Advertisement
ಒಟ್ಟು 2.2 ಕಿ.ಮೀ. ಉದ್ದದ ಈ ಸೇತುವೆಯ ಮಧ್ಯಭಾಗದಲ್ಲಿ 63 ಮೀ.ನಷ್ಟು ಅಗಲದಸೇತುವೆ ಸಂಪೂರ್ಣವಾಗಿ 22 ಮೀ.ನಷ್ಟು ಎತ್ತರಕ್ಕೆ ಏಳಲಿದೆ. ಈ ಸಮಯದಲ್ಲಿ ಪಾಕ್ ಜಲಸಂಧಿ
ಯಲ್ಲಿ ಸಾಗುವ ಹಡಗುಗಳು ಇದರಡಿ ಸಾಗಲಿವೆ. ರೈಲು ಬರುವ ಸಮಯದಲ್ಲಿ ಇದನ್ನು ಕೆಳಗಿಳಿಸಲಾಗುತ್ತದೆ.
ಪಂಬನ್ ದ್ವೀಪ ಮತ್ತು ಮಂಡಪಂ ನಡುವೆ 104 ವರ್ಷಗಳ ಹಿಂದೆ ನಿರ್ಮಿಸಲಾದ ಸೇತುವೆ ಈಗಾಗಲೇ ಇದ್ದು, ಇದು ಅಡ್ಡವಾಗಿ ತೆರೆದುಕೊಳ್ಳುವ ಮೂಲಕ ಹಡಗುಗಳಿಗೆ ದಾರಿ ಮಾಡಿಕೊಡುತ್ತಿತ್ತು.
ರೈಲು ಚಾಲನೆ ಯಶಸ್ವಿ: ಸೇತುವೆಯ ಕ್ಷಮತೆ ಪರೀಕ್ಷಿಸಲು ಶುಕ್ರವಾರ ಇದರ ಮೇಲೆ ರೈಲು ಓಡಿಸಲಾಗಿದ್ದು, ಸೇತುವೆಯ ಮೇಲೆ ರೈಲು ಗಂಟೆಗೆ 80 ಕಿ.ಮೀ. ವೇಗದಲ್ಲಿ ಚಲಿಸಿದೆ. ಈ ಮೂಲಕ ಹಿಂದಿನ ಸೇತುವೆಯಲ್ಲಿ ಚಲಿಸುವಾಗ ರೈಲುಗಳು ನಿಧಾನವಾಗಬೇಕಿದ್ದನ್ನು ತಪ್ಪಿಸಲಾಗಿದೆ. ನ.13 ಮತ್ತು 14ರಂದು ಮತ್ತೆರಡು ಪರೀಕ್ಷೆ ನಡೆಯಲಿದ್ದು, ಬಳಿಕ ಸೇತುವೆ ಲೋಕಾರ್ಪಣೆಯಾಗಲಿದೆ.
ಸೇತುವೆಯ ಉದ್ದ ಒಟ್ಟಾರೆ 2.2 ಕಿ.ಮೀ.
ಸೇತುವೆಯ 63 ಮೀ.ನಷ್ಟು ಭಾಗ ಪೂರ್ಣವಾಗಿ ಮೇಲೇಳುತ್ತದೆ
22 ಮೀ. ಎತ್ತರಕ್ಕೆ ಏರಿ ಹಡಗು ಸಾಗಲು ಅನುವು ಮಾಡಿಕೊಡುತ್ತದೆ
ಪರೀಕ್ಷೆಯ ಸಮಯದಲ್ಲಿ 80 ಕಿ.ಮೀ. ವೇಗದಲ್ಲಿ ಚಲಿಸಿದ ರೈಲು
ಮತ್ತೆರಡು ರೈಲು ಪರೀಕ್ಷೆ ನಡೆಸಿದ ಬಳಿಕ ಸೇತುವೆ ಲೋಕಾರ್ಪಣೆ