Advertisement
ಕೂಟದುದ್ದಕ್ಕೂ ಭಾರತದ ವನಿತೆಯರು ಅಮೋಘ ಪ್ರದ ರ್ಶನ ಕಾಯ್ದುಕೊಂಡು ಬಂದಿ ದ್ದಾರೆ. ಎಲ್ಲ ವಿಭಾಗಗಳಲ್ಲೂ ಮೇಲುಗೈ ಸಾಧಿಸಿ ಸರ್ವಾಂ ಗೀಣ ಪ್ರದರ್ಶನ ನೀಡಿದ್ದಾರೆ. ವಿಶ್ವ ರ್ಯಾಂಕಿಂಗ್ನಲ್ಲಿ 9ನೇ ಸ್ಥಾನದಲ್ಲಿರುವ ಭಾರತ ಆಡಿದ ಐದೂ ಪಂದ್ಯಗಳಲ್ಲಿ ಅಧಿಕಾರ ಯುತ ಜಯ ಸಾಧಿಸಿದೆ. ಇದರಲ್ಲಿ ಮಹತ್ವದ ಗೆಲುವು ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಚೀನ ವಿರುದ್ಧ ದಾಖಲಾಗಿತ್ತು.
“ನಮ್ಮವರು ಆಕ್ರಮಣಕಾರಿ ಹಾಗೂ ಅಷ್ಟೇ ರಕ್ಷಣಾತ್ಮಕ ಆಟದ ಮೂಲಕ ಗಮನ ಸೆಳೆದಿದ್ದಾರೆ. ಎದುರಾಳಿಯ ಸಾಮರ್ಥ್ಯ ಹಾಗೂ ದೌರ್ಬಲ್ಯವನ್ನು ಅರಿತಾಗ ಕಾರ್ಯತಂತ್ರದಲ್ಲಿ ದೊಡ್ಡ ಯಶಸ್ಸು ಸಾಧ್ಯ. ನಮ್ಮ ಹುಡುಗಿ ಯರ ಈವರೆಗಿನ ಸಾಧನೆ ಯನ್ನು ಪ್ರಶಂಸಿಸಲೇ ಬೇಕು. ಆದರೆ ಸೆಮಿಫೈನಲ್ ಎಂಬುದು ಬೇರೆಯೇ ಪಂದ್ಯ. ಇಲ್ಲಿ ಯಾವ ನಿರ್ಲಕ್ಷ್ಯವೂ ಸಲ್ಲದು. ಜಪಾನ್ನಿಂದ ಪ್ರಬಲ ಹೋರಾಟ ಕಂಡುಬರಬಹುದು’ ಎಂಬು ದಾಗಿ ಕೋಚ್ ಹರೇಂದ್ರ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಯುವ ಡ್ರ್ಯಾಗ್ಫ್ಲಿಕರ್ ದೀಪಿಕಾ ಈ ಕೂಟದಲ್ಲಿ ಅಮೋಘ ನಿರ್ವಹಣೆ ನೀಡಿದ್ದು, ಕೂಟದಲ್ಲೇ ಸರ್ವಾಧಿಕ 10 ಗೋಲು ಬಾರಿಸಿದ್ದಾರೆ. ಫಾರ್ವರ್ಡ್ ಆಟಗಾರ್ತಿ ಯರಾದ ಶರ್ಮಿಳಾದೇವಿ, ಸಂಗೀತಾ ಕುಮಾರಿ, ಪ್ರೀತಿ ದುಬೆ, ಲಾಲ್ರೆಮಿÕಯಾಮಿ ಅವರ ಆಟ ಅಮೋಘ ಮಟ್ಟದ ಲ್ಲಿದೆ. ಉದಿತಾ, ಸುಶೀಲಾ ಚಾನು ಮತ್ತು ವೈಷ್ಣವಿ ವಿಟಲ್ ಫಾಲ್ಕೆ, ನಾಯಕಿ ಸಲೀಮಾ ಟೇಟೆ ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
Related Articles
Advertisement