Advertisement

Udupi: ಹುಲ್ಲು ಕೊಯ್ಯುವ ಯಂತ್ರಕ್ಕೆ ಸಿಲುಕಿದ್ದ ಹೆಬ್ಬಾವಿಗೆ ಶಸ್ತ್ರಚಿಕಿತ್ಸೆ

03:20 PM Jan 01, 2025 | Team Udayavani |

ಉಡುಪಿ: ಇಲ್ಲಿನ ಆದಿ ಉಡುಪಿ ಪರಿಸರದಲ್ಲಿ ಹುಲ್ಲು ಕೊಯ್ಯುವ ಯಂತ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ 32 ಕೆಜಿ ತೂಕದ ಮತ್ತು 10 ಅಡಿ ಉದ್ದದ ಹೆಬ್ಟಾವನ್ನು ರಕ್ಷಿಸಿ ಶಸ್ತ್ರ ಚಿಕಿತ್ಸೆ ಮೂಲಕ ಗುಣಪಡಿಸಿದ್ದಾರೆ ಉಡುಪಿಯ ಉಚ್ಚು ಟ್ರಸ್ಟ್‌ನ ಉರಗಪ್ರೇಮಿಗಳು!

Advertisement

ನವೆಂಬರ್‌ 16ರಂದು ಆದಿ ಉಡುಪಿಯಲ್ಲಿ ಹೆಬ್ಟಾವೊಂದು ಹುಲ್ಲು ಕೊಯ್ಯುವ ಯಂತ್ರಕ್ಕೆ ಸಿಲುಕಿ ಗಾಯಗೊಂಡಿತ್ತು. ಸಾರ್ವಜನಿಕರ ಮಾಹಿತಿ ಮೇರೆಗೆ ಉಚ್ಚು ಟ್ರಸ್ಟ್‌ನ ಅಕ್ಷಯ್‌ ಶೇಟ್‌ ಅವರ ನೇತೃತ್ವ ತಂಡವು ಹಾವನ್ನು ರಕ್ಷಿಸಿತ್ತು. ಹಾವಿನ ದೇಹಕ್ಕೆ 15 ಸೆ.ಮೀ ಉದ್ದವಾದ ಗಾಯವಾಗಿತ್ತು. ಆಳದ ಗಾಯಗಳೂ ಇದ್ದವು. ಇದನ್ನು ಗಮನಿಸಿದ ಸದಸ್ಯರು ಅರಣ್ಯ ಇಲಾಖೆಯ ಸಹಕಾರದೊಂದಿಗೆ ಹಾವನ್ನು ಉಡುಪಿಯ ಸಮನ್ವಯಾ ಕ್ಲಿನಿಕ್‌ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.

ತಂಡದಲ್ಲಿರುವ ಪಶುವೈದ್ಯರಾದ ಡಾ| ಮೇಘನಾ ಮತ್ತು ಡಾ| ಯಶಸ್ವಿನಿ ಅವರ ಮಾರ್ಗದರ್ಶನದಲ್ಲಿ ಡಾ| ಅನಿರುದ್ಧ ಅವರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಶಸ್ತ್ರ ಚಿಕಿತ್ಸೆಗೆ ತೊಡಕಾಗಬಾರದೆಂಬ ಕಾರಣಕ್ಕೆ ಹೆಬ್ಟಾವಿಗೆ ಅನಸ್ತೇಶಿಯಾ ನೀಡಲಾಗಿತ್ತು. ಒಂದು ಗಂಟೆಯ ಅನಂತರ ಹೆಬ್ಟಾವು ಚೇತರಿಸಿಕೊಂಡಿತು. ಕೆಲವು ದಿನಗಳ ಆರೈಕೆ ಮಾಡಿ ಸಂಪೂರ್ಣ ಗುಣಮುಖವಾದ ಬಳಿಕ ಹಾವನ್ನು ಮರಳಿ ಕಾಡಿಗೆ ಬಿಡಲಾಗಿದೆ.

