Advertisement
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಯುವಕ, ಯುವತಿ, ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮಲ್ಲಿನ ಕಲಾ ಪ್ರತಿಭೆ ಪ್ರದರ್ಶಿಸಿದರು. ಕನ್ನಡದ ಸಾರಸ್ವತ ಲೋಕದ ಖ್ಯಾತಿವೆತ್ತ ದರಾ ಬೇಂದ್ರೆ, ಕುವೆಂಪು, ಡಾ| ಎಚ್.ಎಸ್. ವೆಂಕಟೇಶಮೂರ್ತಿ, ಡಾ| ಕೆ.ಎಸ್. ನರಸಿಂಹಸ್ವಾಮಿ ಮುಂತಾದ ಮೇರು ಕವಿಗಳ ಕವನಗಳಿಗೆ ಮೇಳದಲ್ಲಿನ ಸ್ಪರ್ಧಿಗಳು ಧ್ವನಿಯಾದರು.
Related Articles
Advertisement
ಎರಡು ದಿನಗಳ ಕಾಲ ನಡೆಯುವ ಯುವಜನ ಮೇಳದಲ್ಲಿ ಮೊದಲ ದಿನ ದಾವಣಗೆರೆ ತಾಲೂಕಿನ 82, ಹರಿಹರದ 25, ಹೊನ್ನಾಳಿಯ 39, ಹರಪನಹಳ್ಳಿಯ 20, ಚನ್ನಗಿರಿಯ 10 ಕಲಾವಿದರು ನೋಂದಣಿ ಮಾಡಿಕೊಂಡಿದ್ದರು. ಜಿಲ್ಲಾ ಮಟ್ಟದ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮುಳುಬಾಗಿಲಿನಲ್ಲಿ ಫೆ. 17 ರಿಂದ 19ರ ವರೆಗೆ ನಡೆಯುವ ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವರು.
ಮಾರ್ಚ್‌ನಲ್ಲಿ ಉಡುಪಿಯಲ್ಲಿ ರಾಜ್ಯ ಮಟ್ಟದ ಯುವಜನ ಮೇಳ ನಡೆಯಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಆರ್. ಶ್ರೀನಿವಾಸ್ ತಿಳಿಸಿದರು. ಯುವಜನ ಮೇಳದಲ್ಲಿ ಪಾಲ್ಗೊಂಡವರಿಗೆ ಪ್ರಮಾಣಪತ್ರ ಮಾತ್ರವೇ ನೀಡಲಾಗುತ್ತದೆ. ಇತರೆ ವೆಚ್ಚವನ್ನು ತಗ್ಗಿಸಿ, ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು.
ತಾವು ಈವರೆಗೆ ಸೇವೆ ಸಲ್ಲಿಸಿರುವ ಕಡೆ ನಗದು ಬಹುಮಾನ ನೀಡಲಾಗುತ್ತಿತ್ತು. ನಗದು ಬಹುಮಾನ ನೀಡಿದಲ್ಲಿ ಸ್ಪರ್ಧಿಗಳಿಗೆ ಉತ್ತೇಜನ ದೊರೆತಂತಾಗುತ್ತದೆ ಎಂದು ತಿಳಿಸಿದರು. ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಮಾಗಾನಹಳ್ಳಿ ಮಂಜುನಾಥ್, ರಾಜ್ಯ ಪ್ರಶಸ್ತಿ ಪಡೆದಿರುವ ಎಂ. ಯೋಗೇಶ್, ಡಿ.ಎಲ್. ಜಯರಾಜನಾಯ್ಕ, ಆರ್. ಶಿವಾನಂದನಾಯ್ಕ ಇತರರು ಇದ್ದರು.