Advertisement

ಮನ-ಗಗನದಲಿ ತ್ರಿವರ್ಣ ವೈಭವ

12:57 PM Aug 16, 2017 | Team Udayavani |

ನವಲಗುಂದ: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಉನ್ನತ ಹುದ್ದೆ ಪಡೆಯಲು ವಿದ್ಯಾರ್ಥಿಗಳು ಕಠಿಣ ಪರಿಶ್ರಮ ವಹಿಸಿದರೆ ಮಾತ್ರ ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಲು ಸಾಧ್ಯ ಎಂದು ಶಾಸಕ ಎನ್‌.ಎಚ್‌. ಕೋನರಡ್ಡಿ ಹೇಳಿದರು. ಇಲ್ಲಿನ ಮಾಡಲ್‌ ಹೈಸ್ಕೂಲಿನ ಆವರಣದಲ್ಲಿ ತಾಲೂಕಾಡಳಿತ ಏರ್ಪಡಿಸಿದ್ದ 71ನೇ ಸ್ವಾತಂತ್ರೊತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

Advertisement

ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸರಕಾರದಿಂದ ಕೊಡಲ್ಪಟ್ಟ ಲ್ಯಾಪ್‌ಟಾಪ್‌ ವಿತರಿಸಲಾಯಿತು. ತಿರ್ಲಾಪುರ ಗ್ರಾಮದ ಅಂಗವಾಡಿ ಕಾರ್ಯಕರ್ತೆ ಕವಿತಾ ಈರಡ್ಡಿ ಅವರನ್ನು ಉತ್ತಮ ಕಾರ್ಯಕರ್ತೆ ಎಂಬ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಅಳಗವಾಡಿ ಗ್ರಾಮದ ನಾರಾಯಣ ಕನಕರಡ್ಡಿ ಹಾಗೂ ಪುರಸಭೆ ನೂತನ ಅಧ್ಯಕ್ಷೆ ಅನಸೂಯಾ ಭೋವಿ ಅವರನ್ನು ಗೌರವಿಸಲಾಯಿತು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದವರಿಗೆ ಆರೋಗ್ಯ ಸುರಕ್ಷಾ ಕಾರ್ಡ್‌, ರೈತ ಕುಟುಂಬಗಳಿಗೆ ಮಾಸಾಶನ ಪ್ರಮಾಣಪತ್ರ ವಿತರಿಸಲಾಯಿತು. ಶಂಕರ ಕಾಲೇಜಿನ ಪ್ರೊ| ಎಸ್‌. ಎಸ್‌. ಕಾಡಮ್ಮನವರ ಉಪನ್ಯಾಸ ನೀಡಿದರು. 

ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ತಹಶೀಲ್ದಾರ ನವೀನ ಹುಲ್ಲೂರ ಧ್ವಜಾರೋಹಣ ನೆರವೇರಿಸಿದರು. ಕ್ಷೇತ್ರ ಶಿಕ್ಷಣಾ ಧಿಕಾರಿ ಅಶೋಕ ಭಜಂತ್ರಿ ಸ್ವಾಗತಿಸಿದರು. ತಾಪಂ ಉಪಾಧ್ಯಕ್ಷ ಯೋಗಪ್ಪ ಗೊಲ್ಲನಾಯಕರ, ಪುರಸಭೆ ಸದಸ್ಯರಾದ ಮಂಜುನಾಥ ಜಾಧವ, ಪ್ರಕಾಶ ಶಿಗ್ಲಿ, ಜೀವನ ಪವಾರ, ಹನಮಂತಪ್ಪ ಇಬ್ರಾಹಿಂಪುರ್‌, ನಾಗರಾಜ ಭಜಂತ್ರಿ ಇತರರಿದ್ದರು. 

