Advertisement
ಸದ್ಯ ಉದ್ಯಾನವನದಲ್ಲಿ 95 ಪ್ರಭೇದದ ಸುಮಾರು 2000 ಸಾವಿರ ಪ್ರಾಣಿ, ಪಕ್ಷಿ, ಸರಿಸೃಪಗಳಿವೆ. ಇದರಲ್ಲಿ ವಿದೇಶದಿಂದ ತರಿಸಿಕೊಂಡಿರುವ ಜಿಬ್ರಾ ಕೂಡ ಸೇರಿದೆ. ಇತ್ತೀಚೆಗೆ ಮೈಸೂರು ಮೃಗಾಲಯದಲ್ಲಿ ಒಂದು ಜಿರಾಫೆ ತಂದು ಪ್ರವಾಸಿಗರನ್ನು ಸೆಳೆದಿದ್ದ ಉದ್ಯಾನವನದ ಅಧಿಕಾರಿಗಳು, ದಕ್ಷಿಣ ಆಫ್ರಿಕಾದಿಂದ ಒಂದು ಗಂಡು, ಒಂದು ಹೆಣ್ಣು ಬಿಳಿ ಸಿಂಹಗಳನ್ನು ಇದರ ಜೊತೆಗೆ ಭಾರತದ ಕಾಡಹಸುವನ್ನು ಹೋಲುವ (ನಿಲ್‌ಗಾಯ್) ಐದು ಈಲಂಡ್ಸ್ ಪ್ರಾಣಿಗಳನ್ನು ವಿಮಾನದ ಮೂಲಕ ತರಿಸಿಕೊಳ್ಳುವ ಸಿದ್ಧªತೆಗಳು ಭರದಿಂದ ಸಾಗಿವೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹಲವು ವರ್ಷಗಳ ಹಿಂದೆ ವಿಮಾನಯಾನದಲ್ಲಿ ಲಂಡನ್ ಟೈಗರ್‌ಗಳನ್ನು ತರಿಸಿಕೊಳ್ಳಲಾಗಿತ್ತು. ಅದಾದ ಬಳಿಕ ಕಳೆದ ಒಂದು ವರ್ಷದ ಹಿಂದೆ 4 ಜಿಬ್ರಾಗಳನ್ನು ವಿಮಾನ ಯಾನದ ಮೂಲಕ ತರಿಸಿಕೊಳ್ಳಲಾಗಿತ್ತು. ಸದ್ಯ ಬಿಳಿ ಸಿಂಹ ಮತ್ತು ಈಲಂಡ್ಸ್ ಪ್ರಾಣಿಗಳನ್ನು ಬರಮಾಡಿಕೊಳ್ಳಲಾಗುತ್ತಿದೆ.
Related Articles
Advertisement
ಆದರೆ, ಒಂದು ದೇಶದಿಂದ ಮತ್ತೂಂದು ದೇಶಕ್ಕೆ ವನ್ಯಜೀವಿಗಳನ್ನು ಸಾಗಿಸಬೇಕಾದರೆ ಮುಖ್ಯವಾಗಿ ಡಿಜಿಎಫ್ಟಿ ( ಡೈರೆಕ್ಟರ್ ಜನರಲ್ ಆಫ್ ಫಾರಿನ್ ಟ್ರೇಡ್) ಅನುಮತಿ ಅವಶ್ಯ. ಇದಕ್ಕಾಗಿ ಕಳೆದ 4 ತಿಂಗಳ ಹಿಂದೆಯೇ ಮನವಿ ಮಾಡಲಾಗಿದೆ. ಸದ್ಯದಲ್ಲೇ ಅನುಮತಿ ಸಿಗುವ ಸಾಧ್ಯತೆ ಇದೆ. ಡಿಜಿಎಫ್ಟಿ ಅನುಮತಿ ಸಿಕ್ಕ ಬಳಿಕ ಪ್ರಾಣಿಗಳನ್ನು ಸಾಗಿಸುವ ಸಿದ್ಧತೆ ಹವಾಮಾನ ಎಲ್ಲವನ್ನು ಗಮನಿಸಿ ನಂತರ ವಿಮಾನ ಪ್ರಯಾಣಕ್ಕೆ ಅನುವು ಮಾಡಿಕೊಳ್ಳಬೇಕು ಇದೆಲ್ಲದಕ್ಕೂ ಎರಡು ತಿಂಗಳು ಹಿಡಿಯಬಹುದು ಎಂದು ಮೂಲಗಳಿಂದ ತಿಳಿದು ಬಂದಿದೆ. ಮೃಗಾಲಯಕ್ಕೆ ಬರುವ ಪ್ರವಾಸಿಗರ ದೃಷ್ಟಿಯಿಂದ ಹಾಗು ಮತ್ತಷ್ಟು ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ದೇಶಿ ಪ್ರಾಣಿಗಳನ್ನು ತರಿಸಿಕೊಳ್ಳುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಆರ್.ಗೋಕುಲ್ ತಿಳಿಸಿದರು.
ಮೊದಲ ಹಂತವಾಗಿ ಈಲಂಡ್ಸ್ ಎಂಬ ನಿಲ್‌ಗಾಯ್ ಹೊಲುವ ದಕ್ಷಿಣ ಆಫ್ರಿಕಾದ ಪ್ರಾಣಿಗಳನ್ನು ವಿಮಾನದ ಮೂಲಕ ತರಿಸಿಕೊಳ್ಳಲಾಗುತ್ತಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಅನುಮತಿ ಸಿಕ್ಕಿದ್ದು ಇನ್ನೊಂದೆರಡು ಅನುಮತಿಗಾಗಿ ಕಾಯುತ್ತಿದ್ದೇವೆ. ಅದೂ ಸಿಕ್ಕ ಕೂಡಲೆ ಪ್ರಾಣಿಗಳನ್ನು ತರಿಸಿಕೊಳ್ಳುತ್ತೇವೆ ಎಂದು ಹೇಳಿದರು. ಬಿಳಿ ಸಿಂಹಗಳನ್ನು ತರಿಸಿಕೊಳ್ಳುವ ಪ್ರಸ್ತಾಪ ಕೂಡ ಇದೆ. ಸದ್ಯ ಮೊದಲ ಹಂತವಾಗಿ ಈಲಂಡ್ಸ್ ತರಿಸಿಕೊಂಡು ನಂತರ ಬಿಳಿ ಸಿಂಹಗಳ ಪ್ರಯತ್ನ ಮಾಡಲಾಗುವುದು. ಸದ್ಯ ಮೃಗಾಲಯದ ಆವರಣದೊಳಗಿನ ಜಿರಾಫೆ, ಜಿಬ್ರಾ ಇರುವ ಭಾಗದಲ್ಲೇ ಬಯಲು ಆಲಯ ನಿರ್ಮಾಣವಾಗಿದ್ದು ಇಲ್ಲೇ ಈಲಂಡ್ಸ್ ಪ್ರಾಣಿಗಳಿಗೆ ಆಶ್ರಯ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿರಾಫೆ, ಜಿಬ್ರಾ, ಸಹ ದಕ್ಷಿಣ ಆಫ್ರಿಕಾದ ಪ್ರಾಣಿಗಳು. ಹೀಗಾಗಿ ಎಲ್ಲವನ್ನೂಒಟ್ಟಿಗೆ ನೋಡುವ ಅವಕಾಶವನ್ನು ಪ್ರವಾಸಿಗರಿಗೆ ಮಾಡಿಕೊಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. * ಮಂಜುನಾಥ್ ಬನ್ನೇರುಘಟ್ಟ