Advertisement

Railway;ನನೆಗುದಿಗೆ ಬಿದ್ದಿದ್ದ 9 ಯೋಜನೆಗಳಿಗೆ ವೇಗ: ಸೋಮಣ್ಣ

12:55 AM Nov 15, 2024 | Team Udayavani |

ಬೆಳಗಾವಿ: ರಾಜ್ಯದಲ್ಲಿ ನನೆಗುದಿಗೆ ಬಿದ್ದಿದ್ದ 11 ರೈಲ್ವೇ ಯೋಜನೆಗಳ ಪೈಕಿ ಇದುವರೆಗೆ 9 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಮುಂದಿನ ಮೂರು ವರ್ಷದೊಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಒಟ್ಟು 39 ಸಾವಿರ ಕೋಟಿ ರೂ. ವೆಚ್ಚದಲ್ಲಿ ಬಾಗಲಕೋಟೆ-ಕುಡಚಿ, ತುಮಕೂರು-ದಾವಣಗೆರೆ-ಚಿತ್ರ
ದುರ್ಗ ಮಾರ್ಗ ನಿರ್ಮಾಣ ಸೇರಿ 9 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. 50 ವರ್ಷದಲ್ಲಿ ಆಗದೇ ಇರುವ ಕೆಲಸ
ಗಳನ್ನು ಈ 10 ವರ್ಷದಲ್ಲಿ ಮಾಡಿ ದ್ದೇವೆ. ಧಾರವಾಡ-ಬೆಳಗಾವಿ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಚುರುಕು
ನೀಡಲಾಗಿದೆ. ಜನವರಿ/ಫೆಬ್ರವರಿಯಲ್ಲಿ ಭೂಮಿ ಹಸ್ತಾಂತರವಾಗಿ ಮಾರ್ಚ್‌ ನಲ್ಲಿ ಕಾಮಗಾರಿ ಆರಂಭಕ್ಕೆ ಟೆಂಡರ್‌ ಕರೆಯಲಾಗುವುದು ಎಂದರು.

ಬೆಳಗಾವಿ-ಧಾರವಾಡ ರೈಲು ಮಾರ್ಗದ ಕಾರ್ಯವನ್ನು 18ರಿಂದ 20 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next