Advertisement

ಕೊಣಾಜೆ: ತಡರಾತ್ರಿ ಮನೆಗೆ ನುಗ್ಗಿದ ಕಳ್ಳರು, ಚಿನ್ನಾಭರಣ, ನಗದು ಕಳವು

08:14 AM Mar 25, 2021 | Team Udayavani |

ಉಳ್ಳಾಲ: ಕೊಣಾಜೆ ಕೋಡಿಜಾಲ್ ಮನೆಗೆ ಕನ್ನ ಹಾಕಿರುವ ಕಳ್ಳರು ಸುಮಾರು 700 ಗ್ರಾಂ ಗೂ ಅಧಿಕ ಚಿನ್ನಾಭರಣ ಮತ್ತು ಐದು ಲಕ್ಷ ರೂ. ನಗದು ಕಳವು ಮಾಡಿದ ಘಟನೆ ನಡೆದಿದೆ.

Advertisement

ಕೋಡಿಜಾಲ್ ನಿವಾಸಿ ಅಬೀಬ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, ತಡರಾತ್ರಿ ಮನೆಗೆ ನುಗ್ಗಿದ ಕಳ್ಳರು ಮನೆಯ ಬೆಡ್ ರೂಂನಲ್ಲಿದ್ದ ಕಪಾಟಿನಿಂದ ಚಿನ್ನಾಭರಣ ಕಳವು ಮಾಡಿದ್ದಾರೆ.

ಇದನ್ನೂ ಓದಿ:ಕಂಟೈನರ್- ಬಸ್ ಮುಖಾಮುಖಿ: ಹೊತ್ತಿ ಉರಿದ ಬಸ್, ಕಂಟೈನರ್ ಚಾಲಕ ಸಜೀವ ದಹನ

ಲಾಕರ್ ನಲ್ಲಿಟ್ಟಿದ್ದ ಬಂಗಾರ ತಂದಿದ್ದರು: ಅಬೀದ್ ಅಕ್ಕನ‌ ಮಗಳ‌ ಮದುವೆ ವಾರದ ಹಿಂದೆ ನಡೆದಿದ್ದು, ಈ ಹಿನ್ನಲೆಯಲ್ಲಿ ಬ್ಯಾಂಕ್ ನ ಲಾಕರ್ ನಲ್ಲಿಟ್ಟಿದ್ದ ಬಂಗಾರವನ್ನು ಮನೆಗೆ ತಂದಿದ್ದರು. ಅಬೀದ್ ಅವರು ಅಡಕೆ ವ್ಯಾಪಾರಿಯಾಗಿದ್ದು ಅಡಕೆ ವ್ಯವಹಾರದ ಹಣವನ್ನೂ ನಿನ್ನೆ ಮನೆಗೆ ತಂದಿದ್ದರು.

Advertisement

ಕೊಣಾಜೆ ಪೊಲೀಸರು ಸ್ಥಳದಲ್ಲಿ ಇದ್ದು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸಲಿದ್ದಾರೆ.

ಇದನ್ನೂ ಓದಿ: ಚಾರುಕೊಟ್ಟಿಗೆ: ಸಂಪೂರ್ಣ ಬತ್ತಿ ಹೋದ ಕುರುವಾಡಿ ಮದಗ

ಕಳವಾದ ಚಿನ್ನಾಭರಣಗಳ ಮೌಲ್ಯ 20 ಲಕ್ಷಕ್ಕೂ ಅಧಿಕ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next