ವಿವಿಧೆಡೆ: ಪುರಸಭೆ ಆವರಣದಲ್ಲಿ ನೂತನ ಅಧ್ಯಕ್ಷೆ ಅನುಸೂಯಾ ಭೋವಿ ಧ್ವಜಾರೋಹಣ ನೆರವೇರಿಸಿದರು. ಮುಖ್ಯಾ ಧಿಕಾರಿ ಉಮಾ ಪಾಳೇಗಾರ, ಉಪಾಧ್ಯಕ್ಷೆ ಶೋಭಾ ಗುಡರಾದ, ಮಾಜಿ ಅಧ್ಯಕ್ಷ ರಹಿಮಾನಸಾಬ ಧಾರವಾಡ, ಮಂಜುನಾಥ ಜಾಧವ, ನಾಗರಾಜ ಭಜಂತ್ರಿ, ಜೀವನ ಪವಾರ, ರಿಯಾಜ ಪೀರಜಾದೆ ಇತರರಿದ್ದರು. 

Advertisement

ಪಟ್ಟಣದ ಬಸವೇಶ್ವರ ನಗರದ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಾಜೇಸಾಬ ಕಿರೇಸೂರ ಧ್ವಜಾರೋಹಣ ನೆರವೇರಿಸಿದರು. ಪುರಸಭೆ ಸದಸ್ಯ ನಾಗರಾಜ ಭಜಂತ್ರಿ, ಮುಖ್ಯಾಧ್ಯಾಪಕ ಎಸ್‌.ಎಂ. ಬೆಂಚಿಗೇರಿ, ಬಸನಗೌಡ ಪಾಟೀಲ, ಬಸವರಾಜ ಹರ್ಲಾಪುರ, ಲಕ್ಷ್ಮೀ ತಿರಕೋಡಿ ಇತರರಿದ್ದರು.

ಸಹಕಾರಿ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಸಂಘದ ಅಧ್ಯಕ್ಷ ಸುರೇಶ ಅಣ್ಣಿಗೇರಿ ಧ್ವಜಾರೋಹಣ ನೆರವೇರಿಸಿದರು. ಸದಸ್ಯರಾದ ಅಡಿವೆಪ್ಪ ಶಿರಸಂಗಿ, ನಾಗಪ್ಪ ಭೋವಿ, ಫಕ್ಕಿರಪ್ಪ ಶೆಲ್ಲೆಣವರ, ಮಹಾತೇಶ ಹುಬ್ಬಳ್ಳಿ ಇದ್ದರು. ವಿವೇಕಾನಂದ ಕಾನ್ವೆಂಟ್‌ ಶಾಲೆಯಲ್ಲಿ ನರಗುಂದ ಶಾಸಕ ಬಿ.ಆರ್‌.  ಯಾವಗಲ್‌ ಧ್ವಜಾರೋಹಣ ನೆರವೇರಿಸಿದರು. ಸಲೀಮ ಕಾಲಾರಿ ಇತರರಿದ್ದರು. 

ಮಧ್ಯರಾತ್ರಿ ಧ್ವಜಾರೋಹಣ: ಪಟ್ಟಣದ ನೀಲಮ್ಮ ಕೆರೆ ಮುಂಭಾಗದಲ್ಲಿ ಸೋಮವಾರ ಮಧ್ಯರಾತ್ರಿ ಯುವ ಸಂಘಟನೆ ವತಿಯಿಂದ ಧ್ವಜಾರೋಹಣ ನಡೆಯಿತು. ಪುಂಡಲೀಕ ಮುದೋಳೆ ಧ್ವಜಾರೋಹಣ ನೆರವೇರಿಸಿದರು. ಪ್ರಭು ಇಬ್ರಾಹಿಂಪುರ, ಅಪ್ಪಣ್ಣ ಹಿರಗಣ್ಣವರ, ಬಸವರಾಜ ಮೀಸಿ, ಪ್ರಕಾಶ ಪಾಚಂಗಿ, ನಾರಾಯಣ ಕುರಹಟ್ಟಿ, ಮುನ್ನಾ ಬಿಜಾಪುರ, ಸುರೇಶ ಸಾಳಂಕಿ, ಬಸವರಾಜ ಮರಲಕ್ಕಣ್ಣವರ, ಮಹೇಶ ಬೆಳ್ಳಿ ಇತರರು ಇದ್ದರು.   

Advertisement

Udayavani is now on Telegram. Click here to join our channel and stay updated with the latest news.

Next