2 ವರ್ಷದ ಹಿಂದೆ ಆರಂಭ, ಸಾವಿರಾರು ಹಾವುಗಳ ರಕ್ಷಣೆ
ವೈದ್ಯರನ್ನೂ ಒಳಗೊಂಡಂತೆ ಹತ್ತು ಜನ ಸಮಾನ ಮನಸ್ಕ ಉರಗ ಪ್ರೇಮಿಗಳ ತಂಡವಾದ ಉಚ್ಚು ಟ್ರಸ್ಟ್‌ ಎರಡು ವರ್ಷಗಳ ಹಿಂದೆ ಆರಂಭಗೊಂಡಿದೆ. ಎರಡೇ ವರ್ಷದಲ್ಲಿ 1000ಕ್ಕೂ ಅಧಿಕ ಹಾವುಗಳನ್ನು ರಕ್ಷಣೆ ಮಾಡಿದೆ. ರಸ್ತೆ ಅಪಘಾತ, ಬಾವಿ, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಪ್ಲಾಸ್ಟಿಕ್‌ ನುಂಗಿ ತೊಂದರೆಕ್ಕೀಡಾಗುವ ಹಾವುಗಳನ್ನು ಆಸ್ಪತ್ರೆಗೆ ಕರೆತಂದು ಕರೆತಂದು ಅವುಗಳಿಗೆ ಚಿಕಿತ್ಸೆ ಕೊಡಿಸಿದೆ.

ಬೇರೆ ಬೇರೆ ವೃತ್ತಿಯಲ್ಲಿರುವ 10 ಜನರ ತಂಡ ಹಾವು ಹಿಡಿಯುವುದು, ಚಿಕಿತ್ಸೆ ಕೊಡಿಸುವುದರ ಜತೆಗೆ ಸಾರ್ವಜನಿಕರಿಗೆ ಹಾವುಗಳ ಬಗ್ಗೆ ಅರಿವನ್ನೂ ಮೂಡಿಸುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಹಾವುಗಳು ಅಪಾಯದಲ್ಲಿ ಸಿಲುಕಿದ್ದು ಕಂಡುಬಂದರೆ ಟ್ರಸ್ಟ್‌ ನಂಬರ್‌ಗೆ ಕರೆ (9964012206) ಮಾಡಬಹುದು.

Advertisement

ವೃತ್ತಿಗಿಂತ ಪ್ರವೃತ್ತಿಯಲ್ಲಿ ಹೆಚ್ಚು ಖುಷಿ
ಸಾಫ್ಟ್ವೇರ್‌ಎಂಜಿನಿಯರ್‌ ಆಗಿರುವ ನಾನು ಚಿಕ್ಕಂದಿನಿಂಲೂ ಪ್ರಾಣಿ ಮತ್ತು ಹಾವುಗಳ ಮೇಲೆ ಆಸಕ್ತಿಯಿತ್ತು. ತೊಂದರೆಯಲ್ಲಿ ಹಾವುಗಳನ್ನು ರಕ್ಷಿಸಬೇಕು ಎಂಬ ಉದ್ದೇಶದಿಂದ ಸಮಾನ ಮನಸ್ಕರ ತಂಡದೊಂದಿಗೆ ಉಚುf ಟ್ರಸ್ಟ್‌ ಪ್ರಾರಂಭಿಸಿದೆ. ಸ್ವಂತ ಖರ್ಚಿನಲ್ಲಿ ಇದೀಗ ಜಿಲ್ಲೆಯಾದ್ಯಂತ ಸಂಚಾರ ಮಾಡಿ ಹಾವು ರಕ್ಷಣಾ ಕಾರ್ಯದಲ್ಲಿ ನಮ್ಮ ತಂಡವು ಕೆಲಸ ಮಾಡುತ್ತಿದೆ. ಇದೊಂದು ದೇಶ ಸೇವೆ ಎಂದು ಭಾವಿಸಿ ಕೆಲಸ ಮಾಡುತ್ತಿದ್ದೇವೆ.
-ಅಕ್ಷಯ್‌ ಶೇಟ್‌, ಟ್ರಸ್ಟಿ.,  ಉಚ್ಫು ಟ್ರಸ್ಟ್‌ ಉಡುಪಿ

– ವಿಜಯಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next