Advertisement

ಮಹಿಳೆಯ ಹೊಟ್ಟೆ ಒಳಗಿತ್ತು 10 ಮಗು ತೂಕದ ಚೀಲ!

03:50 AM Mar 22, 2017 | Team Udayavani |

ಮೆಕ್ಸಿಕೋ ಸಿಟಿ: 24 ವರ್ಷದ ಆ ಮಹಿಳೆಯ ಹೊಟ್ಟೆಯಲ್ಲಿ 10 ಮಗು ಇದ್ದಷ್ಟು ತೂಕ ಇತ್ತು! ಚಂದ್ರನ ಮೇಲೆ ನಡೆದಂತೆ ಭಾರದ ಹೆಜ್ಜೆ ಇಡುತ್ತಿದ್ದ ಆಕೆ ಅಷ್ಟು ದಪ್ಪಗಿರಲು ಕಾರಣ ಅಂಡಾಶಯದ ಬೊಕ್ಕೆ (ಒವರಿಯನ್‌ ಸಿಸ್ಟ್‌). ವೈದ್ಯರ 157 ಸೆಂ.ಮೀ. ಗಾತ್ರದ ಆ ಪೊಳ್ಳು ಚೀಲವನ್ನು ಕೊನೆಗೂ ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆಯುವಲ್ಲಿ ಯಶಸ್ವಿಯಾದರು.

Advertisement

ಮೆಕ್ಸಿಕೋದ ಜನರಲ್‌ ಆಸ್ಪತ್ರೆಯ ವೈದ್ಯ ಡಾ. ಎರಿಕ್‌ ಹನ್ಸನ್‌ ಈ ಚಿಕಿತ್ಸೆಯನ್ನು ಯಶಸ್ವಿಯಾಗಿಸಿದ್ದು, 11 ತಿಂಗಳ ನಂತರ ಮಹಿಳೆ ಸಹಜ ಜೀವನಕ್ಕೆ ಮರಳಿದ್ದಾರೆ. ಕಳೆದ 6 ತಿಂಗಳಿಂದ ಓಡಾಡಲೂ ಆಗದೆ, ಉಸಿರಾಡಲಾಗದೆ, ಹಸಿವಾದರೂ ಹೊಟ್ಟೆಗೆ ಆಹಾರ ಸೇವಿಸಲು ಅಸಾಧ್ಯವಾಗಿ ಮಹಿಳೆಗೆ ಮರುಜೀವ ಬಂದಂತಾಗಿದೆ.

1902ರಲ್ಲಿ ಇಂಥದ್ದೇ ಪ್ರಕರಣ ಅಮೆರಿಕದಲ್ಲಿ ನಡೆದಿದ್ದು, ಅಂಡಾಶಯದ ಪೊಳ್ಳು ಚೀಲದಲ್ಲಿ ತುಂಬಿಕೊಂಡಿದ್ದ ನೀರನ್ನು ಹೊರಹಾಕಿ ಆಪರೇಶನ್‌ ನಡೆಸಲಾಗಿತ್ತು. ಆದರೆ, ಚೀಲದೊಳಗೆ ನೀರಿದ್ದೂ ಶಸ್ತ್ರಚಿಕಿತ್ಸೆ ನಡೆಸಿದ್ದು ಇದೇ ಮೊದಲು. ಮಹಿಳೆಯ ದೇಹದಿಂದ 33 ಕೆಜಿ ತೂಕದ ವಸ್ತು ಹೊರಬಿದ್ದಂತಾಗಿದೆ.

ಏನಿದು ಒವರಿಯನ್‌ ಸಿಸ್ಟ್‌?
20-30ರ ಆಸುಪಾಸಿನ ಮಹಿಳೆಯರನ್ನು ಕಾಡುವ ಸಮಸ್ಯೆ. ಇದನ್ನು ನಿಯಮಿತ ಅಲ್ಟ್ರಾ ಸೌಂಡ್‌ ಸ್ಕ್ಯಾನಿಂಗ್‌, ಎಂಆರ್‌ಐ, ಸಿಟಿ ಸ್ಕ್ಯಾನ್‌, ಗರ್ಭಧಾರಣೆ ಅಥವಾ ಕ್ಯಾನ್ಸರ್‌ ಶೋಧಕ ರಕ್ತಪರೀಕ್ಷೆಗಳ ಮೂಲಕ ಪತ್ತೆ ಹಚ್ಚುತ್ತಾರೆ. ಹೊಟ್ಟೆಯೊಳಗೆ ಈ ಅನಗತ್ಯ ಗಂಟು ಇದ್ದಾಗ, ಹೊಟ್ಟೆನೋವು, ಒತ್ತಡ, ಯೋನಿ ಮೂಲಕ ಸಣ್ಣ ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ. ಈ ಬೊಕ್ಕೆಗಳು ಹಲ್ಲು, ಕೂದಲು, ದ್ರವ, ಕೊಬ್ಬು, ಉಗುರುಗಳನ್ನು ಒಳಗೊಂಡಿರುತ್ತವೆ. ದೇಹಕ್ಕೆ ಅಪಾಯ ಅಲ್ಲದೆ ಇದ್ದರೂ ಆದಷ್ಟು ಬೇಗ ಇವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಸುವುದು ಉತ್ತಮ. ಕ್ರಮೇಣ ಇವು ಮಧುಮೇಹ, ಹೃದಯಾಘಾತ, ರಕ್ತದೊತ್ತಡದಂಥ ಕಾಯಿಲೆಗಳಿಗೂ ಕಾರಣ ಆಗಬಲ್ಲವು.

Advertisement

Udayavani is now on Telegram. Click here to join our channel and stay updated with the latest news.

Next