Advertisement
ನೈಜೀರಿಯಾ ಪ್ರವಾಸದಲ್ಲಿರುವ ಮೋದಿ, ಅಲ್ಲಿನ ಭಾರತೀಯ ಸಮುದಾಯದವರನ್ನುದ್ದೇಶಿಸಿ ರವಿವಾರ ಭಾಷಣ ಮಾಡಿದರು. “ಸನ್ನು ನೈಜೀರಿಯಾ’ (ನಮಸ್ತೆ) ಎಂದು ಭಾಷಣ ಆರಂಭಿಸಿದ ಅವರು, ಇತ್ತೀಚಿನ ವರ್ಷಗಳಲ್ಲಿ ಭಾರತ ಸಾಧಿಸಿರುವ ಅಭಿವೃದ್ಧಿ ಮತ್ತು ಭಾರತ ಹಾಗೂ ಆಫ್ರಿಕಾ ದೇಶಗಳ ನಡುವಿನ ಸಂಬಂಧದ ಬಗ್ಗೆ ಮಾತನಾಡಿದರು.
Related Articles
Advertisement
ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾ ಡುವ ಮೊದಲು ನೈಜಿರಿಯಾ ಅಧ್ಯಕ್ಷ ಬೋಲಾ ಅಹ್ಮದ್ ತಿನುಡು ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಕೃಷಿ, ಸಾರಿಗೆ, ಔಷಧ, ಮರುಬಳಕೆ ಇಂಧನ ಮತ್ತು ಡಿಜಿಟಲ್ ಪರಿವರ್ತನೆಗೆ ಸಹಕಾರ ನೀಡುವುದಾಗಿ ಘೋಷಿಸಿದ್ದಾರೆ. ಸೋಮ ವಾರ ಪ್ರಧಾನಿ ಬ್ರೆಜಿಲ್‌ಗೆ ಪ್ರಯಾಣ ಕೈಗೊಳ್ಳಲಿದ್ದಾರೆ. ಬಳಿಕ ನ.19ರಿಂದ ಗಯಾನಕ್ಕೆ ಪ್ರಯಾಣಿಸಲಿದ್ದಾರೆ.
ಮೋದಿಗೆ ನೈಜೀರಿಯಾದ2ನೇ ಅತ್ಯುನ್ನತ ಗೌರವ
ನೈಜೀರಿಯಾದ 2ನೇ ಅತ್ಯುನ್ನದ ನಾಗರಿಕ ಗೌರವ ಎನಿಸಿಕೊಂಡಿರುವ “ದ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದ ನೈಗರ್’ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ. ಇದರೊಂದಿಗೆ ಮೊದಿ ಅವರು ಈ ಗೌರವ ಸ್ವೀಕರಿಸಿದ 2ನೇ ವಿದೇಶಿ ನಾಯಕ ಎನಿಸಲಿದ್ದಾರೆ. 1969ರಲ್ಲಿ ಬ್ರಿಟನ್ ರಾಣಿ ಎಲಿಜಬೆತ್ ಈ ಪುರಸ್ಕಾರಕ್ಕೆ ಭಾಜನರಾಗಿದ್ದರು. ಈ ಪುರಸ್ಕಾರ ಸ್ವೀಕರಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಯಾವುದೇ ದೇಶದಿಂದ ಮೋದಿ ಅವರಿಗೆ ದೊರೆತ ಅತ್ಯುನ್ನತ ನಾಗರಿಕ ಪ್ರಶಸ್ತಿಗಳ ಸಂಖ್ಯೆ 17ಕ್ಕೇರಿಕೆಯಾಗಿದೆ.