team Udayavani |

ಕೊಪ್ಪಳ: ಜನರಿಗೆ ಗ್ಯಾರಂಟಿ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಜನರಿಗೆ ಮೂರೇ ತಿಂಗಳಲ್ಲಿ ಸೋಲನ್ನು ಕಾಣಿಸುತ್ತಿದೆ. ಅವರಂತ ಮೋಸಗಾರರು ಬೇರಾರು ಇಲ್ಲ ಎಂದೆನಿಸುತ್ತಿದೆ ಎಂದು ಆಪ್ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕಿಡಿ ಕಾರಿದ್ದಾರೆ.

Advertisement

ನಗರದ ಮೀಡಿಯಾ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಜ್ಯದಲ್ಲಿ ಮೂರು ಪಕ್ಷದವರಿಗೆ ಒಂದು ಸಿದ್ದಾಂತವಿಲ್ಲ. ರಾಜ್ಯದ ಜನತೆ ಬಿಜೆಪಿ ದೂರ ಇಡಲು ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟಿತು. ಕಾಂಗ್ರೆಸ್ ಇಷ್ಟು ವರ್ಷ ಸುದೀರ್ಘ ಆಡಳಿತ ನಡೆಸಿದಾಗ ಯಾಕೆ ಗ್ಯಾರಂಟಿ ಯೋಜನೆ ಜಾರಿ ಮಾಡಲಿಲ್ಲ. ಇವರು ಕೇಜ್ರಿವಾಲ್ ಚಿಂತನೆ ಕದ್ದು ಯೋಜನೆ ಮಾಡಿದ್ದಾರೆ. ಗ್ಯಾರಂಟಿಗಳು ಜನರಿಗೆ ಸರಿಯಾಗಿ ತಲುಪಿಲ್ಲ. ಇವರು ಮೋಸ ಮಾಡಿದ್ದಾರೆ. ಎಸ್‌ಸಿಎಸ್‌ಟಿಗೆ ಮೀಸಲಿಟ್ಟ34 ಸಾವಿರ ಕೋಟಿ ಹಣದಲ್ಲಿ 11 ಸಾವಿರ ಕೋಟಿ ಕಿತ್ತು ಈ ಗ್ಯಾರಂಟಿಗೆ ಕೊಟ್ಟಿದ್ದಾರೆ. ಕೇಳಿದರೆ ಬಡ ಕುಟುಂಬಗಳಿಗೆ ಈ ಯೋಜನೆ ತಲುಪುತ್ತಿಲ್ಲವೇ ಎಂದೆನ್ನುತ್ತಾರೆ. ಮೊದಲೇ ಬಜೆಟ್‌ನಲ್ಲಿ ಎಸ್‌ಸಿ ಎಸ್‌ಟಿಗೆ ಕಡಿಮೆ ಹಣ ಇಡಬಹುದಿತ್ತಲ್ಲ. ನುಡಿದಂತೆ ನಡೆದಿದ್ದೇವೆ ಎನ್ನುವವರು ಪರಿಶಿಷ್ಟರಿಗೆ ಅನ್ಯಾಯ ಮಾಡಿದ್ದಾರೆ ಎಂದರು.

ಮೂರೇ ತಿಂಗಳಲ್ಲಿ ಕಾಂಗ್ರೆಸ್ ಸೋಲನ್ನು ಕಾಣುತ್ತಿದೆ. ಕಾವೇರಿ ನೀರು ಹರಿಸುವ ವಿಚಾರದಲ್ಲಿಯೂ ನಿರಂತರ ಸುಳ್ಳು ಹೇಳಿದರು. ಇದಕ್ಕೆ ಪರಿಹಾರ ಹುಡುಕಲಿಲ್ಲ. ಸಂಕಷ್ಟ ಸಮಯದಲ್ಲಿ ಏನು ಮಾಡಬೇಕು ಎನ್ನುವ ಸೂತ್ರ ಹುಡುಕಲಿಲ್ಲ. ನಿತ್ಯ 3 ಸಾವಿರ ಕ್ಯೂಸೆಕ್ ನೀರು ಹರಿಸುತ್ತಿದ್ದಾರೆ. ನೀರಿಲ್ಲದ ವೇಳೆ ದರೋಡೆ, ಕಳ್ಳತನ ಮಾಡಲಿಕ್ಕಾಗುತ್ತಾ ? ಮೊದಲು ನೀರು ಹರಿಸುವುದುನ್ನು ತಡೆಯಿರಿ, ಕಾನೂನು ಉಲ್ಲಂಘನೆಯಾದರೂ ನಮಗೆ ಕುಡಿಯಲು ನೀರಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿ. ಪಕ್ಷ ಬೇಧ ಮರೆತು ನಾವು ಹೋರಾಟಲು ಸಿದ್ದರಿದ್ದೇವೆ. ಸದನ ಕರೆದು ಒಕ್ಕೋರಲಿನ ನಿರ್ಣಯ ಮಾಡಿ ಎಂದರು.

