Advertisement

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

01:14 PM Dec 23, 2024 | Team Udayavani |

ಬೆಂಗಳೂರು:  ಕರ್ನಾಟಕ ಖಾಸಗಿ ನರ್ಸಿಂಗ್‌ ಹೋಮ್‌ ನಿಯಂತ್ರಣ ತಿದ್ದುಪಡಿ ಕಾಯಿದೆ (ಕೆಪಿಎಂಇ ) ನೋಂದಣಿ ಮತ್ತು ಕುಂದು ಕೊರತೆ ಪ್ರಾಧಿಕಾರದ ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಡಿ.19ರಂದು ನಡೆದ ಸಭೆಯಲ್ಲಿ ಕೆಪಿಎಂಇ ನಿಯಮಗಳನ್ನು ಉಲ್ಲಂಘನೆ ಮಾಡಿರುವ 3 ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಎಫ್ಐಆರ್‌ ದಾಖಲಿಸಲು ಸೂಚಿಸಲಾಗಿದೆ.

Advertisement

ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಖಾಸಗಿ ವೈದ್ಯಕೀಯ ಸಂಸ್ಥೆಗಳು, ಆಸ್ಪತ್ರೆಗಳು, ಕ್ಲಿನಿಕ್‌ಗಳು, ಪುನರ್ವಸತಿ ಕೇಂದ್ರಗಳು ಕೆಪಿಎಂಇ ನಿಯಮ ಉಲ್ಲಂಘಿಸಿದ್ದು, ಆ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಜಿಲ್ಲಾಧಿಕಾರಿಗಳು ದಂಡ ವಿಧಿಸಿ, ಪ್ರಕರಣ ದಾಖಲಿಸಲು ಹಾಗೂ ಕಾನೂನು ಕ್ರಮ ಕೈಗೊಳ್ಳಲು ಆದೇಶಿಸಿದ್ದರು. ಸಭೆಯಲ್ಲಿ ಒಟ್ಟು 33 ಪ್ರಕರಣ ಮಂಡಿಸಿದ್ದು, ಅವುಗಳ ಪೈಕಿ 12 ಸಂಸ್ಥೆಗಳಿಗೆ 6.78 ಲಕ್ಷ ರೂ. ದಂಡ ವಿಧಿಸಿದ್ದಾರೆ. 3 ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಲು ಆದೇಶಿಸಿದ್ದಾರೆ.

ನಿಯಮ ಉಲ್ಲಂಘಿಸಿರುವ ಸಂಸ್ಥೆಗಳು: ತಿಗಳರಪಾಳ್ಯದ ಶ್ರೀ ವಿನಾಯಕ ಕ್ಲಿನಿಕ್‌ಗೆ ಜಿಲ್ಲಾ ಆರೋಗ್ಯ ಮತ್ತು ಕು.ಕ.ಅಧಿಕಾರಿಗಳು ಅ.15ರಂದು ಭೇಟಿ ನೀಡಿ ಪರಿಶೀಲಿಸಿದಾಗ ಕೆಪಿಎಂಇ ನೋಂದಣಿ ಪಡೆಯದೆ ಅಲೋಪತಿ ಚಿಕಿತ್ಸೆ ನೀಡುತ್ತಿರುವುದು ಕಂಡುಬಂದಿತ್ತು. ಹೀಗಾಗಿ ಕೆಪಿಎಂಇ ನಿಯಮಾನು ಸಾರ ಕ್ಲಿನಿಕ್‌ ಬಂದ್‌ ಮಾಡಿಸಲಾಗಿತ್ತು. ಈ ಕ್ಲಿನಿಕ್‌ನವರು ಕೆಪಿಎಂಇ ಕಾಯ್ದೆಯನ್ನು ವೈದ್ಯರಿಲ್ಲದೆ ಕ್ಲಿನಿಕ್‌ ನಡೆಸುತ್ತಿರುವುದರಿಂದ ಪ್ರಕರಣ ದಾಖಲಿಸಲು ಆದೇಶಿಸಲಾಗಿದೆ. ಇದೇ ಮಾದರಿಯಲ್ಲಿ ಎಸ್‌. ಸಿ.ರಸ್ತೆಯ ಮಧ್ಯಪಾನ ವಿಮುಕ್ತಿ ಕೇಂದ್ರ, ಹೊಂಗಸಂದ್ರದ ಚೇತನಾ ಕ್ಲಿನಿಕ್‌ದಲ್ಲೂ ನಿಯಮ ಉಲ್ಲಂಘಿಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next