Advertisement
ಭಾರತವೀಗ ತವರಿನಲ್ಲಿ ಸತತ 11 ಟೆಸ್ಟ್ ಸರಣಿ ಗೆದ್ದು ವಿಶ್ವದಾಖಲೆ ನಿರ್ಮಿಸಿರುವುದು ಇತಿಹಾಸ. ಜಿಂಬಾಬ್ವೆ, ಅಫ್ಘಾನಿಸ್ತಾನಂಥ ಸಾಮಾನ್ಯ ತಂಡಗಳಿರಲಿ, ಬಲಿಷ್ಠ ಪಡೆಯೆಂದೇ ಗುರುತಿಸಲ್ಪಡುತ್ತಿದ್ದ ದಕ್ಷಿಣ ಆಫ್ರಿಕಾ ಕೂಡ ಮೊನ್ನೆ ವೈಟ್‌ವಾಷ್ ಅನುಭವಿಸಿಕೊಂಡು ತವರಿಗೆ ಮರಳಿತು. ಭಾರತವನ್ನು ಅವರದೇ ಅಂಗಳದಲ್ಲಿ ಮಣಿಸುವುದು, ಸರಣಿ ಗೆಲ್ಲುವುದು ಸುಲಭವಲ್ಲ ಎಂಬುದು ಮತ್ತೂಮ್ಮೆ ಸಾಬೀತಾಯಿತು. ಭಾರತ ಕೊನೆಯ ಸಲ ತವರಿನಲ್ಲಿ ಟೆಸ್ಟ್ ಸರಣಿ ಸೋತದ್ದು 2012-13ರಷ್ಟು ಹಿಂದೆ, ಇಂಗ್ಲೆಂಡ್ ವಿರುದ್ಧ. ಅನಂತರ ಆಡಿದ ಎಲ್ಲ 11 ಟೆಸ್ಟ್ ಸರಣಿಗಳಲ್ಲೂ ಭಾರತ ತಂಡ ಜಯಭೇರಿ ಮೊಳಗಿಸಿದೆ.
Related Articles
Advertisement
ವಿಲಿಯಮ್ಸನ್ ನಾಯಕ: ಮಧ್ಯಮ ಕ್ರಮಾಂಕದ ಹುರಿಯಾಳುಗಳೆಂದರೆ ಕೇನ್ ವಿಲಿಯಮ್ಸನ್, ಸ್ಟೀವನ್ ಸ್ಮಿತ್ ಮತ್ತು ಜೋ ರೂಟ್. ಇವರಲ್ಲಿ ವಿಲಿಯಮ್ಸನ್‌ಗೆ ನಾಯಕತ್ವ ನೀಡಲಾಗಿದೆ. ಮಧ್ಯಮಕ್ರಮಾಂಕದ ಬದಲಿ ಕ್ರಿಕೆಟಿಗರನ್ನಾಗಿ ಮುಶ್ಫಿಕರ್ ರಹೀಂ, ಬಾಬರ್ ಆಜಂ ಅವರನ್ನು ಗುರುತಿಸಲಾಗಿದೆ. ಪರಿಪೂರ್ಣ ಆಲ್‌ರೌಂಡರ್‌ಗಳಾಗಿ ಕಣಕ್ಕಿಳಿಯಲು ಬೆನ್ ಸ್ಟೋಕ್ಸ್, ಶಕಿಬ್ ಅಲ್ ಹಸನ್ ಅವರಿಗಿಂತ ಉತ್ತಮ ಆಯ್ಕೆ ಇಲ್ಲ. ಸ್ಟ್ರೈಕ್ ಬೌಲರ್‌ಗಳಿಗೆ ಬಹಳಷ್ಟು ಆಯ್ಕೆಗಳಿವೆ.
ಆದರೆ ಪ್ಯಾಟ್ ಕಮಿನ್ಸ್ ಮತ್ತು ಜೋಫ್ರಾ ಆರ್ಚರ್ ಅವರಿಗೆ ಮೊದಲ ಆದ್ಯತೆ ನೀಡಲಾಗಿದೆ. ಸ್ಪರ್ಧೆಯಲ್ಲಿರುವ ಉಳಿದವರೆಂದರೆ ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್‌ವುಡ್, ಕ್ಯಾಗಿಸೊ ರಬಾಡ, ಜೇಸನ್ ಹೋಲ್ಡರ್. ಭಾರತದ್ದು ತಿರುವುಪಡೆಯುವ ಅಂಕಣ ಆಗಿರುವುದರಿಂದ ಸ್ಪಿನ್ನರ್‌ಗಳ ಆಯ್ಕೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ. ಇಲ್ಲಿ ಅವಕಾಶ ಪಡೆದವರು ನಥನ್ ಲಿಯೋನ್ ಮತ್ತು ರಶೀದ್ ಖಾನ್. ಮೀಸಲು ಸ್ಪಿನ್ನರ್ ಆಗಿರುವವರು ಯಾಸಿರ್ ಶಾ. ಮನಸ್ಸಿದ್ದರೆ ಈ ವಿಶ್ವ ಇಲೆವೆನ್ ಭಾರತದಲ್ಲಿ ಟೆಸ್ಟ್ ಆಡಲು ಬರಲಿ, ಅವರನ್ನೂ ಬಗ್ಗುಬಡಿಯುತ್ತೇವೆ ಎಂದು ಕೊಹ್ಲಿ ತಂಡ ಸವಾಲೆಸೆದರೆ ಅಚ್ಚರಿ ಇಲ್ಲ!
ವಿಶ್ವ ಟೆಸ್ಟ್ 11ರ ಬಳಗ: ದಿಮುತ್ ಕರುಣರತ್ನೆ, ಟಾಮ್ ಲ್ಯಾಥಂ (ವಿ.ಕೀ.), ಕೇನ್ ವಿಲಿಯಮ್ಸನ್ (ನಾಯಕ), ಸ್ಟೀವನ್ ಸ್ಮಿತ್, ಜೋ ರೂಟ್, ಬೆನ್ ಸ್ಟೋಕ್ಸ್, ಶಕಿಬ್ ಅಲ್ ಹಸನ್, ಪ್ಯಾಟ್ ಕಮಿನ್ಸ್, ಜೋಪ್ರಾ ಆರ್ಚರ್, ನಥನ್ ಲಿಯೋನ್, ರಶೀದ್ ಖಾನ್.
* ಎಚ್.ಪ್ರೇಮಾನಂದ ಕಾಮತ್