Advertisement

9 ತಿಂಗಳಲ್ಲಿ ಉಕ್ಕಿನ ಸೇತುವೆ ಪೂರ್ಣ

12:12 PM Feb 07, 2018 | |

ಬೆಂಗಳೂರು: ಬಿಬಿಎಂಪಿ ನಿರ್ಮಿಸುತ್ತಿರುವ ಉಕ್ಕಿನ ಸೇತುವೆ ಕಾಮಗಾರಿಯನ್ನು ಒಂಬತ್ತು ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಮೇಯರ್‌ ಆರ್‌.ಸಂಪತ್‌ರಾಜ್‌ ತಿಳಿಸಿದ್ದಾರೆ.

Advertisement

ಉಕ್ಕಿನ ಸೇತುವೆ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದ ಅವರು, ಜನರಿಗೆ ಅನುಕೂಲಕ್ಕಾಗಿ ಉಕ್ಕಿನ ಸೇತುವೆ ಕಾಮಗಾರಿ ನಡೆಸಲಾಗುತ್ತಿದೆ. ಅದರಂತೆ ಶಿವಾನಂದ ವೃತ್ತದಲ್ಲಿ 483 ಮೀ. ಉದ್ದ ಹಾಗೂ 15 ಮೀ. ಅಗಲದ 4 ಪಥಗಳ ಉಕ್ಕಿನ ಸೇತುವೆಯನ್ನು 19.85 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಸೇತುವೆಯು 16 ಕಂಬಗಳನ್ನು ಒಳಗೊಂಡಿರಲಿದೆ.

ಯೋಜನೆ ಪೂರ್ಣಗೊಂಡರೆ ಶೇಷಾದ್ರಿಪುರ ರೈಲ್ವೆ ಕೆಳಸೇತುವೆಯಿಂದ ರೇಸ್‌ಕೋರ್ಸ್‌ ಜಂಕ್ಷನ್‌ವರೆಗೆ ಒಟ್ಟು ಮೂರು ಮಾರ್ಗಗಳಲ್ಲಿ ಸಿಗ್ನಲ್‌ ಮುಕ್ತ ಸಂಚಾರ ಸಾಧ್ಯವಾಗಲಿದೆ ಎಂದು ಮಾಹಿತಿ ನೀಡಿದರು. ಉಪ ಮೇಯರ್‌ ಪದ್ಮಾವತಿ ನರಸಿಂಹಮೂರ್ತಿ, ಆಡಳಿತ ಪಕ್ಷದ ನಾಯಕ ಎಂ.ಶಿವರಾಜು, ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ಕೆ.ಟಿ.ನಾಗರಾಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next