Advertisement
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಭಾರತ ಜೋಡೋ ಹೆಸರಿನಲ್ಲಿ ಸಮಯ ವ್ಯರ್ಥ ಪ್ರಯತ್ನ ಮಾಡುವ ಬದಲು ಪ್ರಾದೇಶಿಕ ಪಕ್ಷಕ್ಕಿಂತ ಹೀನಾಯ ಸ್ಥಿತಿಯಲ್ಲಿ ಇರುವ ಕಾಂಗ್ರೆಸ್ ಜೋಡೋ ಯಾತ್ರೆ ಮಾಬೇಕಿತ್ತು ಎಂದರು.
Related Articles
Advertisement
ದೇವೇಗೌಡರು ಪ್ರಧಾನಿ ಆಗಿದ್ದಾಗ ಆಲಮಟ್ಟಿ ಶಾಸ್ತ್ರೀ ಜಲಾಶಯದ ಗೇಟ್ ಎತ್ತರಿಸುವ ವಿಷಯದಲ್ಲಿ ಅಂಧ್ರಪ್ರದೇಶ ಮುಖ್ಯಮಂತ್ರಿ ಬೆಂಬಲ ಸರ್ಕಾರಕ್ಕೆ ನೀಡಿದ ವಾಪಸ್ ಪಡೆಯಯವುದಾಗಿ ಹೇಳಿದರೂ ಅಧಿಕಾರ ಬಿಟ್ಟರೆ ಹೊರತು, ರಾಜ್ಯದ ಜನರ ಹಿತ ಬಲಿಕೊಡಲಿಲ್ಲ. ಕುಮಾರಸ್ವಾಮಿ ಸರ್ಕಾರ ಅಧಿಕಾರಕ್ಕೆ ಬಂದಾಗ ರೈತರ ಸಾಲ ಮನ್ನಾ ಮಾಡಿದೆ. ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಎಂದು ಯಾತ್ರೆ ಮಾಡಿದವರು ಮಾಡಿದ್ದೇನು ಎಂಬುದನ್ನು ಜನತೆಯ ಮುಂದಿಡಲಿ ಎಂದು ಆಗ್ರಹಿಸಿದರು.
ಬಿಜೆಪಿ ಪಕ್ಷಕ್ಕೆ ಮೋದಿ ಚಿಂತೆ, ಕಾಂಗ್ರೆಸ್ ಪಕ್ಷಕ್ಕೆಗೆ ರಾಹುಲ್ ಚಿಂತೆ, ಜೆಡಿಎಸ್ ಪಕ್ಷಕ್ಕೆ ಮಾತ್ರ ರಾಜ್ಯದ ಚಿಂತೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ಯಾತ್ರೆ, ಕಾರ್ಯಕ್ರಮ ಮಾಡುತ್ತಿವೆ. ಆದರೆ ಜನರಿಗೆ ತಾವು ಏನು ಮಾಡಿದ್ದೇವೆ, ಮಾಡುತ್ತೇವೆ ಎಂದು ಹೇಳುತ್ತಿಲ್ಲ. ಕೇವಲ ಪರ್ಸಂಟೇಜ್ ಗಾಗಿ ಕಿತ್ತಾಡುತ್ತಿವೆ ಎಂದು ದೂರಿದರು.
ನಮ್ಮ ಪಕ್ಷ ರಾಜ್ಯದ ಜನತೆಗಾಗಿ ಧ್ವನಿ ಎತ್ತುತ್ತಿದ್ದು, ನಾವು ಮಾಡುವ ಕಾರ್ಯಕ್ರಮಗಳೇನು ಎಂಬುದನ್ನು ಜನತೆಯ ಮುಂದೆ ಇಡುತ್ತಿದ್ದೇವೆ. ನಮಗೆ ಹೈಕಮಾಂಡ್ ಇಲ್ಲ, ಮೇಲಿನವರಿಗೆ ಹಣ ಕೊಡಬೇಕಿಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅವರ ಆಶಯದಂತೆ ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಸರ್ಕಾರವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಎಂದರು.
ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪಂಚರತ್ನ ಯಾತ್ರೆ ಮೂಲಕ ಸಂಕಲ್ಪ ಮಾಡಿದೆ. ನವೆಂಬರ್ 1 ರಿಂದ ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ಪಂಚರತ್ನ ಯಾತ್ರೆ ಆರಂಭಗೊಳ್ಳಲಿದೆ. ನಮ್ಮ ಸರ್ಕಾರ ರಾಜ್ಯದ ಜನತೆಯ ಆಶಯ ಈಡೇರಿಸದಿದ್ದಲ್ಲಿ ಮತ್ತೆ ಚುನಾವಣೆಯಲ್ಲಿ ಜನತೆಯ ಮುಂದೆ ಬರುವುದಿಲ್ಲ ಎಂದು ಕುಮಾರಸ್ವಾಮಿ ಶಪಥ ಮಾಡಿದ್ದಾರೆ ಎಂದರು.
ಇಂದಿರಾ ಗಾಂಧಿ ಬಿರುಗಾಳಿಯ ಮಧ್ಯೆಯೂ ಸಂಸ್ಥಾನ ಕಾಂಗ್ರೆಸ್ ಅಖಂಡ ವಿಜಯಪುರ ಜಿಲ್ಲೆಯಲ್ಲಿ ಗೆಲುವು ಸಾಧಿಸಿತ್ತು. ವಿಜಯಪುರ ಜಿಲ್ಲೆಯ ಮಟ್ಟಿಗೆ ಜೆಡಿಎಸ್ ಭದ್ರಕೋಟೆ. ಕಳೆದ ಚುನಾವಣೆಯಲ್ಲಿ ರಾಜ್ಯದ ಜನರು 5 ಕ್ಷೇತ್ರದಲ್ಲಿ ಗೆಲ್ಲುವ ಹಂತದಲ್ಲಿ ಇದ್ದು, ಇಬ್ಬರು ಶಾಸಕರನ್ನು ಗೆಲ್ಲಿಸಿದ್ದಾರೆ. 2023 ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯಲ್ಲೂ 8 ಕ್ಷೇತ್ರ ಗೆಲ್ಲುವ ಮಟ್ಟಕ್ಕೆ ಪಕ್ಷದ ಸಂಘಟನೆ ನಡೆದಿದೆ ಎಂದರು.