Advertisement

ಸೌರವ್ಯೂಹದಾಚೆ ಇವೆ 5 ಸಾವಿರ ಗ್ರಹಗಳು! ನಾಸಾ ವಿಜ್ಞಾನಿಗಳಿಂದ ಈ ಆವಿಷ್ಕಾರ

10:12 PM Mar 22, 2022 | Team Udayavani |

ನ್ಯೂಯಾರ್ಕ್‌: ನಮ್ಮ ಸೌರವ್ಯವಸ್ಥೆಯ ಹೊರಗೆ 5 ಸಾವಿರದಷ್ಟು ಜಗತ್ತುಗಳಿದ್ದು, ಆ ಪೈಕಿ ಕೆಲವು ಭೂಮಿಯಂತೆಯೇ ಇವೆ ಎಂದರೆ ನಂಬುತ್ತೀರಾ?

Advertisement

ನಂಬಲೇಬೇಕು. ಬ್ರಹ್ಮಾಂಡದ ಗಡಿಯಾಚೆ ಒಂದು ಹೆಜ್ಜೆ ಮುಂದೆ ಇಟ್ಟಿರುವ ನಾಸಾ, ಬಾಹ್ಯಾಕಾಶದಾಳದಲ್ಲಿ ಆವಿಷ್ಕಾರಕ್ಕೊಳಪಡಲು ಕಾಯುತ್ತಿರುವ 5 ಸಾವಿರಕ್ಕೂ ಅಧಿಕ ಗ್ರಹಗಳಿವೆ ಎಂಬುದನ್ನು ಕಂಡುಕೊಂಡಿದೆ.

ಅಮೆರಿಕದ ಬಾಹ್ಯಾಕಾಶ ಸಂಸ್ಥೆಯು 65 ಹೊಸ ಗ್ರಹಗಳನ್ನು ಆವಿಷ್ಕರಿಸಿದ್ದು, ನಮ್ಮ ಸೌರವ್ಯವಸ್ಥೆಯ ಹೊರಗೆ ಪ್ರತ್ಯೇಕ ನಕ್ಷತ್ರಗಳ ಕಕ್ಷೆಯಲ್ಲಿ ಸುತ್ತುತ್ತಿರುವ ಸಾವಿರಾರು ಗ್ರಹಗಳ ಅಸ್ತಿತ್ವವನ್ನೂ ಪತ್ತೆಹಚ್ಚಿದೆ. ಈ ಮೂಲಕ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಹೊಸ ಮೈಲುಗಲ್ಲನ್ನು ನಾಸಾ ಸಾಧಿಸಿದೆ.

ಈಗ ಪತ್ತೆಯಾಗಿರುವ 65 ಬಾಹ್ಯಗ್ರಹಗಳ ಮೇಲ್ಮೈ ಗಳಲ್ಲಿ ನೀರು, ಸೂಕ್ಷ್ಮಾಣುಜೀವಿಗಳು, ಅನಿಲಗಳು ಅಥವಾ ಜೀವಿಗಳಿವೆಯೇ ಎಂಬುದರ ಬಗ್ಗೆ ಅಧ್ಯಯನವನ್ನೂ ನಾಸಾ ನಡೆಸಲಿದೆ.

ಹೇಗಿವೆ 5 ಸಾವಿರ ಗ್ರಹಗಳು?
ಸೌರವ್ಯವಸ್ಥೆಯ ಹೊರಗೆ ಪತ್ತೆಯಾಗಿರುವ 5 ಸಾವಿರ ಗ್ರಹಗಳು ಸಂಯೋಜನೆ ಹಾಗೂ ಗುಣವಿಶೇಷಗಳಲ್ಲಿ ಒಂದಕ್ಕೊಂದು ಭಿನ್ನವಾಗಿವೆ. ಕೆಲವೊಂದು ಭೂಮಿಯ ಮಾದರಿಯ ಸಣ್ಣ ಗಾತ್ರದ ಶಿಲೆಗಳಿರುವ ಲೋಕಗಳಾದರೆ, ಗುರು ಗ್ರಹಕ್ಕಿಂತಲೂ ದೊಡ್ಡ ಗಾತ್ರದ ಗ್ರಹಗಳು, ನಮ್ಮ ಗ್ರಹಕ್ಕಿಂತ ದೊಡ್ಡದಾಗಿರುವ ಸೂಪರ್‌-ಅರ್ತ್‌ಗಳು, ನೆಪ್ಚೂನ್ ನ ಕಿರಿಯ ಸೋದರನಂತಿರುವ ಮಿನಿ ನೆಪ್ಚೂನ್ ಗಳೂ ಅಲ್ಲಿವೆ. ಏಕಕಾಲಕ್ಕೆ ಎರಡು ನಕ್ಷತ್ರಗಳ ಸುತ್ತ ಸುತ್ತುತ್ತಿರುವ ಗ್ರಹಗಳೂ, ಮೃತ ನಕ್ಷತ್ರಗಳ ಕಕ್ಷೆಯಲ್ಲಿ ಸುತ್ತುತ್ತಿರುವ ಗ್ರಹಗಳೂ ಕಳೆದ 3 ದಶಕಗಳಲ್ಲಿ ಪತ್ತೆಯಾಗಿವೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next