ರಾಷ್ಟ್ರೀಯ ನಾಯಕರು ನನಗೆ ರಾಜ್ಯಾಧ್ಯಕ್ಷ ಸ್ಥಾನದ ಜವಬ್ದಾರಿ ಕೊಟ್ಟಿದ್ದಾರೆ. ನಮ್ಮಲ್ಲಿ ಪರ್ಯಾಯ ವ್ಯವಸ್ಥೆ ಮಾಡಲು ಚಿಂತನೆ ನಡೆದಿದೆ. ನಾವು ಹಣ, ಜಾತಿಯಲ್ಲಿ ಬಲಾಢ್ಯರಲ್ಲ. ಶೂನ್ಯದಿಂದ ಸಂಘಟನೆ ಆರಂಭ ಮಾಡಿದ್ದೇವೆ. ದೇಶದಲ್ಲಿ ಆಪ್ ಎರಡೂ ಪಾರ್ಟಿಗಳನ್ನು ನಿರ್ನಾಮ ಮಾಡಿದೆ. ನಮ್ಮ ಪಕ್ಷದಲ್ಲಿ ಸಂಘಟನೆ ಗಟ್ಡಿಗೊಳಿಸುವುದು ಹೊಸ ಚಿಂತನೆಯಾಗಿದೆ. ಸಂವಹನ ಕಾರ್ಯಕ್ರಮ ಮಾಡಲು ಸಿದ್ದತೆ ನಡೆದಿದೆ. ಚಿಂತಕರ ಭೇಟಿ ಮಾಡಲಿದ್ದೇವೆ. ಒಂದು ದಿವಸ ಒಂದು ಜಿಲ್ಲೆ ಎಂಬ ಚಿಂತನೆಯಡಿ ಪಕ್ಷ ಸಂಘಟನೆ ಮಾಡಿ ಹಳ್ಳಿಗಳಿಗೆ ತೆರಳಿ ಜನರ ಬೇಕು ಬೇಡಿಕೆಗಳ ಬಗ್ಗೆ ಚರ್ಚೆ ಮಾಡಲಿದ್ದೇವೆ. ಜನರೊಂದಿಗೆ ಈಗಿನ ಸರ್ಕಾರದ ಕುರಿತು ತಿಳಿಯಲಿದ್ದೇವೆ. ಮುಂದೇನು ಬೇಕು ಎನ್ನುವ ಅಭಿಪ್ರಾಯ ಕೇಳಲಿದ್ದೇವೆ ಎಂದರು.

ಆಪ್ ರಾಷ್ಟ್ರ ಮಟ್ಟದಲ್ಲಿ ಮೋದಿಯನ್ನು ಮಣಿಸಲು ಇಂಡಿಯಾ ಜೊತೆಗೆ ಸೇರಿದೆ. ಲೋಕಸಭಾ ಚುನಾವಣೆಗೆ ಮಾತ್ರ. ಆದರೆ ಸ್ಥಳೀಯ ಚುನಾವಣೆಯಲ್ಲಿ ನಾವು ಒಪ್ಪಂದವಿಲ್ಲ ಎಂದರು.

Advertisement

ಕುಷ್ಟಗಿಯ ಶಾಲೆಯೊಂದರಲ್ಲಿ ಸಾವಿರ ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯವಿದೆಯಂತೆ. ಇದನ್ನು ಮಾಧ್ಯಮದಲ್ಲಿ ನೋಡಿದ್ದೇನೆ. ಇಂತಹ ದುಸ್ಥಿತಿ ಸರ್ಕಾರಿ ಶಾಲೆಗಳಿವೆ. ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳನ್ನು ಕೊಲೆ ಮಾಡಿದೆ. ಆ ಶಾಲೆಗೆ ನಾನು ಭೇಟಿ ಮಾಡುವೆ. ಅವರದ್ದೇ ಸರ್ಕಾರದ ಸಚಿವರ, ಶಾಸಕ ದೊಡ್ಡ ದೊಡ್ಡ ಖಾಸಗಿ ಶಾಲೆಗಳು ಎದ್ದು ನಿಂತಿವೆ ಎಂದರು.

ಶಿವರಾಜ ತಂಗಡಗಿಗೆ ಕಾಳಜಿಯಿಲ್ಲ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜವಬ್ದಾರಿ ಹೊತ್ತಿರುವ ಶಿವರಾಜ ತಂಗಡಗಿ ಅವರಿಗೆ ಸ್ವಲ್ಪವೂ ಕಾಳಜಿಯಿಲ್ಲ. ಅಧಿಕಾರಕ್ಕೆ ಬಂದು 3 ತಿಂಗಳ ಗತಿಸಿದರೂ 14 ಅಕಾಡೆಮಿಗಳು, 4 ಪ್ರಾಧಿಕಾರಗಳಿಗೆ ಅಧ್ಯಕ್ಷರ ನೇಮಕ ಮಾಡಿಲ್ಲ. ಕೆಲವು ಪ್ರಾಧಿಕಾರಕ್ಕೆ ಜಾಗವೇ ಇಲ್ಲದಂತ ಪರಿಸ್ಥಿತಿ ಇದೆ. ಕೇಳಿದರೆ ಹಣದ ಕೊರತೆ ಎನ್ನುವ ಮಾತನ್ನಾಡುತ್ತಿದ್ದಾರೆ. ನಿಜಕ್ಕೂ ನಾಚಿಕೆ ಬರುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಆಪ್ ಮುಖಂಡರಾದ ಅರ್ಜುನ್ ಅಲಗಿಗೌಡರ್, ರುದ್ರಯ್ಯ ನವಲಿಹಿರೇಮಠ, ಕಂಠಪ್ಪ ಮಾಳೆಕೊಪ್ಪ ಸೇರಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next